ಅಂತರ್ಜಾಲ ಸಮಸ್ಯೆ ಇರುವಲ್ಲಿ ಆನ್‌ಲೈನ್‌ ಶಿಕ್ಷಣ ಸಾಧುವೇ?

ಮೊದಲು ಸೌಲಭ್ಯದ ಸಮೀಕ್ಷೆ ಮಾಡಿ ; ಸರಕಾರ ಪೋಷ ಕರ ಆರ್ಥಿಕ ಪರಿಸ್ಥಿತಿ ಅರಿಯಲಿ

Team Udayavani, Jun 11, 2020, 6:30 AM IST

ಅಂತರ್ಜಾಲ ಸಮಸ್ಯೆ ಇರುವಲ್ಲಿ ಆನ್‌ಲೈನ್‌ ಶಿಕ್ಷಣ ಸಾಧುವೇ?

ಬೆಂಗಳೂರು: ಆನ್‌ಲೈನ್‌ ಬೋಧನೆಯ ಅನುಷ್ಠಾನದ ಕುರಿತು ಚರ್ಚಿಸುವ ಮೊದಲು ರಾಜ್ಯದ ವಿದ್ಯಾರ್ಥಿಗಳ ಪಾಲಕ, ಪೋಷಕರ ಆರ್ಥಿಕ ಪರಿಸ್ಥಿತಿಯನ್ನು ಸರಕಾರ ಅಧ್ಯಯನ ಮಾಡಬೇಕು.

ನಗರ ಹಾಗೂ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಗಳಲ್ಲಿ ಓದು ತ್ತಿರುವ ಬಹುತೇಕರಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟ. ಆನ್‌ಲೈನ್‌ ಶಿಕ್ಷಣದ ಸಾಧಕ-ಬಾಧಕ ಅಧ್ಯ ಯನ ಮಾಡದೆ ಅನುಷ್ಠಾನಿಸಿದಲ್ಲಿ ಕೆಲವೇ ವರ್ಷಗಳಲ್ಲಿ ಇನ್ನೊಂದು ರೀತಿಯ ಶೈಕ್ಷಣಿಕ ತಾರತಮ್ಯ ಆರಂಭವಾಗುವ ಸಾಧ್ಯತೆ ಹೆಚ್ಚು.

ಖಾಸಗಿ ಶಾಲೆಗಳಿಗೆ ಆನ್‌ಲೈನ್‌ ತರಗತಿ ನಡೆಸಲು (ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿ ಹೊರತು) ಸರಕಾರ ಅನುಮತಿಸಿದೆ. ಸರಕಾರಿ ಶಾಲೆ ಗಳಲ್ಲೂ ಆನ್‌ಲೈನ್‌ ತರಗತಿ ನಡೆಸುವ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ಆರಂಭ ವಾಗಿದೆ. ಆದರೆ ಸರಕಾರಿ ಶಾಲೆಯ ವಾಸ್ತ ವಾಂಶಗಳನ್ನು ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರಕಾರ ಅರಿಯಬೇಕು.

ನಿತ್ಯದ ಬದುಕೇ ಕಷ್ಟ…
ಆನ್‌ಲೈನ್‌ ತರಗತಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಬೇಕು. ಅದರ ಜತೆಗೆ ಇಂಟ ರ್ನೆ ಟ್‌ ಅತಿ ಆವಶ್ಯಕ. ಸರಕಾರಿ ಶಾಲೆಯ ಮಕ್ಕಳ ಪಾಲಕ, ಪೋಷಕರ ಆರ್ಥಿಕ ಪರಿಸ್ಥಿತಿಯ ಅಧ್ಯಯನ ನಡೆಸಿ ಎಷ್ಟು ಮಂದಿ ಈ ಉದ್ದೇಶಕ್ಕಾಗಿ ಮಕ್ಕಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಖರೀದಿಸಿ ಕೊಡಬಲ್ಲರು ಎಂಬು ದನ್ನು ವಸ್ತುನಿಷ್ಠವಾಗಿ ಅರಿಯಬೇಕು. ಗ್ರಾಮೀಣ ಭಾಗದ ಅದೆಷ್ಟೋ ಕುಟುಂಬಗಳಿಗೆ ನಿತ್ಯದ ಜೀವನವೇ ಕಷ್ಟವಾಗಿರುವಾಗ ಇದೆಲ್ಲ ಸಾಧ್ಯವೇ? ಅಥವಾ ಸರಕಾರವೇ ಮಕ್ಕಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಜತೆಗೆ ಉಚಿತ ಇಂಟರ್ನೆಟ್‌ ಸೇವೆ ಒದಗಿಸುತ್ತದೆಯೇ? ಎಂಬ ಪ್ರಶ್ನೆಗೂ ಉತ್ತರ ಬೇಕಿದೆ.

ಗ್ರಾಮೀಣ ಶಾಲೆಗಳೇ ಹೆಚ್ಚು
ರಾಜ್ಯದಲ್ಲಿ ಒಟ್ಟು 78,523 ಶಾಲೆಗಳಿವೆ. ಇವುಗಳಲ್ಲಿ 22,442 ಶಾಲೆಗಳು ನಗರ ಪ್ರದೇಶದಲ್ಲಿ ಹಾಗೂ 56,081 ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಸರಕಾರಿ ಶಾಲೆಗಳ ವಿಚಾರಕ್ಕೆ ಬಂದರೆ ರಾಜ್ಯದಲ್ಲಿರುವ ಒಟ್ಟು ಸರಕಾರಿ ಶಾಲೆಗಳ ಪೈಕಿ 38,588 ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ 5,164 ನಗರ ಪ್ರದೇಶದಲ್ಲಿವೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲೂ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ. ಹಾಗಿರುವಾಗ ರಾಜ್ಯ ಸರಕಾರ ಆನ್‌ಲೈನ್‌ ಶಿಕ್ಷಣ ಬೋಧನೆ ಅಳವಡಿಸಿದರೆ ಗ್ರಾಮೀಣ ಭಾಗದ ಬಹುಪಾಲು ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ.

ಮೊಬೈಲ್‌, ಲ್ಯಾಪ್‌ಟಾಪ್‌, ಇಂಟರ್ನೆಟ್‌ ಸೌಲಭ್ಯದ ಜತೆಗೆ ನೆಟ್‌ವರ್ಕ್‌ ಕೂಡ ಸಮರ್ಪಕವಾಗಿ ಲಭ್ಯವಾಗಿದೆಯೇ ಎಂಬುದನ್ನು ಆರಂಭದಲ್ಲೇ ಖಾತರಿಪಡಿಸಿಕೊಳ್ಳಬೇಕು. ಈ ಎಲ್ಲ ಸೌಲಭ್ಯಗಳನ್ನು ಸರಕಾರ ಅಥವಾ ಶಿಕ್ಷಣ ಇಲಾಖೆ ಒದಗಿಸಿದ ಅನಂತರ ಅನುಷ್ಠಾನದ ಯೋಚನೆ ಮಾಡಬೇಕು. ಆನ್‌ಲೈನ್‌ ಬೋಧನೆಯಿಂದ ಯಾವುದೇ ತಾರತಮ್ಯ ಆಗದಂತೆಯೂ ಸರಕಾರ ಎಚ್ಚರ ವಹಿಸಬೇಕು. ಇವೆಲ್ಲದಕ್ಕೂ ಸೌಲಭ್ಯ ಅತಿ ಮುಖ್ಯ. ಅದನ್ನು ಒದಗಿಸಿ, ಅನಂತರ ಮುಂದಿನ ನಿರ್ಧಾರ ಮಾಡಬೇಕು.

ರಾಮಲಿಂಗಾ ರೆಡ್ಡಿ , ಮಾಜಿ ಶಿಕ್ಷಣ ಸಚಿವ

ಟಾಪ್ ನ್ಯೂಸ್

ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ಬ್ಯಾನ್‌

ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ಬ್ಯಾನ್‌

ಕೇದಾರ ಯಾತ್ರೆ ಸ್ಥಗಿತ; ಉತ್ತರಾಖಂಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ಕೇದಾರ ಯಾತ್ರೆ ಸ್ಥಗಿತ; ಉತ್ತರಾಖಂಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

1-qwqrrer

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

ಮೊದಲ ಬಾರಿ ರಸ್ತೆ ಮೇಲೆ ನಮಾಜ್‌ ನಡೆದಿಲ್ಲ: ಯೋಗಿ ಆದಿತ್ಯನಾಥ

ಮೊದಲ ಬಾರಿ ರಸ್ತೆ ಮೇಲೆ ನಮಾಜ್‌ ನಡೆದಿಲ್ಲ: ಯೋಗಿ ಆದಿತ್ಯನಾಥ

heddari1

ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ

1-fdsfsfdsf

ಬುದ್ಧನ ಮಾರ್ಗ ಅನುಸರಿಸುವ ಅವಶ್ಯಕತೆಯಿದೆ : ಜಪಾನ್ ನಲ್ಲಿ ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

heddari1

ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ

ಕೋವಿಡ್‌ ನಿಯಮ ಉಲ್ಲಂಘನೆ: ಸಿದ್ದರಾಮಯ್ಯ, ಡಿಕೆಶಿಗೆ ನೋಟಿಸ್‌ ಜಾರಿ

ಕೋವಿಡ್‌ ನಿಯಮ ಉಲ್ಲಂಘನೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸೇರಿ 29 ಮಂದಿಗೆ ಸಮನ್ಸ್‌

ro-cha

ತಿರುಚಿದ ನಾಡಗೀತೆ ಸಾಲು: ರೋಹಿತ್ ಚಕ್ರತೀರ್ಥ ಕ್ಷಮೆಗೆ ಒಕ್ಕಲಿಗರ ಸಂಘ ಆಗ್ರಹ

ಫೋಟೊ ಶೂಟ್‌ ಮಾಡಿಕೊಂಡರೂ ಮನಸ್ತಾಪ ಹೋಗಲ್ಲ: ಬಿಜೆಪಿ

ಫೋಟೋ ಶೂಟ್‌ ಮಾಡಿಕೊಂಡರೂ ಮನಸ್ತಾಪ ಹೋಗಲ್ಲ: ಬಿಜೆಪಿ

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ಬ್ಯಾನ್‌

ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ಬ್ಯಾನ್‌

ಕೇದಾರ ಯಾತ್ರೆ ಸ್ಥಗಿತ; ಉತ್ತರಾಖಂಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ಕೇದಾರ ಯಾತ್ರೆ ಸ್ಥಗಿತ; ಉತ್ತರಾಖಂಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

1-qwqrrer

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

ಮೊದಲ ಬಾರಿ ರಸ್ತೆ ಮೇಲೆ ನಮಾಜ್‌ ನಡೆದಿಲ್ಲ: ಯೋಗಿ ಆದಿತ್ಯನಾಥ

ಮೊದಲ ಬಾರಿ ರಸ್ತೆ ಮೇಲೆ ನಮಾಜ್‌ ನಡೆದಿಲ್ಲ: ಯೋಗಿ ಆದಿತ್ಯನಾಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.