ನಾಡದೋಣಿ ಮೀನುಗಾರರಿಗೆ ಕೇರಳದ ಭೀತಿ!


Team Udayavani, Apr 6, 2020, 6:20 AM IST

ನಾಡದೋಣಿ ಮೀನುಗಾರರಿಗೆ ಕೇರಳದ ಭೀತಿ!

ಬೆಂಗಳೂರು: ರಾಜ್ಯದ ನಾಡದೋಣಿ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಅವಕಾಶ ಕೊಡುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸುತ್ತಿದೆ. ಆದರೆ ಕೇರಳದಿಂದ ಜನರು ಸಮುದ್ರ ಮಾರ್ಗವಾಗಿ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದೇ ಸರಕಾರಕ್ಕೆ ಕಗ್ಗಂಟಾಗಿದೆ.

ರಾಜ್ಯದ ಕರಾವಳಿ ಜಿಲ್ಲೆಗಳ ಲಕ್ಷಾಂತರ ಜನರು ನೇರ ಅಥವಾ ಪರೋಕ್ಷವಾಗಿ ಮೀನುಗಾರಿಕೆಯ ಮೇಲೆ ಅವಲಂಬಿತರಾಗಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮೀನು ಗಾರಿಕೆಯನ್ನು ಸರಕಾರ ಸದ್ಯದ ಮಟ್ಟಿಗೆ ನಿಷೇಧಿಸಿದೆ. ಈಗ ಸರ ಕಾರವೇ ಕೋಳಿ, ಕೋಳಿ ಮೊಟ್ಟೆ, ಮಾಂಸ, ಮೀನು, ಹಾಲು, ದ್ರವಸಾರಜನಕ ಮೊದಲಾದವುಗಳನ್ನು ಅಗತ್ಯ ವಸ್ತುಗಳೆಂದು ಘೋಷಿಸಿ, ಮೀನುಗಾರಿಕೆಗೆ ಅನುಮತಿ ನೀಡಿದೆಯಾದರೂ ಮೀನುಗಾರರಿಗೆ ಸಮುದ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೀನು ಗಾರರಿಗೆ ಸ್ವಲ್ಪ ಮಟ್ಟಿನ ಅವಕಾಶ ಮಾಡಿಕೊಡಲು ಸರಕಾರ ಚಿಂತನೆ ನಡೆಸುತ್ತಿದೆ.

ನಾಡದೋಣಿ ಮೀನುಗಾರಿಕೆಗೆ ಅವಕಾಶ?
ಮಂಗಳೂರಿನಿಂದ ಕಾರವಾರದವರೆಗೂ ಸಾವಿರಾರು ನಾಡ ದೋಣಿಗಳಿವೆ. ಸಮುದ್ರದ ತೀರ ಭಾಗದಲ್ಲಿ ನಡೆಸುವ ನಾಡದೋಣಿ ಮೀನುಗಾರಿಕೆಯಿಂದ ಹಿಡಿದು ತಂದ ಮೀನುಗಳನ್ನು ಬಹುತೇಕವಾಗಿ ಸ್ಥಳೀಯ ಮಾರು ಕಟ್ಟೆಗೆ ಪೂರೈಸಲಾಗುತ್ತದೆ. ಹೀಗಾಗಿ ನಾಡದೋಣಿ ಮೀನುಗಾರಿಕೆಗೆ ಅವಕಾಶ ಮಾಡಿಕೊಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು.

ಕೇರಳದಿಂದ ಅಪಾಯ
ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡಿದರೆ ಕೇರಳದಿಂದ ಬಹುದೊಡ್ಡ ಅಪಾಯ ಕರ್ನಾಟಕ್ಕೆ ಎದುರಾಗುವ ಸಾಧ್ಯತೆಯಿದೆ. ಸದ್ಯ ಕರ್ನಾಟಕ ಮತ್ತು ಕೇರಳ ನಡುವಿನ ಎಲ್ಲ ರಸ್ತೆಗಳನ್ನೂ ಬಂದ್‌ ಮಾಡಲಾಗಿದೆ. ಮೀನುಗಾರಿಕೆ ಆರಂಭವಾದರೆ ಕಾಸರಗೋಡು ಮೊದಲಾದ ಭಾಗದಿಂದ ದೋಣಿ ಮೂಲಕ ಸುಲಭವಾಗಿ ಅಲ್ಲಿನ ಜನರು ಕರ್ನಾಟಕದ ಬಂದರುಗಳನ್ನು ಪ್ರವೇಶಿಸುವ ಸಾಧ್ಯತೆ ಇದೆ. ಮಂಗಳೂರು, ಮಲ್ಪೆ ಅಥವಾ ಗಂಗೊಳ್ಳಿ ಮೊದಲಾದ ದೊಡ್ಡ ಬಂದರು ಪ್ರವೇಶಿಸಲು ಸಾಧ್ಯವಾಗದೇ ಇದ್ದರೂ ಕಿರು ಬಂದರು ಅಥವಾ ಸಮುದ್ರ ತೀವ್ರತೆ ಈಗ ಕಡಿಮೆ ಇರುವುದರಿಂದ ನೇರವಾಗಿ ನಿರ್ಜನ ಪ್ರದೇಶದ ಸಮುದ್ರ ತೀರವನ್ನು ಸುಲಭವಾಗಿ ಪ್ರವೇಶಿಸಬಹುದು. ಹೀಗಾಗಿ ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡುವ ಜತೆಗೆ ಈ ಎಲ್ಲ ಅಂಶಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇದೇ ಎಂದು ಮೂಲಗಳು ತಿಳಿಸಿವೆ.

ಆಳ ಸಮುದ್ರ ಮೀನುಗಾರಿಕೆಗೆ ಲಾಕ್‌ಡೌನ್‌ ಅನಂತರದ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದು ಕೊಳ್ಳಲಿದ್ದೇವೆ. ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡಲು ಯೋಚನೆ ನಡೆಸುತ್ತಿದ್ದೇವೆ. ಆದರೆ ಕೇರಳದಿಂದ ಜನರು ಜಲಮಾರ್ಗವಾಗಿ ಕರ್ನಾಟಕ ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವೆಲ್ಲವನ್ನು ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.
-ಕೋಟ ಶ್ರೀನಿವಾಸ ಪೂಜಾರಿ,
ಮೀನುಗಾರಿಕೆ ಸಚಿವ‌

ಟಾಪ್ ನ್ಯೂಸ್

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಭಾರತದ ನೈಜ ಭೀಮ ಪ್ರತಿಭೆ

ಭಾರತದ ನೈಜ ಭೀಮ ಪ್ರತಿಭೆ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿ

ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸತತ ಠೇವಣಿ ಕಳೆದುಕೊಂಡರೆ ಸ್ಪರ್ಧೆಗೆ ಅನರ್ಹ?

ಸತತ ಠೇವಣಿ ಕಳೆದುಕೊಂಡರೆ ಸ್ಪರ್ಧೆಗೆ ಅನರ್ಹ?

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ ಅವಳಿ ಸಹೋದರರು

11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಭಾರತದ ನೈಜ ಭೀಮ ಪ್ರತಿಭೆ

ಭಾರತದ ನೈಜ ಭೀಮ ಪ್ರತಿಭೆ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.