ರಾಜಸ್ಥಾನ; ವಿವಾಹವಾಗುವುದಾಗಿ ಭರವಸೆ ನೀಡಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ ಬಿಜೆಪಿ ಶಾಸಕ
ಮತ್ತೊಂದು ಪ್ರಕರಣ ಶಾಸಕ ಪ್ರತಾಪ್ ಭೀಲ್ ವಿರುದ್ಧ ಹತ್ತು ತಿಂಗಳ ಹಿಂದೆ ಸುಖೇರ್ ನಲ್ಲಿ ದಾಖಲಾಗಿತ್ತು.
Team Udayavani, Nov 18, 2021, 2:49 PM IST
ನವದೆಹಲಿ: ರಾಜಸ್ಥಾನದ ಗೋಗುಂಡಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಪ್ರತಾಪ್ ಭೀಲ್ ವಿರುದ್ಧ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಅತ್ಯಾಚಾರ ಎಸಗಿರುವುದಾಗಿ ಎರಡು ಪ್ರಕರಣಗಳು ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಜೇಯ ಶತಕ: ಬಿಬಿಎಲ್ ನಲ್ಲಿ ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ
ಇಬ್ಬರು ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹೊಸ ಪ್ರಕರಣದಲ್ಲಿ, ಮಹಿಳೆ ಅಂಬಾಮಾತಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ಬಿಜೆಪಿ ಶಾಸಕ ಪ್ರತಾಪ್ ಭೀಲ್ ತನಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ. ನಂತರ ತನ್ನ ಮದುವೆಯಾಗುವುದಾಗಿ ನಂಬಿಸಿ ಹಲವಾರು ಬಾರಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದು ಪ್ರಕರಣ ಶಾಸಕ ಪ್ರತಾಪ್ ಭೀಲ್ ವಿರುದ್ಧ ಹತ್ತು ತಿಂಗಳ ಹಿಂದೆ ಸುಖೇರ್ ನಲ್ಲಿ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ. ಈ ಪ್ರಕರಣದಲ್ಲಿಯೂ ಶಾಸಕ ಪ್ರತಾಪ್, ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಮನೆಗೆ ಆಗಮಿಸಿದ್ದ ಶಾಸಕ ಮದುವೆಯಾಗುವುದಾಗಿ ಭರವಸೆ ನೀಡಿ, ಅತ್ಯಾಚಾರ ಎಸಗಿರುವುದಾಗಿ ಮಹಿಳೆ ತಿಳಿಸಿದ್ದು, ಈ ಆರೋಪವನ್ನು ಶಾಸಕ ಪ್ರತಾಪ್ ಭೀಲ್ ಅಲ್ಲಗಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!
ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ
ಭಾರತವು ಠಾಕ್ರೆ- ಮೋದಿಗೆ ಸೇರಿದ್ದಲ್ಲ, ಭಾರತವು..: ಅಸಾದುದ್ದೀನ್ ಓವೈಸಿ
ಮೋದಿ ಸರ್ಕಾರಕ್ಕೆ 8 ವರ್ಷ: ನಾಳೆಯಿಂದ ಬಿಜೆಪಿ ಜನಸಂಪರ್ಕ ಕಾರ್ಯಕ್ರಮ
ಆಗ ಡೆಲಿವರಿ ಬಾಯ್, ಈಗ ಸಾಫ್ಟ್ ವೇರ್ ಎಂಜಿನಿಯರ್!ಯುವ ಉದ್ಯೋಗಿಗಳಿಗೆ ಸ್ಫೂರ್ತಿಯಾದ ಹುಡುಗ