ಮಾಲ್ಡೀವ್ಸ್ನಲ್ಲೂ ಸೀರೆಯುಟ್ಟು ʻಕಾಂತಾರ ಲೀಲಾʼ ರೀಲ್ಸ್ – ವಿಡಿಯೋ ವೈರಲ್
Team Udayavani, Mar 2, 2023, 7:30 PM IST
ಬೆಂಗಳೂರು: ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ನಟನೆಯ ಕಾಂತಾರ ಸಿನೆಮಾ ದೇಶ-ವಿದೇಶಗಳಲ್ಲಿ ಭಾರಿ ಸದ್ದು ಮಾಡಿದ್ದು, ಅದರಲ್ಲಿನ ಅಪ್ಪಟ ಹಳ್ಳಿ ಸೊಗಡಿಗೆ ಜನ ಫುಲ್ ಫಿದಾ ಆಗಿದ್ದಾರೆ.
ವಿಶೇಷವೇನೆಂದರೆ, ಸಿನೆಮಾ ಬಳಿಕವೂ ಈ ಇಬ್ಬರೂ ತಮ್ಮ ಭಾರತೀಯತೆಯನ್ನು ಬಿಟ್ಟುಕೊಟ್ಟಿಲ್ಲ. ರಿಷಬ್ ಶೆಟ್ಟಿ ಎಲ್ಲೇ ಹೋದರೂ ಪಂಚೆ ಉಟ್ಟುಕೊಂಡೇ ಹೋಗುತ್ತಿದ್ಧಾರೆ. ಸಪ್ತಮಿ ಗೌಡ ಅವರೂ ಹೆಚ್ಚಾಗಿ ಸೀರೆ, ಭಾರತೀಯ ಧರಿಸುಗಳಲ್ಲೇ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸ್ಯಾಂಡಲ್ವುಡ್ನ ಘನತೆಯನ್ನೂ ಹೆಚ್ಚಿಸುತ್ತಿರುವುದಂತೂ ಸುಳ್ಳಲ್ಲ.
ಈ ಮಧ್ಯೆ ಕಾಂತಾರ ಲೀಲಾ ಖ್ಯಾತಿಯ ಸಪ್ತಮಿ ಗೌಡ ಮಾಲ್ಡೀವ್ಸ್ ಪ್ರವಾಸದಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರವಾಸದ ಬಗೆಗಿನ ಪೋಸ್ಟ್ಗಳನ್ನು, ರೀಲ್ಸ್ಗಳನ್ನು ಶೇರ್ ಮಾಡುತ್ತಿದ್ದಾರೆ.
ಆದರೆ ಈಗ ಅವರು ಸುದ್ದಿಯಾಗಿರುವುದು ಅವರ ಹೊಸ ಇನ್ಸ್ಟಾಗ್ರಾಮ್ ರೀಲ್ಸ್ನಿಂದ. ಮಾಲ್ಡೀವ್ಸ್ನ ಬೀಚ್ ಒಂದರಲ್ಲಿ ಸೀ ವಾಕ್ ಮೇಲೆ ನಡೆದಾಡುತ್ತಿರುವ ವೇಳೆ ಅವರು ಮಾಡಿದ ರೀಲ್ಸ್ ಒಂದು ಸಖತ್ ವೈರಲ್ ಆಗಿದೆ. ಅಲ್ಲದೇ ಅದನ್ನು ಇನ್ಸ್ಟಾಗ್ರಾಮ್, ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಸೀವಾಕ್ ಮೇಲೆ ಮೂಗುತ್ತಿ ಸುಂದರಿ ಮಾಡಿದ ಈ ರೀಲ್ಸ್ಗೆ 1977ರಲ್ಲಿ ಬಿಡುಗಡೆಯಾಗಿದ್ದ ʻಪಾವನ ಗಂಗಾʼ ಚಿತ್ರದ ʻಆಕಾಶ ದೀಪವು ನೀನುʼ ಎಂಬ ಹಾಡನ್ನೂ ಹಾಕಿದ್ದಾರೆ. ಮಾಲ್ಡೀವ್ಸ್ನಲ್ಲೂ ಸಾರಿ ಉಟ್ಟು ಈ ಚಂದನವನದ ಲೀಲಾ ಮಾಡಿದ ರೀಲ್ಸ್ಗೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೀರೆ 💯❤️🧿 pic.twitter.com/eh1WnNDzyH
— Sapthami Gowda (@gowda_sapthami) March 1, 2023
ಇದನ್ನೂ ಓದಿ: ಉಡುಪಿ: 25 ಅಂತಸ್ತಿನ ಕಟ್ಟಡವನ್ನು ಸರಸರನೆ ಏರಿದ ಕೋತಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…