ವಿಶ್ವದ ನಂ.1 ಟೆನಿಸಿಗ ಜೊಕೋ ‘ಗೋಲ್ಡನ್ ಸ್ಲಾಮ್’ ಕನಸು ಛಿದ್ರ
Team Udayavani, Jul 31, 2021, 7:00 AM IST
ಟೋಕಿಯೊ: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಅವರ “ಗೋಲ್ಡನ್ ಸ್ಲಾಮ್’ ಕನಸು ಶುಕ್ರವಾರ ಒಲಿಂಪಿಕ್ಸ್ ಅಂಗಳದಲ್ಲಿ ಛಿದ್ರಗೊಂಡಿದೆ. ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ 3 ಸೆಟ್ಗಳ ಕಾದಾಟದಲ್ಲಿ ಸೋತು ನಿರ್ಗಮಿಸಿದರು. ಜ್ವೆರೇವ್ ಗೆಲುವಿನ ಅಂತರ 1-6, 6-3, 6-1.
ಗೋಲ್ಡ್ ಮೆಡಲ್ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್ ಜ್ವೆರೇವ್ ರಶ್ಯದ ಕರೆನ್ ಕಶನೋವ್ ವಿರುದ್ಧ ಸೆಣಸಲಿದ್ದಾರೆ. ಕಶನೋವ್ ಸ್ಪೇನ್ನ ಪಾಬ್ಲೊ ಕರೆನೊ ಬುಸ್ಟ ಅವರನ್ನು 6-3, 6-3ರಿಂದ ಮಣಿಸಿದರು. ಜೊಕೋವಿಕ್-ಬುಸ್ಟ ಇನ್ನು ಕಂಚಿನ ಸ್ಪರ್ಧೆಗೆ ಇಳಿಯಲಿದ್ದಾರೆ.
2021ರ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಪ್ರಶಸ್ತಿ ಎತ್ತಿರುವ ಜೊಕೋವಿಕ್, ಒಲಿಂಪಿಕ್ಸ್ ಹಾಗೂ ಯುಎಸ್ ಓಪನ್ನಲ್ಲೂ ಚಾಂಪಿಯನ್ ಆಗಿ ಮೂಡಿಬಂದದಿದ್ದರೆ ಗೋಲ್ಡನ್ ಸ್ಲಾಮ್ ಹಿರಿಮೆಗೆ ಪಾತ್ರರಾಗುತ್ತಿದ್ದರು. 1988ರಲ್ಲಿ ಸ್ಟೆಫಿ ಗ್ರಾಫ್ ಇಂಥದೊಂದು ಅಮೋಘ ಸಾಧನೆಗೈದಿದ್ದರು. ಪುರುಷರ ವಿಭಾಗದಲ್ಲಿ ಯಾರೂ ಈ ಎತ್ತರ ತಲುಪಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ