ದೇಶದಲ್ಲಿ ಹೆಚ್ಚಲಿದೆ ಆನ್‌ಲೈನ್ ಖರೀದಿ : 2025ರ ವೇಳೆಗೆ ಶೇ.17ಕ್ಕೆ ಏರಿಕೆ ಸಾಧ್ಯತೆ
Team Udayavani, Jan 4, 2022, 10:15 PM IST
ನವದೆಹಲಿ : ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿಯೇ ವಿವಿಧ ವಸ್ತುಗಳನ್ನು ಖರೀದಿಸುವ ಪ್ರಕ್ರಿಯೆ ಹೆಚ್ಚಲಿದೆ. 2025ರ ವೇಳೆಗೆ ಅದರ ಮೌಲ್ಯ 1.2 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ.
ವಿಶೇಷವಾಗಿ ಭಾರತ ಮತ್ತು ಬ್ರೆಜಿಲ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗಲಿದೆ ಎಂದು ಮಾರುಕಟ್ಟೆಗೆ ಸಂಬಂಧಿಸಿದಂತೆ ಆ್ಯಕ್ಸೆಂಚರ್ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.
ಸದ್ಯ ದೇಶದಲ್ಲಿ ಆನ್‌ಲೈನ್ ಖರೀದಿ ಪ್ರಮಾಣ ಶೇ.10 ಆಗಿದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಆನ್‌ಲೈನ್ ಖರೀದಿ ವಿಚಾರದಲ್ಲಿ ಚೀನಾ ಯಾವತ್ತೂ ಮುಂಚೂಣಿಯಲ್ಲಿಯೇ ಇರಲಿದ್ದು, 2025ರ ವೇಳೆಗೆ ಜಾಲತಾಣಗಳ ಮೂಲಕ ಆದೇಶದಲ್ಲಿ ಖರೀದಿ ಪ್ರಮಾಣ ಶೇ.17ಕ್ಕೆ ಏರಿಕೆಯಾಗಲಿದೆ.
ಇದನ್ನೂ ಓದಿ : ಖಾಲಿ ಜಾಗದಲ್ಲಿ ಬಂಗಾರದಂಥ ಬೆಳೆ : ಕೃಷಿಯಲ್ಲಿ ಯಶಸ್ಸು ಕಂಡ ಮಲೆನಾಡಿನ ರೈತನ ಕಥೆ