ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಪ್ರಜ್ವಲ್‌ ರೇವಣ್ಣ

ಅಜ್ಜನಿಗಾಗಿ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಿದ್ದೇನೆ...!

Team Udayavani, May 24, 2019, 10:41 AM IST

ಹಾಸನ: ನನ್ನ ಸಂಸದ ಸ್ಥಾನಕ್ಕೆರಾಜೀನಾಮೆ ನೀಡಿ , ಅಜ್ಜನನ್ನು ಮತ್ತೆ ಈ ಕ್ಷೇತ್ರದಿಂದ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಬೇಕೆಂದು ನಿರ್ಧರಿಸಿದ್ದೇನೆ ಎಂದು ಹಾಸನ ಕ್ಷೇತ್ರದ ನೂತನ ಸಂಸದ ಪ್ರಜ್ವಲ್‌ ರೇವಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಗೆಲುವಿನ ಹೊರತಾಗಿಯೂ ನೋವಿನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಜ್ವಲ್‌, ಪಕ್ಷದ ಕಾರ್ಯಕರ್ತರಿಗೆ ಹುರುಪು , ಹುಮ್ಮಸ್ಸು ಬರಬೇಕಾದರೆ ಅಜ್ಜ ಮತ್ತೊಮ್ಮೆ ಈ ಸ್ಥಾನ ತುಂಬಬೇಕು. ನಾನು ರಾಜೀನಾಮೆ ಕೊಟ್ಟು, ಸ್ಥಾನ ಬಿಟ್ಟುಕೊಟ್ಟು  ಮತ್ತೊಮ್ಮೆ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದೇನೆ. ಎಲ್ಲಾ ಮುಖಂಡರಿಗೆ, ನಮ್ಮ ಎರಡೂ ಪಕ್ಷದ ಕಾರ್ಯಕರ್ತರಿಗೆ ಮನವಿ ಎಂದು ಅಚ್ಚರಿ ಮೂಡಿಸಿದ್ದಾರೆ.

ರಾಜೀನಾಮೆ ವಿಚಾರವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸ್ವೀಕರಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಮೈತ್ರಿ ಅನ್ವಯ 7 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದ್ದ ಜೆಡಿಎಸ್‌ ಹಾಸನ ಕ್ಷೇತ್ರ ಮಾತ್ರ ಗೆದ್ದು ಕೊಂಡಿತ್ತು. ಭಾರಿ ನಿರೀಕ್ಷೆ ಇಡಲಾಗಿದ್ದ ಮಂಡ್ಯದಲ್ಲಿ ನಿಖೀಲ್‌ ಕುಮಾರಸ್ವಾಮಿ, ತುಮಕೂರಿನಲ್ಲಿ ಎಚ್‌.ಡಿ.ದೇವೇಗೌಡ ಅವರು ಸೋಲು ಅನುಭವಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ