
SSLC ಫಲಿತಾಂಶ: ಹಾಸನ ಫಸ್ಟ್; 5 ನೇ ಸ್ಥಾನಕ್ಕೆ ಕುಸಿದ ಉಡುಪಿ
73.70 ಶೇ ವಿದ್ಯಾರ್ಥಿಗಳು ಪಾಸ್, ಇಬ್ಬರು ವಿದ್ಯಾರ್ಥಿನಿಯರಿಗೆ 625 ಕ್ಕೆ 625 !
Team Udayavani, Apr 30, 2019, 12:22 PM IST

ಬೆಂಗಳೂರು: ನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮಂಗಳವಾರ ಬೆಳಗ್ಗೆ ಪ್ರಕಟವಾಗಿದ್ದು ಶೇಕಡಾ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು,
ಆನೇಕಲ್‌ನ ಸೆಂಟ್ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ಕೊಲಬಾ ವಿಠೊಬಾ ಶಾನ್‍ಬಾಗ್ ಕಲ್ಬಕ್ಕರ್ ಹೈ ಸ್ಕೂಲ್‍ನ ನಾಗಾಂಜಲಿ ನಾಯಕ್ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಾಸನ ಮೊದಲ ಸ್ಥಾನ (89.33%), ರಾಮನಗರ ದ್ವಿತೀಯ (88.49%), ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ (88.49%), ಉತ್ತರಕನ್ನಡ ನಾಲ್ಕನೇ ಸ್ಥಾನ, ಉಡುಪಿ 5 ನೇ ಸ್ಥಾನ, ಚಿಕ್ಕೋಡಿ 6 ನೇ ಸ್ಥಾನ ಪಡೆದಿದೆ.
ಪರೀಕ್ಷೆ ಬರೆದ ಶೇಕಡಾ 79 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.68 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ 8.41 ಲಕ್ಷ ವಿದ್ಯಾರ್ಥಿಗಳು ನೋಂದಣಿ
ಮಾಡಿಕೊಂಡಿದ್ದ 8.41 ಲಕ್ಷ ವಿದ್ಯಾರ್ಥಿಗಳ ಪೈಕಿ 6,08,336 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಮಾ.21ರಿಂದ ಏ.4ರವರೆಗೆ ನಡೆದ ಎಸ್ಸೆಸ್ಸೆಲ್ಸಿ
. ಎಲ್ಲ ಪರೀಕ್ಷೆಯಲ್ಲೂ ಸರಾಸರಿ
25 ಸಾವಿರ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ರಾಜ್ಯದ 5,202 ಸರ್ಕಾರಿ ಪ್ರೌಢಶಾಲೆ, 3,244
ಅನುದಾನಿತ, 6004 ಅನುದಾನ ರಹಿತ ಸೇರಿದಂತೆ
14,450 ಪ್ರೌಢಶಾಲೆಗಳ 8,41,666 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
ಏ.10ರಿಂದ ರಾಜ್ಯದ 230 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿದೆ. 77,754 ಮೌಲ್ಯಮಾಪಕರು ಆನ್‌ಲೈನ್ ಪೋರ್ಟಿಂಗ್ ಮೂಲಕ ಅಂಕಗಳನ್ನು ಮೌಲ್ಯಮಾಪನದ ದಿನವೇ ನಮೂದಿಸಿದ್ದರು.
ಫಲಿತಾಂಶವನ್ನು http://kseeb.kar.nic.in/ ನಲ್ಲಿ ಪಡೆಯಬಹುದಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕಾಶ್ಮೀರ ಕುರಿತ ಹೇಳಿಕೆ ; ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ವಿವೇಕ್ ಅಗ್ನಿಹೋತ್ರಿ

ಬಳ್ಳಾರಿಯಲ್ಲಿ ದೇವರಿಗಾಗಿ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!!

180 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿ ಢಿಕ್ಕಿ ಲಕ್ನೋದಲ್ಲಿ ತುರ್ತು ಭೂಸ್ಪರ್ಶ

ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ : ಅಭಿಮಾನಿಗಳ ಭಾವನೆಗಳಿಗೆ ಸಕಾರಾತ್ಮಕ ಸ್ಪಂದನೆ: ಸಿಎಂ

ಪಾಕಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ: ಕಳೆದ 10 ದಿನದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ