ಕನಸುಗಳ ಬಿತ್ತಿದ ಸಾಧಕರು: ಒಲಿಂಪಿಕ್ಸ್‌ಗೆ ಸಿದ್ಧಗೊಂಡ ಭಾರತೀಯ ಆ್ಯತ್ಲೀಟ್‌ಗಳ ಹಿನ್ನೆಲೆ


Team Udayavani, Jul 13, 2021, 7:35 AM IST

ಕನಸುಗಳ ಬಿತ್ತಿದ ಸಾಧಕರು: ಒಲಿಂಪಿಕ್ಸ್‌ಗೆ ಸಿದ್ಧಗೊಂಡ ಭಾರತೀಯ ಆ್ಯತ್ಲೀಟ್‌ಗಳ ಹಿನ್ನೆಲೆ

ಜಿಮ್ನಾಸ್ಟ್‌ ಆಗಿದ್ದ ಪ್ರಿಯಾಂಕಾ ಈಗ ನಡಿಗೆ ಸ್ಪರ್ಧಿ
25 ವರ್ಷದ ಪ್ರಿಯಾಂಕಾ ಗೋಸ್ವಾಮಿ ಉತ್ತರಪ್ರದೇಶದ ಮುಜಫ‌#ರ್‌ ನಗರದವರು. ಮೊದಲು ಜಿಮ್ನಾಸ್ಟ್‌ ಆಗಿದ್ದವರು, ಅನಂತರ ಆ್ಯತ್ಲೀಟಿಕ್ಸ್‌ಗೆ ಹೊರಳಿಕೊಂಡರು. ಇದಕ್ಕೆ ಕಾರಣ ಆ್ಯತ್ಲೀಟಿಕ್ಸ್‌ನಲ್ಲಿ ಪದಕಗಳ ಜತೆಗೆೆ ಕೊಡುತ್ತಿದ್ದ ಬ್ಯಾಗ್‌ಗಳು! ಈಗ ಅವರು ವೇಗದ ನಡಿಗೆಯಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅವರು ಹೊಸ ಆಶಾಕಿರಣವಾಗಿ ಗೋಚರಿಸಿದ್ದಾರೆ.
**
ಭವಾನಿ ದೇವಿಯ ಐತಿಹಾಸಿಕ ಸಾಧನೆ
ತಮಿಳುನಾಡಿನ 27 ವರ್ಷದ ಭವಾನಿ ದೇವಿಯದ್ದು ಅದ್ಭುತ ಸಾಧನೆಯೆನ್ನಬಹುದು. ಕತ್ತಿವರಸೆಯಲ್ಲಿ ಈಕೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೊದಲ ಕತ್ತಿವರಸೆಪಟು ಎನ್ನುವುದು ಇವರ ಹೆಗ್ಗಳಿಕೆ. ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲೂ ಈಕೆಯನ್ನು ಪ್ರಶಂಸಿಸಿದ್ದಾರೆ. ಈಕೆಯ ತರಬೇತಿಗಾಗಿ, ಅವರ ತಾಯಿ ತಮ್ಮ ಆಭರಣಗಳನ್ನು ಅಡಮಾನ ಇಟ್ಟಿದ್ದರು ಎಂದು ಮೋದಿಯೇ ಹೇಳಿದ್ದಾರೆ.
**
ಗದ್ದೆಯಲ್ಲಿ ದುಡಿಯುತ್ತಲೇ ಬಾಕ್ಸರ್‌ ಆದ ಮನೀಷ್‌
ಹರಿಯಾಣದ ಭಿವಾನಿಯವರಾದ ಮನೀಷ್‌ ಕೌಶಿಕ್‌ಗೆ ಈಗ 25 ವರ್ಷ. ಪಕ್ಕಾ ಕೃಷಿಕುಟುಂಬದಿಂದ ಬೆಳೆದು ಬಂದವರು. ಬಾಲ್ಯದಲ್ಲಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾಗಲೇ ಬಾಕ್ಸಿಂಗ್‌ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. 63 ಕೆ.ಜಿ. ತೂಕದ ವಿಭಾಗದಲ್ಲಿ ಸ್ಪರ್ಧಿಸುವ ಇವರು, 2018ರ ಕಾಮನ್‌ವೆಲ್ತ್‌ ಗೇಮ್ಸ್‌ ನಲ್ಲಿ ಚಿನ್ನ, 2019ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ. ಈಗವರು ಟೋಕಿಯೊದಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.
**
ಬಡತನ ಪ್ರವೀಣ್‌ ಜಾಧವ್‌ಗೆ ಅಡ್ಡಿಯೇ ಆಗಲಿಲ್ಲ
ಹಳ್ಳಿಗಾಡಿನ, ಬಡ ಹಿನ್ನೆಲೆಯ ವ್ಯಕ್ತಿಗಳು ವಿಶ್ವವೇದಿಕೆಯಲ್ಲಿ ಕಂಗೊಳಿಸುತ್ತಾರೆಂದರೆ ಅದೇನು ಸಾಮಾನ್ಯ ವಿಷಯವೇ? 24 ವರ್ಷದ ಬಿಲ್ಗಾರ ಪ್ರವೀಣ್‌ ಜಾಧವ್‌ರದ್ದು ಇಂತಹದ್ದೇ ಒಂದು ಸ್ಫೂರ್ತಿಯುತ ಕಥೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರದೆ ಎಂಬ ಹಳ್ಳಿಯೊಂದರಲ್ಲಿ ಹುಟ್ಟಿದರು. ಆಗ ಇವರು ಚರಂಡಿಯೊಂದರ ಸಮೀಪದ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಅಪ್ಪಅಮ್ಮ ಕೂಲಿ ಮಾಡುತ್ತಿದ್ದರು. ಇಂತಹ ಪ್ರವೀಣ್‌ ಬಿಲ್ವಿದ್ಯೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ಈ ಟೋಕಿಯೊದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಅವರಿಗೆ ಶುಭ ಹಾರೈಕೆಗಳಿರಲಿ.
**
ದೀಪಿಕಾ: ಭಾರತೀಯರ ಎದೆಯಲಿ ಬಿಲ್ಲಿನ ಹೆದೆಯ ಸದ್ದು
ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬಗ್ಗೆ ಯಾರಿಗೆ ಗೊತ್ತಿಲ್ಲ? ಈಕೆ ಝಾರ್ಖಂಡ್‌ನ‌ ರಾಂಚಿಯವರು. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಬಿಲ್ಗಾರಿಕೆ ವಿಶ್ವಕಪ್‌ 3ನೇ ಹಂತದಲ್ಲಿ ದೀಪಿಕಾ ಮೂರು ಚಿನ್ನ ಗೆದ್ದಿದ್ದಾರೆ. ವಿಶ್ವಶ್ರೇಷ್ಠ ಬಿಲ್ಲುಗಾರ್ತಿಯಾಗಿ ಗುರ್ತಿಸಿಕೊಂಡಿದ್ದಾರೆ.
ರಾತು ಚಟ್ಟಿ ಎಂಬ ಹಳ್ಳಿಯ ದೀಪಿಕಾ ತಂದೆ ಆಟೋ ಚಾಲಕ, ತಾಯಿ ಆಸ್ಪತ್ರೆಯೊಂದರಲ್ಲಿ ದಾದಿ. ಈಕೆ ಟೋಕಿಯೊ ಒಲಿಂಪಿಕ್ಸ್‌ ಮಹಿಳಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಏಕೈಕ ಬಿಲ್ಲುಗಾರ್ತಿ.
**
ಶಿವಪಾಲ್‌ರ ರಕ್ತದಲ್ಲೇ ಇದೆ ಜಾವೆಲಿನ್‌ ಎಸೆತ
ಇನ್ನೂ 25 ವರ್ಷದ ಶಿವಪಾಲ್‌ ಸಿಂಗ್‌ ಉತ್ತರಪ್ರದೇಶದ ವಾರಾಣಸಿಯವರು. ವಿಶೇಷವೆಂದರೆ ಇವರ ಇಡೀ
ಕುಟುಂಬದ ಸದಸ್ಯರೆಲ್ಲ ಜಾವೆಲಿನ್‌ ಎಸೆತದಲ್ಲಿ ಪಳಗಿದ್ದಾರೆ. ಅವರ ತಂದೆ, ಚಿಕ್ಕಪ್ಪ, ಅಣ್ಣ ಎಲ್ಲರೂ ಜಾವೆಲಿನ್‌ ಎಸೆತಗಾರರೇ! ಅವರೀಗ ಟೋಕಿಯೊದಲ್ಲಿ ಭಾರತದ ಪರವಾಗಿ ಸ್ಪರ್ಧಿಸಲಿದ್ದಾರೆ. 2019ರಲ್ಲಿ ನಡೆದ ದೋಹಾ ಏಷ್ಯಾಡ್‌ನ‌ಲ್ಲಿ ಬೆಳ್ಳಿ ಗೆದ್ದಿದ್ದಾರೆ.
**
ಕರ್ನಾಟಕದ ಭರವಸೆ ಶ್ರೀಹರಿ ನಟರಾಜ್‌
ಕರ್ನಾಟಕ ಕಂಡ ಖ್ಯಾತ ಈಜುಪಟುಗಳಲ್ಲಿ ಶ್ರೀಹರಿ ನಟರಾಜ್‌ ಕೂಡಾ ಒಬ್ಬರು. ಆರಂಭದಲ್ಲಿ ಶ್ರೀಹರಿ ನಟರಾಜ್‌ಗೆ ಟೋಕಿಯೊ ಒಲಿಂಪಿಕ್ಸ್‌ ನೇರಪ್ರವೇಶ ಸಿಗುವುದು ಅನುಮಾನವಾಗಿತ್ತು. ಬಿ ಸಮಯದಲ್ಲಿ ಅವರ ಪ್ರವೇಶಕ್ಕೆ ಭಾರತೀಯ ಈಜುಸಂಸ್ಥೆ ಶಿಫಾರಸು ಮಾಡಿತ್ತು. ಇತ್ತೀಚೆಗೆ ರೋಮ್‌ನಲ್ಲಿ ಅವರು ಎ ಸಮಯದಲ್ಲೇ ಅರ್ಹತೆ ಪಡೆದರು. ಒಲಿಂಪಿಕ್ಸ್‌ ಇತಿಹಾಸದಲ್ಲೇ ಇಂತಹ ಸಾಧನೆ ಮಾಡಿದ ಎರಡನೇ ಭಾರತೀಯ ಶ್ರೀಹರಿ! 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು ಈಜಲಿದ್ದಾರೆ.
***
ತಾಯಿ, ಸಹೋದರಿಯರ ತ್ಯಾಗದ ಫ‌ಲ ಈ ನೇಹಾ
ನೇಹಾ ಗೋಯಲ್‌ ಹರಿಯಾಣದ ಸೋನೆಪತ್‌ನವರು.
ಇನ್ನೂ 24 ವರ್ಷ. ಬಹುತೇಕರಿಗೆ ಈ ವರ್ಷದಲ್ಲಿ ಜೀವನ ಇನ್ನೂ ಆರಂಭವೇ ಆಗಿರುವುದಿಲ್ಲ. ಈಕೆ ಭಾರತ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾಗಿ, ಟೋಕಿಯೊದಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಕುಟುಂಬವನ್ನು ನಡೆಸಲು ಈಕೆಯ ತಾಯಿ ಮತ್ತು ಸಹೋದರಿಯರು ಸೈಕಲ್‌ ಕಾರ್ಖಾನೆಯೊಂದರಲ್ಲಿ ದುಡಿಯು ತ್ತಾರೆ. ಆ ತ್ಯಾಗದ ಫ‌ಲವಾಗಿ ಗೋಯಲ್‌ ಹಾಕಿಯಲ್ಲಿ ಮೆರೆಯಲು ಸಿದ್ಧವಾಗಿದ್ದಾರೆ.
**
ಈಜುಕೊಳದಲ್ಲಿ ಮೀನಿನಷ್ಟೇ ಸರಾಗ ಈ ಸಾಜನ್‌
ಕೇರಳದ ಇಡುಕ್ಕಿಯವರಾದ ಈಜುಪಟು ಸಾಜನ್‌ ಪ್ರಕಾಶ್‌ಗೆ ಈಗ 27 ವರ್ಷ. ಇವರೊಂದು ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್‌ಗೆ ಫಿನಾ (ವಿಶ್ವ ಈಜು ಸಂಸ್ಥೆ) ನಿಗದಿಪಡಿಸಿದ ಎ ಸಮಯದಲ್ಲೇ ಆಯ್ಕೆಯಾದ ಇತಿಹಾಸದ ಮೊದಲ ಭಾರತೀಯ ಈಜುಪಟು ಇವರು. ಇದುವರೆಗೆ ಬಿ ಸಮಯದಲ್ಲೇ ಆಯ್ಕೆಯಾಗುತ್ತಿದ್ದರು. ಇವರು ಫ್ರೀಸ್ಟೈಲ್‌, ಬಟರ್‌ಫ್ಲೈ, ಮೆಡ್ಲೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದಾರೆ.
**
ಕೊರೊನಾದೆದುರು ಗೆದ್ದು, ಟೋಕಿಯೊದತ್ತ ಚಿರಾಗ್‌-ಸಾತ್ವಿಕ್‌
ಈ ಒಲಿಂಪಿಕ್ಸ್‌ನಲ್ಲಿ ನಡೆಯುವ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಪುರುಷರ ಡಬಲ್ಸ್‌ ಜೋಡಿಯಿದು. ಚಿರಾಗ್‌ ಶೆಟ್ಟಿ ಕರ್ನಾಟಕ ಮೂಲದವ­ ರೆ­ನ್ನುವುದನ್ನು ಗಮನಿಸಬೇಕು. ಇತ್ತೀಚೆಗೆ ಚಿರಾಗ್‌ ಅವರ ಅಜ್ಜ ಕೊರೊನಾದಿಂದ ಮೃತಪಟ್ಟಿದ್ದಾರೆ. ಇನ್ನು ಸ್ವತಃ ಸಾತ್ವಿಕ್‌ಗೆ ಕೊರೊನಾ ತಗುಲಿಕೊಂಡಿತ್ತು. ಇಷ್ಟೆಲ್ಲದರ ಮಧ್ಯೆ ಈ ಇಬ್ಬರು ಟೋಕಿಯೊದಲ್ಲಿ ಪದಕ ಗೆಲ್ಲಲು ಸಜ್ಜಾಗಿದ್ದಾರೆ.
**
ಡಜಾರ ಕುದುರೆ ಮೇಲೆ ಫೌವಾದ್‌ ಸವಾರಿ
ಭಾರತದಲ್ಲಿ ಕುದುರೆ ಸವಾರಿ ಎಂದರೆ ರಾಜಮಹಾರಾಜರು ನೆನಪಾಗುತ್ತಾರೆ. ವರ್ತಮಾನ ಕಾಲದಲ್ಲಿ ಕುದುರೆ ರೇಸ್‌ ಮಾತ್ರ ಹೊಳೆಯುವುದು! ಒಲಿಂಪಿಕ್ಸ್‌ ನಲ್ಲೂ ಕುದುರೆ ಸವಾರಿಯಿದೆ, ಅಲ್ಲೂ ಭಾರತೀಯರು ಅದರಲ್ಲೂ ಕರ್ನಾಟಕದವರೊಬ್ಬರು ಸ್ಪರ್ಧಿಸುತ್ತಾರೆಂದರೆ ಅದಕ್ಕಿಂತ ಸಂಭ್ರಮ ಇನ್ನೇನಿದೆ? ಈ ಬಾರಿ ಕರ್ನಾಟಕದ ಫೌವಾದ್‌ ಮಿರ್ಜಾ ಡಜಾರ ಕುದುರೆಯನ್ನು ಸವಾರಿ ಮಾಡಲಿದ್ದಾರೆ. ಟೋಕಿಯೊಗೆ ಆಯ್ಕೆಯಾಗುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಕೇವಲ ಮೂರನೇ ಕುದುರೆ ಸವಾರ ಎಂಬ ಹೆಗ್ಗಳಿಕೆಯನ್ನು ಫೌವಾದ್‌ ಪಡೆದಿದ್ದಾರೆ.
**
ಗಾಲ್ಫ್ನಲ್ಲಿ ಅದಿತಿ ಎಂಬ ನಕ್ಷತ್ರ
ಭಾರತದಲ್ಲಿ ಗಾಲ್ಫ್ ಕ್ರೀಡೆ ಜನಪ್ರಿಯವಲ್ಲ. ಇದು ಪಕ್ಕಾ ಶ್ರೀಮಂತರ ಕ್ರೀಡೆ ಎಂದೇ ಕರೆಸಿಕೊಂಡಿದೆ. ಇಲ್ಲಿ ಮಹಿಳೆಯೊ­ಬ್ಬಳು ಕಣಕ್ಕಿಳಿದು ಹಲವು ಪ್ರಶಸ್ತಿಗಳನ್ನು ಗೆದ್ದರೆ ಅದು ಆಟದ ಕುರಿತು ನೋಟವನ್ನೇ ಬದಲಿಸುತ್ತದೆ. ಬೆಂಗಳೂರಿನ 23 ವರ್ಷದ ಅದಿತಿ ಅಶೋಕ್‌, 5ನೇ ವರ್ಷದಿಂದ ಗಾಲ್ಫ್ ಆಡಲು ಶುರು ಮಾಡಿದರು. ವಿಶ್ವದ ವಿವಿಧ ಭಾಗಗಳಲ್ಲಿ ಹಲವು ಪ್ರಶಸ್ತಿ ಗೆದ್ದು, ಒಲಿಂಪಿಕ್ಸ್‌ಗೂ ಪ್ರವೇಶಿಸಿದ್ದಾರೆ. ಸತತ 2ನೇ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಮಹಿಳಾ ಗಾಲ#ರ್‌ ಎಂಬ ಹೆಗ್ಗಳಿಕೆ ಇವರದ್ದು.

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.