ನಗರಗಳಲ್ಲಿ ಸಂಪೂರ್ಣ ಅನ್‌ಲಾಕ್‌ ಜಾರಿಗೊಳಿಸಲು ಸಾಧ್ಯವಿಲ್ಲ: ಗೌರವ್‌ ಗುಪ್ತ


Team Udayavani, Jun 25, 2021, 8:40 PM IST

ನಗರಗಳಲ್ಲಿ ಸಂಪೂರ್ಣ ಅನ್‌ಲಾಕ್‌ ಜಾರಿಗೊಳಿಸಲು ಸಾಧ್ಯವಿಲ್ಲ: ಗೌರವ್‌ ಗುಪ್ತ

ಬೆಂಗಳೂರು: ಕೊರೊನಾ ಸೋಂಕು ಇಳಿಮುಖವಾದರೂ ಸಹ ನಗರದಲ್ಲಿ ಸಂಪೂರ್ಣ ಅನ್‌ಲಾಕ್‌ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲ್‌ಗ‌ಳು, ಚಿತ್ರಮಂದಿರಗಳ ಪ್ರಾರಂಭ, ಮದುವೆ ಸಮಾರಂಭಗಳಿಗೆ ವಿನಾಯಿತಿ ಕೇಳುವುದು ಸ್ವಾಭಾವಿಕ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಮತ್ತಷ್ಟು ಸೇವೆಗಳಿಗೆ ವಿನಾಯಿತಿ ನೀಡುವ ಪ್ರಸ್ತಾಪ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಗರದ ಪ್ರಸ್ತುತ ಸನ್ನಿವೇಶ ಹಾಗೂ ಕಳೆದ ಎರಡು ತಿಂಗಳ ಪರಿಸ್ಥಿತಿಯ ಅನುಭವದಿಂದ ಮತ್ತಷ್ಟು ಎಚ್ಚರವಹಿಸಬೇಕಿದ್ದು, ಯಾವುದೇ ಕಾರಣಕ್ಕೂ ನಗರದಲ್ಲಿ ಸಂಪೂರ್ಣ ಅನ್‌ಲಾಕ್‌ ಮಾಡಲು ಸಾಧ್ಯವಿಲ್ಲ. ಮೂರನೇ ಹಂತದ ಅನ್‌ಲಾಕ್‌ನಲ್ಲಿ ಜನದಟ್ಟಣೆ ಸೇರುವ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಮನರಂಜನೆ ಪಡೆಯುವುದಕ್ಕೆ ವಿನಾಯಿತಿ ಪಡೆಯಬೇಕೆಂಬ ಆಸೆ ಎಲ್ಲರಲ್ಲೂ ಇದೆ. ಆದರೆ, ಇವುಗಳಿಗೆ ಅನುಮತಿ ನೀಡಿದರೆ ಮತ್ತಷ್ಟು ಆತಂಕ ಉಂಟಾಗಲಿದೆ. ಈಗಾಗಲೇ ನಾವು 3ನೇ ಅಲೆ ಭೀತಿಯನ್ನು ಎದುರಿಸುತ್ತಿದ್ದು, ಕೆಲಕಾಲ ಇದೇ ರೀತಿ ಇರಲಿದೆ ಎಂದರು.

ಡೆಲ್ಟಾ ಪ್ಲಸ್‌ ಸಂಬಂಧಿಸಿದಂತೆ ನಗರದಲ್ಲಿ ವೈರಾಣು ಅನುಕ್ರಮಣಿಕೆ ಪರೀಕ್ಷೆಗೆ ಒತ್ತು ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯಲ್ಲಿರುವ ರೂಪಾಂತರ ವೈರಾಣುವಿನ ವಂಶವಾಹಿ ಪತ್ತೆ ಮಾಡಲಾಗುತ್ತಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ಸೋಂಕಿನ ಗುಣಲಕ್ಷಣಗಳು, ದುಷ್ಪರಿಣಾಮಗಳ ಕುರಿತು ತಜ್ಞರು ಅಧ್ಯಯನ ನಡೆಸುತ್ತಿ¨ªಾರೆ. ಆರೋಗ್ಯ ತಜ್ಞರು ನೀಡುವ ಶಿಫಾರಸುಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ಅಲ್ಲದೆ, ಜನರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ :ದಾವಣಗೆರೆ :  ಕೋವಿಡ್ ನಿಂದ ಚೇತರಿಸಿಕೊಂಡವರೇ ಹೆಚ್ಚು..!

ವೈರಾಣು ರೂಪಾಂತರ ಸ್ವಾಭಾವಿಕ:
ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಡೆಲ್ಟಾ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಡೆಲ್ಟಾ ಸೋಂಕಿತರನ್ನು ಗುರುತಿಸುವುದಕ್ಕೆ ಪಾಲಿಕೆಯಿಂದ ಕ್ರಮವಹಿಸಲಾಗುತ್ತಿದೆ. ಆದರೆ, ಡೆಲ್ಟಾ, ಡೆಲ್ಟಾ ಪ್ಲಸ್‌ ಹಾಗೂ ಇನ್ನಿತರ ಹೊಸ ರೂಪಾಂತರ ಸೋಂಕು ಕಂಡುಬರಬಹುದು. ವೈರಸ್‌ನಲ್ಲಿ ಬದಲಾವಣೆ ಮತ್ತು ರೂಪಾಂತರ ಸ್ವಾಭಾವಿಕ ಗುಣ. ಹಿಂದೆಯೂ ರೂಪಾಂತರ ಆಗಿದ್ದು, ಮುಂದೆಯೂ ಆಗಲಿದೆ. ಆದರೆ, ಜನರು ಆತಂಕಕ್ಕೆ ಒಳಗಾಗದೆ ಜಾಗೃತಿವಹಿಸಬೇಕು ಎಂದು ಸಲಹೆ ನೀಡಿದರು.

ನಿತ್ಯ ಎಂಟು ಸೋಂಕಿತರ ಪರೀಕ್ಷೆ:
ಕೊರೊನಾ ರೂಪಾಂತರ ಡೆಲ್ಟಾ ಪ್ಲಸ್‌ ಸೋಂಕಿನ ಅಪಾಯ, ಗುಣಲಕ್ಷಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ. ಪಾಲಿಕೆಯಿಂದ ಪ್ರತಿನಿತ್ಯ ಎಂಟು ಮಂದಿ ಸೋಂಕಿತರ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.