Desi Swara: ಅಲ್ಬನಿಯಾದ ಮಧುರ ನೆನಪುಗಳನ್ನಿತ್ತ ಕನ್ನಡಿಗರ ಪ್ರವಾಸ

ಸೋಜಿಗದ ಗಾಜಿನ ಅವತಾರಗಳು, ಧುಮ್ಮೆಂದು ಹರಿಯುವ ಸರೋವರಗಳು

Team Udayavani, Sep 9, 2023, 1:11 PM IST

Desi Swara: ಅಲ್ಬನಿಯಾದ ಮಧುರ ನೆನಪುಗಳನ್ನಿತ್ತ ಕನ್ನಡಿಗರ ಪ್ರವಾಸ

ಸುಮಾರು ಎರಡೂ ತಿಂಗಳುಗಳಿಂದ ನಡೆಸುತ್ತಿದ್ದ ತಯಾರಿ ಕೊನೆಗೂ ಕೈಗೂಡುವ ಸಮಯ ಬಂದಿತ್ತು. ಅಲ್ಬನಿಯಲ್ಲಿ ನೆಲೆಸಿರುವ ಕನ್ನಡ ಕೂಟದವರೆಲ್ಲ ಸೇರಿ ಪ್ರವಾಸ ಕೈಗೊಂಡಿದ್ದೇವು. ಪರದೇಶದಲ್ಲಿ ಬೇರೆ ಬೇರೆ ಊರಿನಲ್ಲಿ ನೆಲೆಸಿರುವವರು ಒಂದು ಕಡೆ ಸೇರಿ ಸಮಯ ಕಳೆಯುವುದೇ ಒಂಥರಾ ಖುಷಿ. ಪ್ರವಾಸಕ್ಕೆ ಎಷ್ಟು ಜನ ಸೇರುತ್ತಾರೆ ಎಂದು ಲೆಕ್ಕ ಹಾಕಿ ಬಸ್ಸನ್ನು ಬುಕ್‌ ಮಾಡಿ ಎಲ್ಲರೂ ತಮ್ಮ ತಮ್ಮ ಸೀಟುಗಳನ್ನು ಕಾಯ್ದಿರಿಸಿಕೊಂಡಿದ್ದರು.

ಆದರೆ ಆಮೇಲೆ ಅನ್ನಿಸ್ಸುತ್ತಿತ್ತು, ಇನ್ನು ಕೆಲವೊಂದಿಷ್ಟು ಜನರನ್ನು ನಾವು ಕರೆದುಕೊಂಡು ಬರಬಹುದಿತ್ತು ಎಂದು…! ಯಾಕೆ ಎಂದು ಕೇಳುತ್ತೀರಾ, ಬಸ್ಸಿನಲ್ಲಿ ಮುಕ್ಕಾಲು ಜನ ತಮ್ಮ ಸೀಟನ್ನು ಬಿಟ್ಟು, ಅಂತ್ಯಾಕ್ಷರಿ ಹಾಡುವುದು, ಡ್ಯಾನ್ಸ್‌ ಮಾಡುವುದರಲ್ಲೇ ನಿರತರಾಗಿದ್ದರು. ಪ್ರತಿಯೊಬ್ಬರು ತಮ್ಮೊವರೊಡನೆ ಬಸ್ಸಿನಲ್ಲಿ ಹೋಗುವಾಗ ಅಂತ್ಯಾಕ್ಷರಿ, ಸರಿಗಮ ಸಂಗೀತ ಆಟವನ್ನು ಆಡೇ ಆಡುತ್ತಾರೆ. ನಾವೆಲ್ಲ ಈ ಹಾಡಿನ ಗುಂಗಿನೊಳಗೆ ಎಷ್ಟು ಮುಳುಗಿದ್ದೇವು ಎಂದರೆ ತಿಂಡಿಯ ವಿರಾಮ ಬಂದಾಗಲೇ ನಾವೆಲ್ಲ ವಾಸ್ತವಕ್ಕೆ ಬಂದಿದ್ದು. ಒಂದು ವಿಸ್ತಾರವಾದ ಸ್ಥಳದಲ್ಲಿ ಎಲ್ಲರೂ ಸೇರಿ ಬೆಳ್ಳಗ್ಗಿನ ಉಪಹಾರವನ್ನು ಸವಿದೆವು. ವಿಶೇಷವೆಂದರೆ ಭಾರತೀಯರಾದ ನಮಗೆ ನಮ್ಮ ದೇಶದ ತಿಂಡಿಗಳೇ ರುಚಿ ಹಿಡಿಸುವುದು. ಎಲ್ಲರೂ ದಕ್ಷಿಣ ಭಾರತದ ತಿಂಡಿಗಳನ್ನು ಮಾಡಿ ತಂದಿದ್ದರು. ಹಾಗಾಗಿ ನಮ್ಮ ಬಸ್‌ನ ಡ್ರೈವರ್‌ಗೂ ನಾವು ಇದೇ ತಿಂಡಿಯನ್ನು ನೀಡಬೇಕಾಯಿತು. ಅವರಿಗೆ ಹಿಡಿಸುತ್ತದೋ ಇಲ್ಲವೋ ಎಂಬ ಗೊಂದಲದಲ್ಲೇ ಇರುವಾಗ ತಿಂಡಿ ಸವಿದ ಅವರು ಅದನ್ನು ಬಹಳ ಇಷ್ಟಪಟ್ಟರು.!

ತಿಂಡಿ ತಿಂದು ಬಸ್ಸು ಹತ್ತಿದ ಮರುಗಳಿಗೆಯೇ ಎಲ್ಲರೂ ಮತ್ತೆ ಹಾಡು, ನೃತ್ಯದಲ್ಲಿ ನಿರತರಾದರು. ದೊಡ್ಡವರೊಂದಿಗೆ ಸೇರಿ ಪುಟ್ಟ ಮಕ್ಕಳು ಎಲ್ಲರೊಂದಿಗೆ ಬೆರೆತು ನಲಿದರು. ಕಾರ್ನಿಂಗ್‌ ಗ್ಲಾಸ್‌ ಮ್ಯೂಸಿಯಂ ಪ್ರವಾಸದ ವೇಳಾ ಪಟ್ಟಿಯಂತೇ ನಾವು ಮೊದಲು ಭೇಟಿ ನೀಡಿದ ಸ್ಥಳ ಕಾರ್ನಿಂಗ್‌ ಗ್ಲಾಸ್‌ ಮ್ಯೂಸಿಯಂ.

ಅಲ್ಲಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಗೈಡ್‌ ಅನ್ನು ಮೊದಲೇ ಬುಕ್‌ ಮಾಡಿದ್ದೇವು. ಅವರು ನಮಗಾಗಿ ಕಾಯುತ್ತಿದ್ದು, ನಾವು ಬಂದ ಕೂಡಲೇ ಮ್ಯೂಸಿಯಂನ ನಕ್ಷೆ ನಮ್ಮ ಕೈಗಿತ್ತು, ಯಾವ ಯಾವ ಸ್ಥಳಗಳಿಗೆ ಹೇಗೆ ಹೋಗಬೇಕು, ಎಲ್ಲಿ ಯಾವ ಚಟುವಟಿಗೆ ಮಾಡಬೇಕು ಎಂಬುದನ್ನು ಸಂಕ್ಷಿಪ್ತವಾಗಿ ನಮಗೆ ತಿಳಿಸಿ, ನಮ್ಮ ತಂಡಕ್ಕೆ ಮೊದಲೇ ತಯಾರಿಸಿದ ಹೆಸರುಗಳ ಸ್ಟಿಕರ್‌ನ್ನು ನೀಡಿದರು. ಹೆಸರೇ ಹೇಳುವ ಹಾಗೇ ಇದು ಗಾಜಿನ ವಸ್ತುಗಲ ಸಂಗ್ರಹಾಲಯ. ಮ್ಯೂಸಿಯಂನ ಒಳಹೊಕ್ಕುತ್ತಿದ್ದಂತೆ ಅದರ ಒಂದು ಭಾಗದಲ್ಲಿ ಸುಮಾರು 35 ಶತಮಾನಗಳಿಂದ ಸಮಗ್ರವಾಗಿ ಕೂಡಿಟ್ಟಿದ್ದ ವಿಭಿನ್ನ ನಾಗರಿಕತೆಗಳ ಹಲವು ಶೈಲಿಯ ಗಾಜಿನ ಸಾಮಾಗ್ರಿಗಳು, ದೈನಂದಿನ ಕಾರ್ಯಗಳಲ್ಲಿ ಉಪಯೋಗಿಸುವ ವಿವಿಧ ಗಾಜಿನ ವಸ್ತುಗಳ ವಿನ್ಯಾಸಗಳನ್ನು ಪ್ರದರ್ಶಿಸಿದ್ದರು.

ಏಷ್ಯಾದ ಮೇಸಪೋಟಿಮಿಯಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮರಳು, ಸುಣ್ಣ, ಸೋಡ ಇತ್ಯಾದಿಗಳಿಂದ ಗಾಜನ್ನು ತಯಾರಿಸಿದ್ದರಂತೆ. ಏಷ್ಯಾ, ಯುರೋಪ್‌, ಆಫ್ರಿಕಾ ಮತ್ತು ಅಮೆರಿಕ ಖಂಡಗಳ ಬೇರೆ ಬೇರೆ ದೇಶಗಳ ವೈವಿಧ್ಯಮಯ ವಸ್ತುಗಳ ಗ್ಯಾಲರಿ ಸಂಗ್ರಹಾಲಯದ ಇನ್ನೊಂದು ಭಾಗದಲ್ಲಿತ್ತು. ಅಲ್ಲಿಯೇ ಪ್ರವಾಸಿಗಳ ಮೋಜಿಗಾಗಿ ಸ್ಕ್ಯಾವೆಂಜರ್ಹಂಟ್‌ ಏರ್ಪಡಿಸಿದ್ದರು.

ಸಂಗ್ರಹಾಲಯದ ಇನ್ನೊಂದು ಭಾಗದಲ್ಲಿ ಗ್ಲಾಸ್‌ ಬ್ರೇಕಿಂಗ್‌ ಶೋ, ಹಾಟ್‌ ಗ್ಲಾಸ್‌ ಮೇಕಿಂಗ್‌ ಶೋ ಮತ್ತು ಹೊಸ ವಸ್ತುಗಳ ಗ್ಯಾಲರಿಗಳಿದ್ದವು. ವಿವಿಧಬಣ್ಣ, ಆಕಾರ, ರೂಪಗಳ ಅನೇಕ ಗಾಜಿನ ವಸ್ತುಗಳನ್ನು ನೋಡಿ, ಕೊನೆಗೆ ಶಾಪಿಂಗ್‌ ಕೂಡ ಸರಿಯಾಗಿಯೇ ಮಾಡಿ ಹೊರಗಡೆಗೆ ಬಂದೆವು. ಮ್ಯೂಸಿಯಂನಿಂದ ಹೊರ ಬರುವಾಗಲೇ ಸೂರ್ಯ ನೆತ್ತಿ ಮೇಲೆ ಬಂದಾಗಿತ್ತು, ಎಲ್ಲರ ಹೊಟ್ಟೆಯು ಚುರುಗುಡುತ್ತಿತ್ತು. ಹಾಗಾಗಿ ಅಲ್ಲಿಯೇ ಸಮೀಪದಲ್ಲಿ ಮೊದಲೇ ಮಾಡಿ ತಂದಿದ್ದ ಪುಳಿಯೋಗರೆ ಹಾಗೂ ಮೊಸರನ್ನವನ್ನು ಎಲ್ಲರೂ ಸವಿದರು.

ಡೆಸ್ಟಿನೇಶನ್‌ ವೈನ್‌ ಟೇಸ್ಟಿಂಗ್‌
ನಮ್ಮ ತಂಡದವರು ಮೊದಲೇ ಡೆಸ್ಟಿನೇಶನ್‌ ಟೂರ್‌ ಅನ್ನು ಬುಕ್‌ ಮಾಡಿಸಿದ್ದರು. ಇದು ವಿವಿಧ ರುಚಿಯ ವೈನ್‌ಗಳನ್ನು ಟೇಸ್ಟ್‌ ಮಾಡುವಂತದ್ದು. ತಂಡದ ವಿವಿಧ ಸದಸ್ಯರು ರೆಡ್‌, ವೈಟ್‌ ಹಾಗೂ ಸ್ಥಳೀಯ ದ್ರಾಕ್ಷಿ ಹಣ್ಣಿನಿಂದ ತಯಾರಾದ ಒಟ್ಟು ಆರು ತರಹದ ವೈನ್‌ಗಳನ್ನು ಸವಿದರು. ಹಾಗೆಯೇ ಅಲ್ಲಿನ ವೈನ್‌ ವಾರ್ಡ್‌ಗಳನ್ನು ನೋಡಿದೆವು.

ಟೆಘನೆಕ್‌ ಸ್ಟೇಟ್‌ ಪಾರ್ಕ್‌
ಪ್ರವಾಸದ ಮುಂದಿನ ನಿಲ್ದಾಣ ಟೆಘನೆಕ್‌ ಸ್ಟೇಟ್‌ ಪಾರ್ಕ್‌ನ ಫಾಲ್ಸ್‌. ಪಾರ್ಕ್‌ ತಲುಪಿದ ಮೇಲೆ ಸುಮಾರು 2.5 ಮೈಲು ನಡೆದರೆ ಅತ್ಯುದ್ಭುತವಾದ ಸುಮಾರು 215 ಅಡಿಗಳ ಮೇಲಿನಿಂದ ಧುಮುಕ್ಕುತ್ತಿರುವ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು. ಜಲಪಾತದ ಎದುರು ನಿಂತು ಎಲ್ಲರೂ ಫೋಟೋಗಳನ್ನು ತೆಗೆದು ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಮಕ್ಕಳೆಲ್ಲ ಜಲಪಾತಕ್ಕೆ ಇಳಿದು ಆಟವಾಡಿ ಸಂಭ್ರಮಿಸಿದರು. ಮತ್ತೆ ಸಂಜೆಯ ಸ್ನಾಕ್ಸ್‌ಗೆ ಭಾರತೀಯ ತಿಂಡಿಗಳನ್ನು ನಮ್ಮ ಜತೆ ನಮ್ಮ ಡ್ರೈವರ್‌ ಸಹ ಬಹಳ ಇಷ್ಟ ಪಟ್ಟು ತಿಂದಿದ್ದರು. ಪ್ರವಾಸ ಮುಗಿಯುವುದರಲ್ಲಿ ಡ್ರೈವರ್‌ ಭಾರತೀಯ ಆಹಾರದ ಫ್ಯಾನ್‌ ಆಗಿಬಿಟ್ಟಿದ್ದರು. ಅಲ್ಲದೇ ಭಾರತೀಯ ಆಹಾರಗಳನ್ನು ಮಾಡುವ ರೀತಿಯನ್ನು ಕೇಳಿ ತಿಳಿದುಕೊಂಡರು.

ಲೇಕ್‌ ಕಾಯುಗಾ
ಸಂಜೆಯ ಭೇಟಿಗೆ ನಾವು ಹೋಗಿದ್ದು ಅಲ್ಲೇ ಸಮೀಪದಲ್ಲಿರುವ ಕಾಯುಗಾ ಸರೋವರವನ್ನು. ಇದನ್ನು ಲೇಕ್‌ ಕಾಯುಗ ಎಂದು ಕರೆಯಲಾಗುತ್ತದೆ. ಈ ಲೇಕ್‌ನಲ್ಲಿ ಆಟವಾಡಬಹುದು. ಚಿಕ್ಕ ಚಿಕ್ಕ ಮಕ್ಕಳೆಲ್ಲ ಲೇಕ್‌ನಲ್ಲಿ ಆಟವಾಡಿ ಸಂಭ್ರಮಿಸಿದ್ದರು.
ಪ್ರವಾಸದ ಪಟ್ಟಿಯಲ್ಲಿದ್ದ ಎಲ್ಲ ಸ್ಥಳಗಳಿಗೆ ಭೇಟಿ ನೀಡದ ಬಳಿಕ ಮತ್ತೆ ರಾತ್ರಿಯ ಊಟ ಮುಗಿಸಿ ಅಲ್ಬನಿಯ ಕಡೆಗೆ ತಮ್ಮ ಮರಳಿ ಪ್ರಯಾಣ. ಪ್ರವಾಸದಲ್ಲಿನ ಮೋಜು, ಮಸ್ತಿಯಿಂದ ಎಲ್ಲರೂ ಆಯಾಸದಿಂದ ನಿದ್ದೆಗೆ ಜಾರಿದ್ದರು.

*ಸುಪ್ರೀಯ ವಾಲ್ವೇಕರ್‌, ಅಲ್ಬನಿ

ಟಾಪ್ ನ್ಯೂಸ್

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.