ಡ್ರಗ್ಸ್ ಪ್ರಕರಣ : ನೈಜಿರಿಯಾ ಪ್ರಜೆ ಸೇರಿ ಮೂವರ ಬಂಧನ
Team Udayavani, Sep 14, 2021, 8:45 PM IST
ಬೆಂಗಳೂರು : ಬಟ್ಟೆ ವ್ಯಾಪಾರದ ಜತೆಗೆ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ನೈಜಿರಿಯಾ ಪ್ರಜೆ ಸೇರಿ ಮೂವರನ್ನು ಕಾಡುಗೊಂಡನ ಹಳ್ಳಿ ಬಂಧಿಸಿದ್ದಾರೆ.
ನೈಜಿರಿಯಾ ಮೂಲದ ನಡುಬಾ(30), ಶಿವಾಜಿನಗರದ ಶಕೀರ್ (30) ಮತ್ತು ಹೆಣ್ಣೂರಿನ ರವಿಕುಮಾರ್ (29) ಬಂಧಿತರು. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಐದು ಗ್ರಾಂ ಎಂಡಿಎಂಎ, 150 ಮಾತ್ರೆಗಳು, ಒಂದು ಮೊಬೈಲ್, 2 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ನೈಜಿರಿಯಾ ಪ್ರಜೆ ನಡುಬಾ, ವ್ಯವಹಾರಿಕ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದು, ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಇತರೆ ಇಬ್ಬರು ಆರೋಪಿಗಳು ಟೀ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ನಡು ಬಾ, ವಿದೇಶದಿಂದ ಮಾದಕ ವಸ್ತು ತರಿಸಿ ಅವುಗಳನ್ನು ಶಕೀರ್ ಮತ್ತು ರವಿಕುಮಾರ್ ಮೂಲಕ ಮಾರಾಟ ಮಾಡಿಸುತ್ತಿದ್ದ. ಇತ್ತೀಚೆಗೆ ನಡುಬಾ, ಎಚ್ ಬಿಆರ್ ಲೇಔ ಟ್ನ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈತನ ವಿಚಾರಣೆಯಲ್ಲಿ ಇತರೆ ಇಬ್ಬರು ಆರೋಪಿಗಳ ಹೆಸರು ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ :ಜೈಲಲ್ಲಿದ್ದಾರೆ ಮಾಫಿಯಾ, ಗ್ಯಾಂಗ್ಸ್ಟರ್ಗಳು : ಎಸ್ಪಿಗೆ ಪ್ರಧಾನಿ ಮೋದಿ ಲೇವಡಿ