Udayavni Special

ಅಗತ್ಯ ವಸ್ತು ಖರೀದಿಗೆ ವಾಹನ ಬಳಸದೆ ಕಾಲ್ನಡಿಗೆಯಲ್ಲಿ ಬನ್ನಿ: ಕಾರವಾರ ಜಿಲ್ಲಾಧಿಕಾರಿ ಸೂಚನೆ


Team Udayavani, May 9, 2021, 9:24 PM IST

ಅಗತ್ಯ ವಸ್ತು ಖರೀದಿಗೆ ಕಾಲ್ನಡಿಗೆಯಲ್ಲಿ ಬನ್ನಿ, ವಾಹನ ಬಳಕೆಗೆ ನಿರ್ಬಂಧ: ಕಾರವಾರ ಡಿಸಿ

ಕಾರವಾರ: ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕಾಗಿ ಮೇ 10 ರಿಂದ ಮೇ. 24 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಹೊಗಿ ತರಕಾರಿ, ಮೀನು, ಹಾಲು ಸೇರಿದಂತೆ ಇತರೇ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನ ಸೇರಿದಂತೆ ,ಯಾವುದೇ ವಾಹನ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸರಕಾರ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ಮೇ. 10ರಂದು ಬೆಳಿಗ್ಗೆ 6ರಿಂದ ಮೇ. 24ರಂದು ಬೆಳಿಗ್ಗೆ 6 ರವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಆರೋಗ್ಯ, ಕೋವಿಡ್ ಕಾರ್ಯಕರ್ತರು, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಈಗಾಗಲೇ ಸರಕಾರ ಅನುಮತಿಸಿರುವ ಕೆಲವು ಕಾರ್ಯಗಳಿಗೆ ಗುರುತಿನ ಚೀಟಿ ತೋರಿಸಿದರೇ ಮಾತ್ರ ವಾಹನ ಬಳಸಲು ಅವಕಾಶವಿರುತ್ತದೆ. ಉಳಿದವರು ಕಾಲ್ನಡಿಗೆ ಮೂಲಕ ತಮ್ಮ ಕಾರ್ಯ ನಿರ್ವಹಿಸಬಹುದು. ಇದನ್ನೂ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲದೇ ಜಿಲ್ಲೆಯ ಎಲ್ಲ ಸ್ಥಳಿಯ ಸಂಸ್ಥೆಗಳು, ತಹಶಿಲ್ದಾರರು ಸೂಕ್ತ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದು, ಪ್ರತೀ ಬೀದಿ ಬೀದಿಗೆ ಬೀದಿ ವ್ಯಾಪಾರಸ್ಥರನ್ನ ಗುರುತಿಸಿ ಅವರ ಮೂಲಕ ಜನರಿಗೆ ಅಗತ್ಯವಿರುವ ತರಕಾರಿ, ಹಣ್ಣು, ಮೀನು ಮಾರಾಟ ಮಾಡಲಿಕ್ಕೆ ಸೂಕ್ತ ಕಾರ್ಯಸೂಚಿ ಸಿದ್ಧಪಡಿಸಿಕೊಂಡಿದ್ದಾರೆ. ಹೀಗಾಗಿ ಯಾರೋಬ್ಬರು ಅನಗತ್ಯವಾಗಿ ಹೊರಗಡೆ ಬರಬಾರದು ಎಂದರು.

ಜನರು ಜವಾಬ್ದಾರಿ ಮರೆತು ಗುಂಪು ಗುಂಪಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಇಂದು ಒಂದೇ ದಿನಕ್ಕೆ ಜಿಲ್ಲೆಯಲ್ಲಿ 1277 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿದೆ. ಆದರೆ ಇದು ಹೀಗೆ ಮುಂದುವರೆದರೆ ಮುಂದಿನ 6-7 ದಿನಗಳಲ್ಲಿ ಸೊಂಕಿತರ ಸಂಖ್ಯೆ ಕೈಮೀರುವ ಸಾಧ್ಯತೆಗಳಿವೆ. ಹೀಗಾಗಿ ಕರೋನಾ ನಿಯಂತ್ರಣಕ್ಕೆ ಈ ಲಾಕ್‌ಡೌನ್ ಒಂದು ಒಳ್ಳೆಯ ಅವಕಾಶವೆಂದು ಭಾವಿಸಿ ಜಿಲ್ಲೆಯ ಜನರು ಕೋವಿಡ್ ಸೊಂಕಿನ ಚೈನನ್ನು ಕಡಿತಗೊಳಿಸಬೇಕಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಅದರಲ್ಲೂ ಅನುಮತಿ ಪಡೆದಿರುವ ಮದುವೆಗಳಿಗೆ ಮಾತ್ರ ಸರಕಾರ ಅವಕಾಶ ನಿಡಿದೆ. ಅದೂ ಮನೆಯಲ್ಲಿಯೇ 40 ಜನರನ್ನು ಸೇರೊಸಿಕೊಂಡು ಮದುವೆ ಮಾಡಬೆಕು ಎಂಬ ನಿರ್ಬಂಧ ಹೇರಿದೆ. ಹೀಗಾಗಿ ಜನರು ಅನಾವಶ್ಯಕವಾಗಿ ಜನರನ್ನ ಸೇರಿಸುವಂತ ಪ್ರಯತ್ನ ಮಾಡಬಾರದು. ಸರಕಾರ ನೀಡಿರುವ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳಬೇಕು. ಸರಕಾರ ಅನುಮತಿಸಿರುವ ಕಾರ್ಯಚಟುವಟಿಕೆಗಳಿಗೆ ಮಾತ್ರ ಸ್ವಲ್ಪ ಸಡಿಲಿಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲೂ ಚಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವವರಿಗೆ ಸೀಲ್ ಹಾಕುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅವರನ್ನ ಹೋಮ್ ಐಸೋಲೇಶನ್‌ನಲ್ಲಿ ಇಡುವಂತ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲೂ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಯಾಗಲಿದೆ ಎಂದರು.

ಇದನ್ನೂ ಓದಿ :ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ 485 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 297 ಜನ ಆಕ್ಸಿಜನ್ ಬೆಡ್‌ಗಳಲ್ಲಿದ್ದಾರೆ. 188 ಜನ ಆಕ್ಸಿಜನ್ ರಹಿತ ಬೆಡ್‌ಗಳಲ್ಲಿದ್ದಾರೆ. ಜಿಲ್ಲೆಯಲ್ಲಿ 298 ಆಕ್ಸಿಜನ್ ಸಹಿತ ಹಾಗೂ 218 ಆಕ್ಸಿಜನ್ ರಹಿತ ಬೆಡ್‌ಗಳ ಲಭ್ಯತೆಯಿದೆ. ಆಕ್ಸಿಜನ್ ಸಿಲಿಂಡರ್‌ಗಳು 1200, ರೆಮ್‌ಡಿಸಿವಿರ್ 404 ಲಭ್ಯತೆಯಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 5870 ಸಕ್ರಿಯ ಪ್ರಕರಣಗಳಿದ್ದು, 502 ಸೊಂಕಿತರು ಆಸ್ಪತ್ರೆಯಲ್ಲಿದ್ದಾರೆ.

5368 ಜನರು ಹೋಮ್ ಐಸೋಲೇಶನ್‌ನಲ್ಲಿದ್ದು, ಜಿಲ್ಲೆಯಲ್ಲಿ ಈವರೆಗೂ ಒಟ್ಟಾರೆ 289 ಜನರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

ಮೇ. 8ರಂದು ಬೆಳಿಗ್ಗೆಯಿಂದ ರಾತ್ರಿ ರವರೆಗೆ ದಿನದ 24 ಗಂಟೆಯೊಳಗೆ ಮಾಡಲಾದ ಕೋವಿಡ್-19 ಪರೀಕ್ಷೆಯಲ್ಲಿ 1277 ಜನರಿಗೆ ಕರೋನಾ ಗುಣಲಕ್ಷಣಗಳಿರುವುದು ಕಂಡುಬಂದಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬುಲೆಟಿನ್‌ಗೂ ವ್ಯತ್ಯಾಸಗಳಿದ್ದು, ಈ ಮಾಹಿತಿ ಜಿಲ್ಲಾ ಮಟ್ಟದ ಬುಲಿಟಿನ್‌ನಿಂದ ಕೊಡಲಾಗಿದೆ. ಜಿಲ್ಲೆಯಲ್ಲಿ ಅನಗತ್ಯವಿರುವವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿಲ್ಲ. ಯಾರಿಗೆಲ್ಲ ಕೋವಿಡ್ ಗುಣಲಕ್ಣಣಗಳಿವೆಯೋ ಅಂತವರಿಗೆ ಮಾತ್ರ ಕರೋನಾ ಪರೀಕ್ಷೆ ನಡೆಸಲು ಸರಕಾರದಿಂದ ಅದೇಶ ಬಂದಿದ್ದು, ಆ ಪ್ರಕಾರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಜಿಲ್ಲೆಗೆ ಬಳ್ಳಾರಿಯಿಂದ ಆಕ್ಸಿಜನ್ ಸರಬರಾಜಾಗುತ್ತಿದ್ದು, ಪದ್ಮಾವತಿ ಗ್ಯಾಸ್ ಏಜನ್ಸಿ(ರೀಫಿಲ್ಲಿಂಗ್)ಯಿಂದ ಜಿಲ್ಲೆಯಲ್ಲಿ ಆಮ್ಲಜನಕ ವಿತರಿಸಲಾಗುತ್ತಿದೆ. ಜಿಲ್ಲೆಗೆ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ನೀಡಲಾಗುತ್ತಿದ್ದು, ದಿನಕ್ಕೆ 5 ಕಿಲೋ ಲೀಟರ್ (5.7 ಮೆಟ್ರಿಕ್ ಟನ್) ನಷ್ಟು ನೀಡಲು ಸರಕಾರ ಅವಕಾಶ ಮಾಡಿದೆ. ಇದು ಜಿಲ್ಲೆಯ ಈ ಹಿಂದಿನ ಕೋವಿಡ್-19 ಸನ್ನಿವೇಶಗಳ ಆಧಾರದಮೇಲೆ ಆಗಿದೆ. ಆದರೆ ಇತ್ತಿಚೆಗೆ ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್-19 ನಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬೆಡ್‌ಗಳು ಭರ್ತಿಯಾದ ಹಿನ್ನಲೆಯಲ್ಲಿ ಜಿಲ್ಲಿಯಲ್ಲಿ ಆಕ್ಸಿಜನ್ ಹಾಗೂ ಬೆಡ್‌ಗಳ ಅವಶ್ಯಕತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಲಿದ್ದು, ಆಕ್ಸಿಜನ್ ಸರಬರಾಜಿನ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಸರಿಯಾಗಿ ಮಾತುಕತೆ ನಡೆಸಿ ಜಿಲ್ಲೆಗೆ ಅಗತ್ಯವಿರುವಷ್ಟು ಆಕ್ಸಿಜನ್, ರೆಮ್‌ಡಿಸಿರ್, ವ್ಯಾಕ್ಸಿನ್ ತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಸದ್ಯ ಸರಕಾರ ಜಿಲ್ಲೆಗೆ ನೀಡಿರುವುದನ್ನು ಸೂಕ್ತ ರೀತಿಯಲ್ಲಿ ಪೂರೈಕೆ ಮಾಡುವಲ್ಲಿ ಯಾವುದೇ ಅಡೆತಡೆಗಳು ಆಗದಂತೆ ನೋಡಿಕೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ಅಭಾವ ಇರುವುದಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಜಿಲ್ಲೆಯಲ್ಲಿ ಮೊದಲಿಗಿದ್ದ ಲಾಕ್‌ಡೌನ್‌ಗೂ ಮೇ. 10 ರಿಂದ ಜಾರಿಯಾಗಲಿರುವ ಲಾಕ್‌ಡೌನ್‌ಗೆ ತುಂಬಾ ವ್ಯತ್ಯಾಸವಿದೆ. ಹಿಂದಿನ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಕೆಲಸ ಕಾರ್ಯಗಳಿಗೆ ಅವಕಾಶವಿತ್ತು. ಆದರೆ ಈ ಲಾಕ್‌ಡೌನ್ ಸಮಯದಲ್ಲಿ ಆಸ್ಪತ್ರೆ, ಮೆಡಿಕಲ್ ಶಾಪ್, ಸರಕಾರಿ ಕಚೇರಿಗಳು, ಕೆಲವು ಅನುಮತಿಯಿರುವ ಖಾಸಗಿ ಕಚೇರಿಗಳಾದ ಬ್ಯಾಂಕ್‌ಗಳು, ಎಲೆಕ್ಟ್ರಿಸಿಟಿ ಕಂಪೆನಿಗಳು, ಪತ್ರಕರ್ತರು ಸೇರಿದಮನತೆ ಮದುವೆಗಾಗಿ ಈಗಾಗಲೇ ಅನುಮತಿ ಪಡೆದವರಿಗೆ ಮಾತ್ರ ಅವಖಾಶವಿದೆ. ಇಂತವರು ವಾಹನ ಬಳಸಲು ಅನುಮತಿ ಇರುತ್ತದೆ. ಹೀಗಾಗಿ ಪೊಲೀಸ್ ಇಲಾಖೆ ಇದನ್ನು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸಲಿದೆ. ಜಿಲ್ಲೆಯಲ್ಲಿ ಎರಡು ಅಂತರ್ ರಾಜ್ಯ ಹಾಗೂ 19 ಅಂತರ್ ಜಿಲ್ಲಾ ಚೆಕ್‌ಪೋಸ್ಟ್‌ಗಳಿದ್ದು, ಇವರುಗಳಿಗೆ ಅಗತ್ಯ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. ಜೊತೆಗೆ ಹೊರಗಡೆಯಿಂದ ಬರುವ ವಾಹನ ಹಾಗೂ ಜನರ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹೊರಗಡೆ ಬರಬಾರದು ಎಂದರು.

ಕಳೆದ 3-4 ದಿನಗಳಿಂದ ಜಿಲ್ಲೆಯಾದ್ಯಂತ ಅನಗತ್ಯವಾಗಿ ಹೊರಗಡೆ ತಿರುಗುವವರನ್ನು ಹಿಡಿದು ವಾಹನ ಜಪ್ತಿ ಮಾಡುತ್ತಿದ್ದೇವೆ. ಜೊತೆಗೆ ದಂಡ ಹಾಕಲಾಗುತ್ತಿದ್ದು, ಜಪ್ತಿ ಮಾಡಲಾದ ವಾಹನವನ್ನು ಸುಮಾರು 30-40 ದಿನಗಳವರೆಗೆ ನ್ಯಾಯಾಲಯಕ್ಕೆ ಒಪ್ಪಿಸುವ ಸಿದ್ಧತೆ ನಡೆದಿದೆ. ನ್ಯಾಯಾದೀಶರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ. ಪೋಲಿಸರು ಜಪ್ತಿ ಮಾಡುವ ವಾಹನಗಳು 30-40 ದಿನ ಮಾಲಿಕರ ಕೈಗೆ ಸಿಗುವುದಿಲ್ಲ. ಜನರ ಹಿತಕ್ಕಾಗಿ ಅನಿವಾರ್ಯವಾಗಿ ನಿರ್ಬಂಧ ಹೇರಿ ಈ ರೀತಿಯ ಕಾರ್ಯ ನಿರ್ವಹಿಸುತ್ತಿದ್ದು, ಜನರು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುವ ಮೂಲಕ ಸ್ವಯಂ ಪ್ರೇರಿತರಾಗಿ ತಾವೇ ಲಾಕ್‌ಡೌನ್ ಘೋಷಿಸಿಕೊಳ್ಳಬೇಕು ಎಂದರು.

ಟಾಪ್ ನ್ಯೂಸ್

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

18-21

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.