ನವಜಾತ ಮಕ್ಕಳನ್ನೇ ಕೊಂದು ಫ್ರೀಜರ್ನಲ್ಲಿಟ್ಟ ತಾಯಿ
Team Udayavani, Jun 24, 2023, 7:02 AM IST
ನವದೆಹಲಿ: ದ.ಕೊರಿಯದಲ್ಲಿ ಅತ್ಯಂತ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ವಂತ ತಾಯಿಯೇ ತನ್ನ ನವಜಾತ ಮಕ್ಕಳನ್ನು ಕೊಂದು ಹಲವು ವರ್ಷಗಳಿಂದ ಫ್ರೀಜರ್ನಲ್ಲಿಟ್ಟಿರುವ ಘಟನೆ ಪೊಲೀಸರಿಗೆ ಗೊತ್ತಾಗಿದೆ. ತಾಯಿಯನ್ನು ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ.
2018, 2019ರಲ್ಲಿ ಹುಟ್ಟಿದ ಎರಡು ಮಕ್ಕಳನ್ನು ಆಕೆ ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ಫ್ರೀಜರ್ನಲ್ಲಿ ಬಚ್ಚಿಟ್ಟಿದ್ದಾಳೆ. ಈ ಬಗ್ಗೆ ಆಕೆಯ ಪತಿಯಲ್ಲಿ ಕೇಳಿದಾಗ, ಪತ್ನಿ ಹಾಗೆ ಮಾಡಿದ್ದು ತನಗೆ ಗೊತ್ತಿಲ್ಲ. ತಾನು ಗರ್ಭಪಾತ ಮಾಡಿಸಿಕೊಂಡೆ ಎಂದಿದ್ದಳು ಎಂದು ಪ್ರತಿಕ್ರಿಯಿಸಿದ್ದಾನೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ತಾನು ಹಾಗೆ ಮಾಡಬೇಕಾಯಿತು ಎಂದು ಪತ್ನಿ ಹೇಳಿದ್ದಾಳೆ.
ಈಗಾಗಲೇ ಆಕೆಗೆ 3 ಮಕ್ಕಳಿವೆ. 4 ಮತ್ತು 5ನೇ ಮಕ್ಕಳನ್ನು ಕೊಂದಿದ್ದಾಳೆ. ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಿದ್ದರೂ, ಮಹಿಳೆ ಇಂತಹದ್ದೊಂದು ಕುಕೃತ್ಯದಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ನೋವನ್ನುಂಟು ಮಾಡಿದೆ.