ಬೀದಿ ಬದಿಯ ಮಕ್ಕಳಿಗೆ ಆಸರೆಯಾಗಿದೆ “ಪೊಲೀಸ್ ಪಾಠ ಶಾಲೆ”..!

Team Udayavani, Aug 21, 2019, 5:30 PM IST

ಅಹಮದಬಾದ್ : ಶಿಕ್ಷಣ ಪ್ರತಿ ಮಕ್ಕಳ ಹಕ್ಕು. ಆದರೆ ಪ್ರತಿಯೊಬ್ಬರಿಗೂ ದಕ್ಕುವ ಹಕ್ಕಲ್ಲ. ಭಾರತ ಎಷ್ಟೇ ಮುಂದುವರೆದರೂ, ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದರೂ, ಕೆಲ ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಬೀದಿ ಬದಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂಥವರ ಏಳಿಗೆಗಾಗಿ ನೂರಾರು ಸಂಘ ಸಂಸ್ಥೆಗಳು ದುಡಿಯುತ್ತಿದೆ. ಇದೀಗ ಗುಜುರಾತಿನ ಅಹಮದಬಾದ್ ಟ್ರಾಫಿಕ್ ಪೊಲೀಸರು ಬೀದಿ ಬದಿಯ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಹೌದು. ಟ್ರಾಫಿಕ್ ಪೊಲೀಸರನ್ನು ವಾಹನ ತಡೆದು ದಂಡ ಹಾಕುವುದನ್ನು ನೋಡಿದ್ದೇವೆ. ಇಲ್ಲಿನ ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯದ ಜೊತೆ ಜೊತೆಗೆ ಶಿಕ್ಷಣದಿಂದ ವಂಚಿತರಾಗಿರುವ ಫುಟ್ ಪಾತ್ ಬದಿಯ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಉಚಿತ ಆಹಾರವನ್ನು ನೀಡುತ್ತಿದೆ. ನಗರದ ಮೂರು ಕಡೆಗಳಲ್ಲಿ  “ಪೊಲೀಸ್ ಪಾಠ ಶಾಲಾ” ಎನ್ನುವ ಕೇಂದ್ರವನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುತ್ತಿದ್ದಾರೆ.

ಸಂಚಾರ ಪೊಲೀಸ್ ಎ.ಸಿ.ಪಿ.ಅಂಕಿತ್ ಪಾಟೀಲ್ ಹೇಳುವ ಪ್ರಕಾರ “ಬೀದಿ ಬದಿಯಲ್ಲಿ ಅಲೆಯುವ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿರುತ್ತವೆ, ಅಂಥ ಮಕ್ಕಳಿಗೆ ಶಿಕ್ಷಣ ಕೊಟ್ಟು ಅವರಲ್ಲಿ ವಿದ್ಯೆಯ ಬಗ್ಗೆ ಜ್ಞಾನವನ್ನು ಬಿತ್ತಿದರೆ ಅವರು ತಾವು ಆಗಿಯೇ ಪ್ರತಿನಿತ್ಯ ಶಾಲೆಗೆ ಬರುತ್ತಾರೆ” ಎನ್ನುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ