ಟೋಕಿಯೊ ಒಲಿಂಪಿಕ್ಸ್ಗೆ ಆಯ್ಕೆಯಾದ ಮನುಗೆ ಶೂಟಿಂಗ್ ನಡುವೆಯೇ ಪರೀಕ್ಷಾ ಸವಾಲು!
Team Udayavani, May 17, 2021, 6:40 AM IST
ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್ಗೆ ಆಯ್ಕೆಯಾಗಿ ಈಗ ಕ್ರೊವೇಶಿಯಾದಲ್ಲಿ ತರಬೇತಿಗೆ ತೆರಳಿರುವ ಶೂಟರ್ ಮನು ಭಾಕರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯೊಂದಿದೆ. ಅದು ಬಿಎ 4ನೇ ಸೆಮಿಸ್ಟರ್ ಎಕ್ಸಾಮ್ ಬರೆಯುವುದು!
ಈ ಪರೀಕ್ಷೆಯನ್ನು ಅವರು ಕ್ರೊವೇಶಿಯಾದಿಂದಲೇ ಬರೆಯಬೇಕಾದುದು ಅನಿವಾರ್ಯವಾಗಿದೆ. ಹೀಗಾಗಿ ಸದ್ಯ ಶೂಟಿಂಗ್ ಅಭ್ಯಾಸದ ಜತೆ ಜತೆಯಲ್ಲೇ ಪರೀಕ್ಷಾ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಮನು ಭಾಕರ್. ಎಕ್ಸಾಮ್ ಬರೆದ (ಮೇ 18) ಎರಡೇ ದಿನಗಳಲ್ಲಿ ಯುರೋಪಿಯನ್ ಚಾಂಪಿಯನ್ಶಿಪ್ ಶೂಟಿಂಗ್ ಸ್ಪರ್ಧೆ ಆರಂಭವಾಗಲಿದೆ (ಮೇ 20).
19 ವರ್ಷದ ಮನು ಡೆಲ್ಲಿ ಯುನಿವರ್ಸಿಟಿಯ ಪ್ರತಿಷ್ಠಿತ “ಲೇಡಿ ಶ್ರೀ ರಾಮ್ ಕಾಲೇಜ್’ನ ವಿದ್ಯಾರ್ಥಿನಿಯಾಗಿದ್ದಾರೆ.
“ಎರಡನ್ನೂ ನಿಭಾಯಿಸುವೆ’
“ನಾನು ಎರಡನ್ನೂ ನಿಭಾ ಯಿಸಬಲ್ಲೆ. ಹಿಂದೆಯೂ ಇಂಥ ಜಂಟಿ ಸವಾಲು ನನಗೆ ಎದುರಾಗಿತ್ತು. ಎಕ್ಸಾಮ್ ದಿನ ಯಾವುದೇ ಸ್ಪರ್ಧೆ ಇಲ್ಲದ ಕಾರಣ ಸಮಸ್ಯೆ ಇಲ್ಲ. ಮೊಬೈಲ್ ಸ್ಕ್ಯಾನರ್ ಮೂಲಕ ಉತ್ತರ ಪತ್ರಿಕೆಗಳನ್ನು ರವಾನಿಸುತ್ತೇನೆ’ ಎಂದು ಮನು ಭಾಕರ್ ತುಂಬು ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.
ಮೊದಲ ಆಯ್ಕೆ ಶೂಟಿಂಗ್
“ಮನು ವಿದ್ಯಾಭ್ಯಾಸವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ. ಆದರೆ ಎಕ್ಸಾಮ್ ಮತ್ತು ಕಾಂಪಿಟೀಶನ್ ಒಂದಕ್ಕೊಂದು ಕ್ಲಾ$Âಶ್ ಆಗುವುದಿದ್ದರೆ ಆಕೆಯ ಮೊದಲ ಆಯ್ಕೆ ಶೂಟಿಂಗ್…’ ಎಂಬುದು ತಂದೆ ರಾಮ್ಕಿಶನ್ ಭಾಕರ್ ಅವರ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್