ಕೇಂದ್ರ ಸರಕಾರಿ ನೌಕರರ ಮನೆ ಬಾಡಿಗೆ ಭತ್ತೆ ಹೆಚ್ಚಳ
Team Udayavani, Jul 18, 2021, 7:10 AM IST
ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರ ಮನೆ ಬಾಡಿಗೆ ಭತ್ತೆ(ಎಚ್ಆರ್ಎ) ಹೆಚ್ಚಿಸಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗಷ್ಟೇ ಈ ನೌಕರರ ತುಟ್ಟಿ ಭತ್ತೆ ಹೆಚ್ಚಿಸಲಾಗಿತ್ತು.
ಪರಿಷ್ಕೃತ ಎಚ್ ಆರ್ಎ ಆ. 1ರಿಂದ ಜಾರಿಗೆ ಬರಲಿದ್ದು, ಶೇ. 1ರಿಂದ ಶೇ. 3ರ ವರೆಗೆ ಹೆಚ್ಚಲಿದೆ. 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿರುವ ನೌಕರರಿಗೆ ಶೇ. 3, ಐದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಇರುವವರಿಗೆ ಶೇ. 2 ಮತ್ತು 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳ ನಿವಾಸಿಗಳಿಗೆ ಶೇ. 1ರಷ್ಟು ಎಚ್ ಆರ್ಎ ಏರಿಕೆ ಮಾಡಲಾಗಿದೆ.
ಕೇಂದ್ರ ಸರಕಾರಿ ನೌಕರರ ಮೂಲ ವೇತನದ ಆಧಾರದ ಮೇಲೆ ಈ ಎಚ್ ಆರ್ಎ ನಿಗದಿ ಮಾಡಲಾಗುತ್ತದೆ.