2ನೇ ಡೋಸ್ ಲಸಿಕೆ ಬುಕಿಂಗ್ ರದ್ದಾಗದು : ಕೇಂದ್ರ ಸರಕಾರದಿಂದ ಸ್ಪಷ್ಟನೆ
Team Udayavani, May 17, 2021, 7:00 AM IST
ಹೊಸದಿಲ್ಲಿ: ಕೋವಿನ್ ವೆಬ್‌ಸೈಟ್‌ನಲ್ಲಿ ಈಗಾಗಲೇ 2ನೇ ಡೋಸ್ ಕೊವಿಶೀಲ್ಡ್ ಲಸಿಕೆಗೆ ಆನ್‌ಲೈನ್‌ನಲ್ಲಿ ದಿನ ಕಾದಿರಿಸಿದ್ದು ರದ್ದಾಗುವುದಿಲ್ಲ ಎಂದು ಕೇಂದ್ರ ಸರಕಾರ ರವಿವಾರ ಸ್ಪಷ್ಟಪಡಿಸಿದೆ. ಮೊದಲ ಡೋಸ್ ಪಡೆದು 84 ದಿನಗಳಿಗಿಂತ ಕಡಿಮೆ ಅವಧಿ ಆಗಿದ್ದಲ್ಲಿ ವೆಬ್‌ಸೈಟ್ ಮತ್ತು ಲಸಿಕೆ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಲು ದಿನ ಕಾದಿರಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೊವಿಶೀಲ್ಡ್‌ನ ಮೊದಲ ಡೋಸ್ ಪಡೆದ ಬಳಿಕ 2ನೇ ಡೋಸ್ ಪಡೆ ಯುವ ಅವಧಿಯನ್ನು 12-16 ವಾರ ಗಳಿಗೆ ವಿಸ್ತರಿಸಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ. ಜತೆಗೆ ಕೋವಿನ್ ವೆಬ್‌ಸೈಟ್‌ನಲ್ಲಿ ಕೂಡ ಅದಕ್ಕೆ ಸಂಬಂಧಿಸಿ ಬದಲಾವಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
16 ವಾರಗಳ ವರೆಗಿನ ಅವಧಿ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಈಗ ಕಾದಿರಿಸಲಾಗಿರುವ ದಿನವನ್ನು ರದ್ದು ಮಾಡಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.
ಶೇ.16ಕ್ಕೆ ಪಾಸಿಟಿವಿಟಿ
ದೇಶದಲ್ಲಿ ಕೊರೊನಾ ಪಾಸಿಟಿವಿಟಿ ಶೇ. 16.98ಕ್ಕೆ ಕುಸಿದಿದೆ. ಶನಿವಾರದಿಂದ ರವಿವಾರದ ಅವಧಿ ಯಲ್ಲಿ 36,18,458ಕ್ಕೆ ಸಕ್ರಿಯ ಸೋಂಕು ಇಳಿಕೆಯಾಗಿದೆ. ಈ ಅವಧಿಯಲ್ಲಿ 3,11,170 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ 4,077 ಮಂದಿ ಅಸುನೀಗಿದಾರೆ. ಸತತ 25 ದಿನಗಳ ಬಳಿಕ ದೇಶದಲ್ಲಿ 24 ತಾಸುಗಳ ಅವಧಿ ಯಲ್ಲಿ ಸೋಂಕು ಕೊಂಚ ಇಳಿ ಮುಖವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ