ಸಾಲು ನಿಲ್ದಾಣವಿದ್ದರೂ ನಿರ್ವಹಣೆಯಿಲ್ಲದೆ ನಿರುಪಯುಕ್ತ

Team Udayavani, Apr 21, 2021, 6:10 AM IST

ಸಾಲು ನಿಲ್ದಾಣವಿದ್ದರೂ ನಿರ್ವಹಣೆಯಿಲ್ಲದೆ ನಿರುಪಯುಕ್ತ

ಕಾರ್ಕಳ: ಜೋಡುಕಟ್ಟೆ- ಬೋರ್ಕಟ್ಟೆ ರಸ್ತೆ ಮಧ್ಯೆ ಅತ್ಯಲ್ಪ ಅಂತರದಲ್ಲಿ ಏಳು ಬಸ್‌ ನಿಲ್ದಾಣಗಳಿವೆ. ಅವುಗಳ ಪೈಕಿ ಕೆಲವು ಸಾರ್ವಜನಿಕರಿಗೆ ಬಳಸಲು ಯೋಗ್ಯವಾಗಿಲ್ಲ.

ಕಾರ್ಕಳದಿಂದ ಬಜಗೋಳಿ ರಸ್ತೆಯ ಮೂಲಕ 3 ಕಿ.ಮೀ. ದೂರ ಕ್ರಮಿಸಿದ ಬಳಿಕ ಜೋಡುಕಟ್ಟೆ ಜಂಕ್ಷನ್‌ನಲ್ಲಿ ಬಲಬದಿಗೆ ಕವಲೊಡೆದು ಬೋರ್ಕಟ್ಟೆ ಮೂಲಕ ರೆಂಜಾಳ, ಇರ್ವತ್ತೂರು ಭಾಗಕ್ಕೆ ತೆರಳಲು ರಸ್ತೆ ಸಂಪರ್ಕ ವಿದೆ. ಜೋಡುಕಟ್ಟೆ ಜಂಕ್ಷನ್‌ನಿಂದ ಮುಂದಕ್ಕೆ ಸಂಚರಿಸಿದಾಗ ಕೇವಲ 1.5 ಕಿ.ಮೀ. ಅಂತರದಲ್ಲಿ ಏಳು ಬಸ್‌ ನಿಲ್ದಾಣಗಳಿವೆ. ಕಳೆದ ಕೆಲ ವರ್ಷಗಳ
ಅವಧಿಯಲ್ಲಿ ಹಂತ ಹಂತವಾಗಿ ಇವು ಗಳನ್ನು ಪಂಚಾಯತ್‌ ವತಿಯಿಂದ ವಿವಿಧ ಅನುದಾನಗಳಿಂದ ಇಲ್ಲಿ ನಿರ್ಮಿಸಲಾಗಿದೆ.

ಮಿಯ್ನಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ರಸ್ತೆ ಹಾದುಹೋಗಿದೆ. ಪಿಡಬ್ಲ್ಯುಡಿ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು. ರಸ್ತೆಯೂ ಅಗಲ ಕಿರಿದಾಗಿದೆ. ಬೋರ್ಕಟ್ಟೆ ರಾಮಪುರ ಶಾಲೆ, ಲಕ್ಷ್ಮೀದೇವಿ ಆಂಗ್ಲಮಾಧ್ಯಮ ಶಾಲೆ, ತಾವರೆಗೇಟ್‌, ಬಲಿಪರಪಾಡಿ, ಕುದೊRàಳಿ, ಜೋಡುಕಟ್ಟೆ ಆಸುಪಾಸುಗಳಲ್ಲಿ ಎರಡು ಬಸ್‌ ನಿಲ್ದಾಣವಿದೆ. ಇವುಗಳ ಪೈಕಿ ನಾಲ್ಕು ಬಸ್‌ ನಿಲ್ದಾಣದ ಮುಂದೆ ಗಿಡಗಂಟಿಗಳು ಬೆಳೆದು ನಿಲ್ದಾಣವೇ ಮುಚ್ಚಿ ಹೋಗಿದೆ. ಇನ್ನು ರಸ್ತೆಗಿಂತ ಅಂತರದಲ್ಲಿ ಇರುವ ಬಸ್‌ನಿಲ್ದಾಣಗಳ ಮುಂದೆ ಚರಂಡಿಯೂ ಇದ್ದು ಅವುಗಳನ್ನು ದಾಟಿ ಬಸ್‌ನಿಲ್ದಾಣಕ್ಕೆ ತೆರಳಬೇಕು. ಅವುಗಳು ಕೂಡ ಹೂಳು, ಪೊದೆಗಳಿಂದ ಆವರಿಸಿಕೊಂಡಿದೆ.

ರಸ್ತೆ ಬದಿಯೇ ಕಾಯುವ ಸ್ಥಿತಿ!
ಬಸ್‌ ನಿಲ್ದಾಣಗಳು ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಬಸ್‌ ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಿಲ್ಲ. ರಸ್ತೆ ಬದಿಯಲ್ಲೇ ಬಸ್‌, ವಾಹನಗಳಿಗೆ ಕಾದು ನಿಂತಿರುತ್ತಾರೆ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೂ ಎಲ್ಲರೂ ರಸ್ತೆ ಬದಿಯೇ ಬಸ್‌ ಕಾಯುತ್ತಿರುತ್ತಾರೆ.

ಆಗಿದ್ಧ ಆಸಕ್ತಿ ಈಗಿಲ್ಲ!
ಬಸ್‌ನಿಲ್ದಾಣ ಕಟ್ಟಿಸಲು ಇದ್ದ ಆಸಕ್ತಿ ಅನಂತರದ ದಿನಗಳಲ್ಲಿ ನಿರ್ವಹಣೆ ವಿಚಾರದಲ್ಲಿ ಇಲ್ಲದೆ ನಿರ್ಲಕ್ಷ ವಹಿಸಿರು ವುದು ಇಲ್ಲಿ ಕಂಡುಬರುತ್ತಿದೆ. ಕೇವಲ 1.5 ಕಿ.ಮೀ. ಅಂತರದಲ್ಲಿ ಇಷ್ಟೊಂದು ಬಸ್‌ ನಿಲ್ದಾಣಗಳನ್ನು ಕಟ್ಟಿರುವುದು ಯಾಕೆ ಎನ್ನುವ ಅನುಮಾನ ಈ ರಸ್ತೆಯಲ್ಲಿ ತೆರಳಿದವರಿಗೆ ಅನಿಸದೆ ಇರದು. ಹೆಚ್ಚಿನ ಅವಶ್ಯಕತೆ ಇರುವ ಕಡೆಯಲ್ಲಿ ಇದನ್ನು ನಿರ್ಮಿಸುವ ಬದಲು ಕಡಿಮೆ ಅಂತರದಲ್ಲಿ ಇಷ್ಟೊಂದು ಬಸ್‌ ನಿಲ್ದಾಣ ನಿರ್ಮಿಸಿ ಲಕ್ಷಾಂತರ ರೂ. ಹಣ ಪೋಲು ಮಾಡಿರುವುದರ ಹಿಂದಿನ ಉದ್ದೇಶದ ಕುರಿತು ಸಾರ್ವಜನಿಕರಲ್ಲಿ ಸಂದೇಹಗಳಿವೆ. ಕನಿಷ್ಠ ನಿರ್ಮಾಣಗೊಂಡ ನಿಲ್ದಾಣಗಳನ್ನು ಸುವ್ಯವಸ್ಥಿತವಾಗಿ ಇಡಬೇಕು ಎನ್ನುವ ಒತ್ತಾಯ ಸ್ಥಳೀಯರದ್ದಾಗಿದೆ. ಹಿಂದಿನ ಆಡಳಿತ ಮಂಡಳಿಗಳ ಅವಧಿಯಲ್ಲಿ ಇವುಗಳ ನಿರ್ಮಾಣವಾಗಿದ್ದರೂ ಇದರ ಸುಸ್ಥಿತಿಗೆ ಈಗಿನ ಆಡಳಿತ, ಅಧಿಕಾರಿಗಳು ಇದಕ್ಕೆ ಜವಾಬ್ದಾರರಾಗುತ್ತಾರೆ.

ನಿರ್ವಹಣೆ ಮಾಡಲಾಗುವುದು
ಹಿಂದಿನ ಕೆಲವು ವರುಷಗಳಿಂದಲೂ ಹೀಗೆ ನಿರ್ವಹಣೆಯಿಲ್ಲದೆ ಇತ್ತು. ಇಲ್ಲಿಯ ತನಕವೂ ಅದು ಯಾರ ಕಣ್ಣಿಗೆ ಬಿದ್ದಿರಲಿಲ್ಲ. ನಿರ್ವಹಣೆಗೆ ಮುಂದಿನ ಕ್ರಿಯಾ ಯೋಜನೆಯಲ್ಲಿ ಹಣ ಇರಿಸುವುದಕ್ಕೆ ಪ್ರಯತ್ನಿಸಲಾಗುವುದು.
-ಗಿರೀಶ್‌ ಅಮೀನ್‌, ಅಧ್ಯಕ್ಷರು, ಗ್ರಾ.ಪಂ. ಮೀಯಾರು

ಚಾಲಕ ಸುಸ್ತೋ ಸುಸ್ತು !
ಬಸ್ಸಿನ ಡ್ರೈವರಿಗೆ ತಲೆಬಿಸಿ. ಗೇರ್‌ಚೇಂಜ್‌ ಮಾಡುವ ಮೊದಲೇ ಮತ್ತೂಂದು ಸ್ಟಾಫ್ ಬಂದಾಗಿರುತ್ತೆ. 7 ಬಸ್‌ಸ್ಟಾಂಡ್‌ ಕಳೆದು ತಲುಪುವಾಗ ಚಾಲಕ ಸುಸ್ತೋ ಸುಸ್ತು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.