ದೇಗುಲ ವ್ಯಾಪ್ತಿಯಲ್ಲಿ ಗೋ ಮಾಂಸ ನಿಷೇಧ : ಅಸ್ಸಾಂ ವಿಧಾನಸಭೆಯಲ್ಲಿ ಹೊಸ ಮಸೂದೆ
Team Udayavani, Jul 13, 2021, 7:05 AM IST
ಗುವಾಹಟಿ: ಅಸ್ಸಾಂನಲ್ಲಿ ದೇಗುಲಗಳ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಲು ರಾಜ್ಯ ಸರಕಾರ ಮುಂದಾಗಿದೆ. ಅದಕ್ಕಾಗಿ ಸಿಎಂ ಹಿಮಾಂತ ಬಿಸ್ವ ಶರ್ಮ ಅಸ್ಸಾಂ ಗೋ ಸಂರಕ್ಷಣ ಮಸೂದೆ 2021ನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಿದ್ದಾರೆ.
ಇದು ಅಂಗೀಕಾರಗೊಂಡರೆ 1950ರಲ್ಲಿ ಜಾರಿಯಾಗಿದ್ದ “ಅಸ್ಸಾಂ ಗೋ ಸಂರಕ್ಷಣ ಕಾಯ್ದೆ’ ರದ್ದಾಗಲಿದೆ. ಹೊಸ ಮಸೂದೆಯ ಇನ್ನೊಂದು ಅಂಶವೆಂದರೆ, ಅಸ್ಸಾಂನಲ್ಲಿ ಗೋವುಗಳನ್ನು ಸಾಗಿಸಲು ಸೂಕ್ತ ದಾಖಲೆಗಳನ್ನು ನೀಡಬೇಕು.