ಐಎಂಎ ವಂಚನೆ ಪ್ರಕರಣ: ರೋಷನ್‌ ಬೇಗ್‌ ಮತ್ತೆ ವಿಚಾರಣೆಗೆ ಗೈರು

Team Udayavani, Aug 13, 2019, 11:17 PM IST

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಅನರ್ಹಗೊಂಡಿರುವ ಶಾಸಕ ಆರ್‌.ರೋಷನ್‌ ಬೇಗ್‌ ಮಂಗಳವಾರ ಮತ್ತೂಮ್ಮೆ ವಿಚಾರಣೆಗೆ ಗೈರಾಗಿದ್ದು, ಈ ಮೂಲಕ ಐದು ಬಾರಿ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ಇಲ್ಲದ ಸಬೂಬುಗಳನ್ನು ಹೇಳುತ್ತ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಪ್ರಕರಣ ಸಂಬಂಧ ಎಸ್‌ಐಟಿ ಜುಲೈ 31ರಂದು ನೋಟಿಸ್‌ ಜಾರಿ ಆ.13ರಂದು ಹಾಜರಾಗುವಂತೆ ಸೂಚಿಸಿತ್ತು. ಆದರೆ, ರೋಷನ್‌ ಬೇಗ್‌ ಯಾವುದೇ ಕಾರಣ ನೀಡದೆ ಗೈರಾಗಿದ್ದಾರೆ. ಹೀಗಾಗಿ ಮುಂದಿನ ದಿನಾಂಕವನ್ನು ಸದ್ಯದಲ್ಲೇ ನಿಗದಿ ಪಡಿಸಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ರೋಷನ್‌ ಬೇಗ್‌ ಅವರಿಗೆ 400 ಕೋಟಿ ರೂ. ಕೊಟ್ಟಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ತಾನೇ ಬಿಡುಗಡೆ ಮಾಡಿದ ಆಡಿಯೋ ಮತ್ತು ವಿಡಿಯೋಗಳಲ್ಲಿ ಆರೋಪಿಸಿದ್ದ. ಈ ಸಂಬಂಧ ಎಸ್‌ಐಟಿ ಜುಲೈ 9ರಂದು ಮೊದಲ ಬಾರಿಗೆ ನೋಟಿಸ್‌ ಕೊಟ್ಟು, ಜುಲೈ 11ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ಅನಾರೋಗ್ಯ ಸಮಸ್ಯೆ, ಹಜ್‌ ಯಾತ್ರೆ ನೆಪವೊಡ್ಡಿ ಗೈರಾಗಿದ್ದರು. ಆಬಳಿಕ ನಾಲ್ಕು ಬಾರಿ ನೋಟಿಸ್‌ ಕೊಟ್ಟರೂ ಯಾವುದೋ ಕಾರಣ ನೀಡಿ ತಪ್ಪಿಸಿಕೊಂಡಿದ್ದರು. ಈ ಸಂಬಂಧ ಐದನೇ ಬಾರಿಗೆ ನೋಟಿಸ್‌ ಜಾರಿ ಮಾಡಿ ಆ.13ರಕ್ಕೆ ನಿಗದಿ ಮಾಡಿತ್ತು. ಆದರೆ, ಯಾವುದೇ ಕಾರಣ ನೀಡದೆ ಗೈರಾಗಿದ್ದಾರೆ ಎಂದು ಎಸ್‌ಐಟಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ