Udayavni Special

ನನೆಗುದಿಗೆ ಬಿದ್ದ ಹಾಲಾಡಿ ವೃತ್ತ ನಿರ್ಮಾಣ ಯೋಜನೆ


Team Udayavani, Apr 21, 2021, 5:30 AM IST

Haladi circle

ಹಾಲಾಡಿ: ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿ ಸಹಿತ ಸಿದ್ದಾಪುರ, ಕುಂದಾಪುರ, ಶಂಕರನಾರಾಯಣ, ಅಮಾಸೆಬೈಲು ಮತ್ತಿತರ ಪ್ರಮುಖ ಊರುಗಳನ್ನು ಸಂಧಿಸುವ ಪ್ರಮುಖ ಜಂಕ್ಷನ್‌ ಆಗಿರುವ ಹಾಲಾಡಿಯಲ್ಲಿ ವೃತ್ತ (ಸರ್ಕಲ್‌) ನಿರ್ಮಾಣ ಬೇಡಿಕೆ ಮಾತ್ರ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ.

ಇಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ಸರ್ಕಲ್‌ ನಿರ್ಮಾಣ ಮಾಡಲು ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಯೋಜನೆ ತಯಾರಿಸಲಾ ಗಿದೆ. ಆದರೆ ಅದಕ್ಕೆ ಬೇಕಾದ ಜಾಗದ ಒತ್ತುವರಿ ಪ್ರಕ್ರಿಯೆ ಸ್ಥಳೀಯಾಡಳಿತದಿಂದ ಇನ್ನೂ ಆಗದಿರುವ ಕಾರಣ ಈ ಸರ್ಕಲ್‌ ನಿರ್ಮಾಣ ಬೇಡಿಕೆ ನನೆಗುದಿಗೆ ಬಿದ್ದಿದೆ.

“ಬ್ಲಾಕ್‌ ಸ್ಪಾಟ್‌’ಗಾಗಿ ಅಭಿವೃದ್ಧಿ
ಹೆಬ್ರಿ, ಅಮಾಸೆಬೈಲು, ಕುಂದಾಪುರ, ಶಂಕರನಾರಾಯಣ ಹೀಗೆ 4 ಕಡೆಗಳಿಂದಲೂ ವಾಹನಗಳು ಸಂಚರಿಸುವ ಪ್ರಮುಖ ಜಂಕ್ಷನ್‌ ಆಗಿರುವುದರಿಂದ, ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಕಾರಣಕ್ಕೆ ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಿ, ಹಾಲಾಡಿ ಪೇಟೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮುತುವರ್ಜಿಯಲ್ಲಿ 3.10 ಕೋ.ರೂ. ಮಂಜೂರಾಗಿತ್ತು. ಅದರಂತೆ ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿ, ಹಾಲಾಡಿ, ಅಮಾಸೆಬೈಲು, ಕೋಟೇಶ್ವರ – ಹಾಲಾಡಿ ಕಡೆಗಳಿಗೆ ತೆರಳುವ ರಸ್ತೆ ವಿಸ್ತ ರ ಣೆ ಮಾಡಲಾಗಿದೆ. ಆದರೆ ಈಗ ರಸ್ತೆ ವಿಸ್ತ ರಣೆ ಮಾಡಿದ್ದರೂ, ಈ 4 ರಸ್ತೆಗಳು ಸಂಧಿಸುವಲ್ಲಿ ಎಲ್ಲೂ ವೇಗ ನಿಯಂತ್ರಕಗಳಿಲ್ಲದೆ ಅಪಾಯಕಾರಿಯಾಗಿದೆ. ಸುಸಜ್ಜಿತ ಸರ್ಕಲ್‌ ನಿರ್ಮಿಸಿದರೆ ಬಹಳಷ್ಟು ಪ್ರಯೋಜನವಾಗಲಿದೆ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.

ಪ್ರಮುಖ ಜಂಕ್ಷನ್‌
ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ, ಕುಂದಾಪುರ, ಸಿದ್ದಾಪುರ, ಶಂಕರ ನಾರಾಯಣ, ಅಮಾಸೆಬೈಲು, ಬೆಳ್ವೆ, ಗೋಳಿಯಂಗಡಿ, ಶೃಂಗೇರಿ, ಧರ್ಮಸ್ಥಳ, ಉಡುಪಿ, ಮಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ ಹೀಗೆ ಹತ್ತಾರು ಪ್ರಮುಖ ಊರುಗಳನ್ನು ಸಂಧಿಸುವ ಪ್ರಮುಖ ಜಂಕ್ಷನ್‌ ಹಾಲಾಡಿ. ನಿತ್ಯ ಹತ್ತಾರು ಬಸ್‌ಗಳು, ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೂ ಇಲ್ಲಿ ಸೂಕ್ತ ವೇಗ ನಿಯಂತ್ರಕಗಳಿಲ್ಲ, ಯಾವ ಊರಿಗೆ ಹೋಗುವ ರಸ್ತೆ ಎನ್ನುವ ಮಾರ್ಗಸೂಚಿಗಳಿಲ್ಲ. ಬೆಳಕಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ.

ಏನು ಸಮಸ್ಯೆ?
ಸರ್ಕಲ್‌ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯವರು ಹೊಸ ನಕ್ಷೆ ತಯಾರಿಸಿದ್ದಾರೆ. ಆದರೆ ಅದಕ್ಕಾಗಿ 2-3 ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಾಗಿದೆ. ಅದರಲ್ಲೂ ಎರಡು ಕಡೆ ಪಟ್ಟಾ ಜಾಗವಿದ್ದು, ಅದಕ್ಕೆ ಎಸಿಯವರ ಮೂಲಕ ಒಪ್ಪಿಗೆ ಬೇಕಾಗಿದೆ. ಕೆಲವೆಡೆಗಳಲ್ಲಿ ಅಂಗಡಿ ಕಟ್ಟಿಕೊಂಡಿದ್ದು, ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ತೆರವು ಮಾಡುವ ಕೆಲಸ ಪಂಚಾಯತ್‌ನಿಂದ ಆಗಬೇಕಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆ ಇತ್ಯರ್ಥವಾಗದೇ ವೃತ್ತ ನಿರ್ಮಾಣ ಕಾಮಗಾರಿಗೆ ಅನುದಾನ ಕೇಳಲು ಆಗುವುದಿಲ್ಲ. ಜಾಗ ಒತ್ತುವರಿಯಾದ ಬಳಿಕ ಹೆಚ್ಚುವರಿ ಅನುದಾನಕ್ಕೆ ಬೆಂಗಳೂರಿನ “ಪ್ರಾಮಿÕ’ ಇಲಾಖೆಗೆ ಇಲ್ಲಿನ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಲಿದ್ದಾರೆ.

ಭೂಸ್ವಾಧೀನ ಆಗಬೇಕು
ಈಗಾಗಲೇ ಹಾಲಾಡಿ ಜಂಕ್ಷನ್‌ನಲ್ಲಿ ಎಲ್ಲ ಕಡೆಗಳಿಂದ ಕೂಡುವ ರಸ್ತೆಗಳನ್ನು ವಿಸ್ತ ರಣೆ ಮಾಡಲಾಗಿದೆ. ಸರ್ಕಲ್‌ ನಿರ್ಮಾಣ ಬೇಡಿಕೆ ಮೊದಲ ಯೋಜನೆಯಲ್ಲಿ ಇರಲಿಲ್ಲ. ಪಂಚಾಯತ್‌, ಜನರು, ಹೋರಾಟ ಸಮಿತಿ ಬೇಡಿಕೆಯಿಂದ ಸರ್ಕಲ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಆದರೆ ಅದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪಂಚಾಯತ್‌ನವರು ಮಾಡಿಕೊಡಬೇಕಿದೆ.
-ದುರ್ಗಾದಾಸ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ಸಭೆ ಕರೆದು ತೀರ್ಮಾನ
ಹಾಲಾಡಿಯಲ್ಲಿ ಸರ್ಕಲ್‌ ನಿರ್ಮಾಣ ಸಂಬಂಧ ಜಾಗ ಒತ್ತುವರಿ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಗಮನಕ್ಕೆ ತಂದಿದ್ದು, ಈ ಬಗ್ಗೆ ಆದಷ್ಟು ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರು, ಎಲ್ಲ ಸದಸ್ಯರ ವಿಶೇಷ ಸಭೆ ಕರೆದು, ಅದರಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ವಸಂತ ಕುಮಾರ್‌, ಹಾಲಾಡಿ ಪಿಡಿಒ

ಟಾಪ್ ನ್ಯೂಸ್

Pakistan would not hold talks with India until New Delhi reverses its decision on Kashmir: Imran Khan

ಇಲ್ಲವೇ ಇಲ್ಲಾ..ಕಾಶ್ಮೀರದ ಕುರಿತು ಭಾರತ ತನ್ನ ನಿರ್ಧಾರ ಬದಲಾಯಿಸಿಕೊಳ್ಳಲಿ… : ಖಾನ್

ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ

ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ

Bhima Koregaon case: SC dismisses bail plea of Gautam Navlakha

ಭೀಮಾ ಕೋರೆಗಾಂವ್ ಪ್ರಕರಣ : ಗೌತಮ್ ನವ್ಲಖಾ ಜಾಮೀನು ವಜಾಗೊಳಿಸಿದ ‘ಸುಪ್ರೀಂ’

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

Patanjali sells biscuits business to ruchi soya for-rs60 cr

ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವ ರುಚಿ ಸೋಯ ತೆಕ್ಕೆಗೆ..!?

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

nnnnnnnnnnn

ಮತ್ತೆ ಕಿರುತೆರೆಗೆ ಮರಳಿದ ವಿಜಯ್ ಸೇತುಪತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಳೂರು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ; 6 ಮಂದಿ ಸೆರೆ, ನಾಲ್ಕು ಕರುಗಳ‌ ರಕ್ಷಣೆ

ಮೂಳೂರು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ; 6 ಮಂದಿ ಸೆರೆ, ನಾಲ್ಕು ಕರುಗಳ‌ ರಕ್ಷಣೆ

ಕೋವಿಡ್ ಗೆದ್ದ ಯಡಮೊಗೆಯ ಕುಟುಂಬ!  ಎಲ್ಲ 9 ಮಂದಿಯೂ ಸೋಂಕು ಎದುರಿಸಿ ಜಯಿಸಿದರು

ಕೋವಿಡ್ ಗೆದ್ದ ಯಡಮೊಗೆಯ ಕುಟುಂಬ! ಎಲ್ಲ 9 ಮಂದಿಯೂ ಸೋಂಕು ಎದುರಿಸಿ ಜಯಿಸಿದರು

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

Udupi Shiroor Mutt Uttaradhiukari Pattabhisheka’s Predatory ritual practice

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ  

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

eeeeeeeeeeeeeeeeeeeeeeeeeeeeeeeee

ರವೀಂದ್ರನಾಥ ಠಾಗೋರ್ ಕೋವಿಡ್ ಸೋಂಕಿಗೆ ಬಲಿ

Police service wearing PPE kit

ಪಿಪಿಇ ಕಿಟ್‌ ಧರಿಸಿ ಪೊಲೀಸರ ಸೇವೆ

Eye surgery

ಕಣ್ಣಿನ ಶಸ್ತ್ರಚಿಕಿತ್ಸೆ , ನೇತ್ರದಾನಕ್ಕೆ ಮತ್ತೆ ಕೊರೊನಾತಂಕ

Ventilator installation instead of HFNO

ಎಚ್‌ಎಫ್ಎನ್‌ಒ ಬದಲು ವೆಂಟಿಲೇಟರ್‌ ಅಳವಡಿಕೆ

Pakistan would not hold talks with India until New Delhi reverses its decision on Kashmir: Imran Khan

ಇಲ್ಲವೇ ಇಲ್ಲಾ..ಕಾಶ್ಮೀರದ ಕುರಿತು ಭಾರತ ತನ್ನ ನಿರ್ಧಾರ ಬದಲಾಯಿಸಿಕೊಳ್ಳಲಿ… : ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.