ಮಹಾ ಬಿಕ್ಕಟ್ಟು: ಸಭೆ ಸೇರಲಿರುವ ಪವಾರ್ ನೇತೃತ್ವದ ಎನ್ ಸಿಪಿ

Team Udayavani, Nov 17, 2019, 9:13 AM IST

ಮುಂಬೈ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸರಕಾರ ರಚನೆಗೆ ಪಕ್ಷಗಳು ಹರಸಾಹಸ ಪಡುತ್ತಿವೆ. ಈ ನಡುವೆ ಶರದ್ ಪವರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಸಭೆ ಸೇರಲಿದ್ದಾರೆ. ಶಿವಸೇನೆ- ಕಾಂಗ್ರೆಸ್- ಎನ್ ಸಿಪಿ ಮೈತ್ರಿಯ ಬಗ್ಗೆ ಈ ಸಭೆ ಮಹತ್ವದ್ದು ಎನ್ನಲಾಗಿದೆ.

ಪವಾರ್ ನೇತೃತ್ವದಲ್ಲಿ 21 ಮಂದಿ ಎನ್ ಸಿಪಿ ನಾಯಕರು ಇಂದು ಪುಣೆಯಲ್ಲಿ ಸಭೆ ಸೇರಲಿದ್ದು, ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ಪಕ್ಷದ ನಾಯಕ ನವಾಬ್ ಮಲಿಕ್ ಹೇಳಿಕೆ ನೀಡಿದ್ದಾರೆ.

ಸಭೆಯ ಬಳಿಕ ಶರದ್ ಪವಾರ್ ದೆಹಲಿಗೆ ಹಾರಲಿದ್ದು, ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸುವ ಸಾಧ್ಯತೆಯಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ