ರಾಜಕಾರಣಿಗಳು ಲಂಚ ತಿನ್ನುವುದು ಕಡಿಮೆ ಮಾಡಬೇಕು: ಯತ್ನಾಳ್‌

Team Udayavani, Mar 11, 2022, 7:55 AM IST

ರಾಜಕಾರಣಿಗಳು ಲಂಚ ತಿನ್ನುವುದು ಕಡಿಮೆ ಮಾಡಬೇಕು: ಯತ್ನಾಳ್‌

ವಿಧಾನಸಭೆ: ರಾಜಕಾರಣಿಗಳು ಲಂಚ ತಿನ್ನುವುದನ್ನು ಕಡಿಮೆ ಮಾಡಿದರೆ ರಾಜ್ಯದ ಸಾಲದ ಹೊರೆ ಕಡಿಮೆಯಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಜೆಟ್‌ನಲ್ಲಿ ಸಮಗ್ರವಾಗಿ ಚಿಂತನೆ ಬರಬೇಕು. ಚುನಾವಣೆ ಬಂದ ಸಂದರ್ಭ ಜನಪ್ರಿಯ ಬಜೆಟ್‌ ಕೊಡುವುದು ಸಾಮಾನ್ಯವಾಗಿದೆ. ಜನಪ್ರಿಯ ಬಜೆಟ್‌ ಕೊಟ್ಟವರು ಜಯಗಳಿಸಿದ್ದು ಯಾರೂ ಇಲ್ಲ. ಈಗ ಜಯ ಗಳಿಸಲು ಕೊನೆಯ 15 ದಿನ ಸಾಕು. ಈಗ ಜನ ಗಾಳಿ ನೋಡುತ್ತಾರೆ. ರಾಜಕಾರಣಿಗಳು ತಿನ್ನುವುದು ಕಡಿಮೆ ಮಾಡಬೇಕು. ಆಗ ರಾಜ್ಯದ ಸಾಲ ಕಡಿಮೆ ಆಗುತ್ತದೆ. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಮುಂದೆ ಮಂತ್ರಿ ಆಗುತ್ತೇನೆ ಇಲ್ಲವೋ. ಸಾವಿರಾರು ಕೋಟಿ ಲೂಟಿ ಮಾಡುವುದು.

ದೊಡ್ಡ ದೊಡ್ಡ ಮನೆ ಕಟ್ಟುವುದು. ಐಷಾರಾಮಿ ಜೀವನ ಮಾಡುವುದು. ಈ ವ್ಯವಸ್ಥೆಯಲ್ಲಿ ಕರ್ನಾಟಕ ಬಿಹಾರಕ್ಕಿಂತ ಕೆಟ್ಟ ಪರಿಸ್ಥಿಗೆ ಹೋಗಿದೆ ಎಂದು ಆರೋಪ ಮಾಡಿದರು.

ಬಜೆಟ್‌ನಲ್ಲಿ ಗೋ ಸಂಪತ್ತು ರಕ್ಷಣೆಗೆ ಹೆಚ್ಚು ಅನುಕೂಲ ಮಾಡುವ ಕೆಲಸ ಮಾಡಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಸಿಎಂ ಬೊಮ್ಮಾಯಿ ಕುರಿಗಾರರ ಪರ ಘೋಷಣೆ ಮಾಡಿದ್ದಾರೆ. ಇದು ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್‌ ಆಗಿದೆ. ನನಗೆ ಆತಂಕ ಇರುವುದು ಬಜೆಟ್‌ನಲ್ಲಿ ಆಗಿರುವುದು ಅನುಷ್ಟಾನ ಆಗಬೇಕು. ಘೋಷಣೆಗೆ ಮಾತ್ರ ಸೀಮಿತ ಆಗಬಾರದು. ಅತಿ ಅಶಿಸ್ತಿನ ಇಲಾಖೆ ಅಂದರೆ ಹಣಕಾಸು ಇಲಾಖೆ. ಯಾರು ಸಿಎಂ ಆಗಿದ್ದಾರೆ ಅವರಿಗೆ ಹೆಚ್ಚಿನ ಹಣ ಕೊಡುತ್ತಾರೆ. ಶಾಸಕರು ಹೋದರೆ ಅವರನ್ನು ಆರ್ಥಿಕ ಇಲಾಖೆ ಕೂರುವುದಕ್ಕೂ ಹೇಳುವುದಿಲ್ಲ. ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದರು.

ಮುಖ್ಯಮಂತ್ರಿ ಆದವರು ಇಡೀ ರಾಜ್ಯದ ಸಿಎಂ ಆಗಿ ಕೆಲಸ ಮಾಡಬೇಕು. ಜಿಲ್ಲೆಗೆ ಸೀಮಿತವಾಗಿ ಕೆಲಸ ಮಾಡಬಾರದು. ನನ್ನ ಜಿಲ್ಲೆಗೆ ಎಲ್ಲಾ ಆಗಬೇಕು. ವಿಮಾನ ನಿಲ್ದಾಣ ನಮ್ಮ ಜಿಲ್ಲೆಗೇ ಆಗಬೇಕು, ಮೆಡಿಕಲ್‌ ಕಾಲೇಜು ನಮಗೇ ಆಗಬೇಕು, ಕೃಷಿ ವಿವಿ ನಮ್ಮ ಜಿಲ್ಲೆಗೆ ಆಗಬೇಕು. ಎಲ್ಲವೂ ನಮ್ಮ ಜಿಲ್ಲೆಗೆ ಆಗಬೇಕು ಎಂದು ತಾರತಮ್ಯ ಮಾಡಬಾರದು ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡಿದರು.

ಯುಪಿ ಮಾದರಿ ಬುಲ್ಡೋಜರ್‌ ಹೊಡೆಸಿ:
ಗೋರಕ್ಷಕರು ಹಾಗೂ ಹಿಂದುಗಳ ಹತ್ಯೆ ಮಾಡುವ ಗೂಂಡಾಗಳನ್ನು ಯುಪಿ ಮಾದರಿಯಲ್ಲಿ ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಅವರ ಆಸ್ತಿಯನ್ನು ಬುಲ್ಡೋಜರ್‌ ಹೊಡೆಸಿ ಮುಟ್ಟುಗೋಲು ಹಾಕಿಕೊಳ್ಳಬೇಕು.
ರಾಜ್ಯದಲ್ಲಿ ಹಿಂದೂ ದೇಗುಲಗಳ ಮೇಲೆ ಮಾತ್ರ ನಿಯಂತ್ರಣವಿದೆ. ಚರ್ಚ್‌, ಮಸೀದಿಗಳ ಮೇಲೆ ನಿಯಂತ್ರಣ ಇಲ್ಲ. ನಮ್ಮಸರ್ಕಾರ ಅದನ್ನ ತೆಗೆದು ಹಾಕಿದೆ. ಮೆಕ್ಕಾ, ಮಸೀದಿಗೆ ಹೋಗುವವರಿಗೆ ಲಕ್ಷಗಟ್ಟಲೆ ಹಣ ಕೊಡುತ್ತಿದ್ದರು. ಕಾಶಿ ಯಾರ್ತಾರ್ಥಿಗಳಿಗೆ ಈಗ 5 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಅಷ್ಟೇ ಹಣ ಸಾಲುವುದಿಲ್ಲ. ಹೆಚ್ಚಿನ ಹಣ ನೀಡಬೇಕೆಂದು ಯತ್ನಾಳ್‌ ಆಗ್ರಹಿಸಿದರು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.