ಕುತೂಹಲಕಾರಿ ಕಥೆ ಹೇಳಲು ರೆಡಿಯಾದ ನಿರೂಪ್ ಭಂಡಾರಿ;ಜೂ.6ಕ್ಕೆ ವಿಂಡೋ ಸೀಟ್‌ ಟ್ರೈಲರ್ ಬಿಡುಗಡೆ

ವಿಂಡೋ ಸೀಟ್ ಅಂದ್ರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ನೆನಪುಗಳಿರುತ್ತವೆ, ಕಥೆಗಳಿರುತ್ತವೆ.

Team Udayavani, Jun 3, 2022, 2:34 PM IST

ಕುತೂಹಲಕಾರಿ ಕಥೆ ಹೇಳಲು ರೆಡಿಯಾದ ನಿರೂಪ್ ಭಂಡಾರಿ;ಜೂ.6ಕ್ಕೆ ವಿಂಡೋ ಸೀಟ್‌ ಟ್ರೈಲರ್ ಬಿಡುಗಡೆ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗಂತೂ ಭಿನ್ನ ವಿಭಿನ್ನ ಟೈಟಲ್ ಹಾಗೂ ಚಿತ್ರಕತೆಗಳ ಸಿನಿಮಾಗಳು ಮೂಡಿಬರ್ತಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ವಿಭಿನ್ನ ಕಥಾಹಂದರದ ಸಿನಿಮಾ ವಿಂಡೋ ಸೀಟ್. ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ನಿರೂಪ್ ಭಂಡಾರಿ, ನಟಿಯರಾದ ಅಮೃತಾ ಅಯ್ಯಂಗಾರ್ ಹಾಗೂ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿರುವ ವಿಂಡೋ ಸೀಟ್ ಸಿನಿಮಾ ಟೈಟಲ್ ಫಿಕ್ಸ್ ಆದ ದಿನದಿಂದ್ಲೂ ತನ್ನದೇ ಆದ ವಿಶೇಷತೆಗಳಿಂದ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಈಗಾಗ್ಲೇ ಹೊರಬಂದಿರೋ ಚಿತ್ರದ ಟೀಸರ್, ಹಾಡು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಹೌದು, ಟೀಸರ್, ಸಾಂಗ್ಸ್ ನೋಡಿ ಖುಷಿ ಪಟ್ಟಿದ್ದ ಪ್ರೇಕ್ಷಕರು ವಿಂಡೋಸೀಟ್ ಚಿತ್ರದ ಟ್ರೈಲರ್ ನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಸದ್ಯ ಚಿತ್ರತಂಡ ಚಿಕ್ಕದೊಂದು ಸೊಗಸಾದ ಪ್ರೋಮೋ ರಿವೀಲ್ ಮಾಡಿದ್ದು ಆ ಮೂಲಕ ತಮ್ಮ ಸಿನಿಮಾದ ಟ್ರೈಲರ್ ರಿಲೀಸ್ ಡೇಟ್ ನ್ನು ತಿಳಿಸಿದೆ. ಜೂನ್ 6ಕ್ಕೆ ವಿಂಡೋ ಸೀಟ್ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಅಂದಹಾಗೆ ನಿರೂಪ್ ಭಂಡಾರಿ ಅವರ ಭಾವನಾತ್ಮಕ ನಿರೂಪಣೆಯ ಈ ಪ್ರೋಮೋ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತೆ.

ವಿಂಡೋ ಸೀಟ್ ಅಂದ್ರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ನೆನಪುಗಳಿರುತ್ತವೆ, ಕಥೆಗಳಿರುತ್ತವೆ. ಆದ್ರೆ ವಿಂಡೋ ಸೀಟ್ ಅನ್ನೋ ಟೈಟಲ್ ನಲ್ಲೇ ಮೂಡಿಬರ್ತಿರುವ ಈ ಚಿತ್ರದಲ್ಲಿ ಏನೆಲ್ಲಾ ಕುತೂಹಲಕಾರೀ ವಿಚಾರಗಳಿರುತ್ತವೆ ಅನ್ನೋದನ್ನು ಟ್ರೈಲರ್ ನಲ್ಲಿ ತಿಳಿಸಲಿದೆ ಚಿತ್ರತಂಡ. ಆ ಟ್ರೈಲರ್ ಹೇಗಿರಲಿದೆ ಅನ್ನೋದ್ರ ಚಿಕ್ಕ ಝಲಕ್ ಈ ಪ್ರೋಮೋ. ಚಿತ್ರದ ನಾಯಕ ರಘು ವಿಂಡೋ ಸೀಟ್ ಕಹಾನಿಯಲ್ಲಿ ನಗು, ಅಳು, ನ್ಯಾಯಕ್ಕಾಗಿ ಹೋರಾಟ, ಪ್ರೀತಿ ಈ ಎಲ್ಲದರ ಸಮ್ಮಿಶ್ರಣವಿದೆ ಅಂದ್ಮೇಲೆ ಸಿನಿಮಾದಲ್ಲಿ ಸಂತಿಂಗ್ ಸ್ಪೆಷಾಲಿಟಿ ಇದೆ ಅನ್ನೋದ್ರಲ್ಲಿ ಸಂದೇಹವಿಲ್ಲ.

ತಮ್ಮದೇ ಶೈಲಿಯ ನಿರೂಪಣೆ ಮೂಲಕ ಜನಪ್ರಿಯರಾಗಿದ್ದ ಶೀತಲ್ ಶೆಟ್ಟಿ ಸಿನಿಮಾ ಫೀಲ್ಡ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ನಟಿಯಾಗಿಯೂ ಸೈ ಅನ್ನಿಸಿಕೊಂಡ ಶೀತಲ್ ಗೆ ಹೆಚ್ಚು ಒಲವಿದ್ದದ್ದು ನಿರ್ದೇಶನದಲ್ಲಿ. ಹೀಗಾಗಿ ಸಂಗಾತಿ ಮತ್ತು ಕಾರು ಅನ್ನೋ ಎರಡು ಕಿರುಚಿತ್ರಗಳನ್ನು ಡೈರೆಕ್ಟ್ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ರು. ಇದೀಗ ವಿಂಡೋ ಸೀಟ್ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಂದಹಾಗೆ ಕೆಎಸ್ ಕೆ ಬ್ಯಾನರ್ ನಲ್ಲಿ ಜಾಕ್ ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಂಡೋ ಸೀಟ್ ಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಸಾಗರದ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸದ್ಯ ಹೊರಬಂದಿರೋ ಪ್ರೋಮೋ ಟ್ರೈಲರ್ ಬಗ್ಗೆ ಪ್ರೇಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಟಾಪ್ ನ್ಯೂಸ್

apologises to Rajasthan rally

ರ‍್ಯಾಲಿಗೆ ತೆರಳಿಯೂ ಭಾಷಣ ಮಾಡದ ಪ್ರಧಾನಿ ಮೋದಿ; ಜನರ ಬಳಿ ಕ್ಷಮೆ ಕೇಳಿದ್ದೇಕೆ?

kantara cienma review

ಚಿತ್ರ ವಿಮರ್ಶೆ: ‘ಕಾಂತಾರ’ ಹಂದರ ಬಲು ಸುಂದರ

news highcourt

ಶರಾವತಿ ಕೂಲ್ ಡ್ರಿಂಕ್ಸ್ ಎದುರು ನಡೆದ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆ

news cricket bangladesh

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌; ಭಾರತವೇ ಫೇವರಿಟ್‌; ರೌಂಡ್‌ ರಾಬಿನ್‌ ಲೀಗ್‌ ಮಾದರಿ

space news telescope

ಸೋಫಿಯಾದಿಂದ ಅದ್ಭುತ ಚಿತ್ರಗಳು ರವಾನೆ; ಫೋಟೋಗಳನ್ನು ಹಂಚಿಕೊಂಡ ನಾಸಾ

ಟ್ವಿಟರ್‌ನಲ್ಲೂ ವಿಡಿಯೋ ಸ್ಕ್ರಾಲ್‌ ಆಯ್ಕೆ; ಇನ್‌ಸ್ಟಾ ರೀಲ್ಸ್‌ ಮಾದರಿಯ ವಿಡಿಯೋಗಳು

ಟ್ವಿಟರ್‌ನಲ್ಲೂ ವಿಡಿಯೋ ಸ್ಕ್ರಾಲ್‌ ಆಯ್ಕೆ; ಇನ್‌ಸ್ಟಾ ರೀಲ್ಸ್‌ ಮಾದರಿಯ ವಿಡಿಯೋಗಳು

ಭೂಮಿಯಾಳದಲ್ಲಿದೆ ಸಮುದ್ರ! ವಜ್ರವೊಂದರ ಆಧಾರದಲ್ಲಿ ವಿಜ್ಞಾನಿಗಳ ಅಂದಾಜು

ಭೂಮಿಯಾಳದಲ್ಲಿದೆ ಸಮುದ್ರ! ವಜ್ರವೊಂದರ ಆಧಾರದಲ್ಲಿ ವಿಜ್ಞಾನಿಗಳ ಅಂದಾಜುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banaras

ಲವ್ ಸ್ಟೋರಿ ಜೊತೆ ಟೈಮ್ ಟ್ರಾವೆಲ್: ಝೈದ್‌ ಖಾನ್‌ ನಟನೆಯ ‘ಬನಾರಸ್’

ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ… ತೋತಾಪುರಿ ಸಿಕ್ಕಿದ್ದು ನನ್ನ ಪುಣ್ಯ ಎಂದ ಜಗ್ಗೇಶ್

ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ… ತೋತಾಪುರಿ ಸಿಕ್ಕಿದ್ದು ನನ್ನ ಪುಣ್ಯ ಎಂದ ಜಗ್ಗೇಶ್

ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ; ಕಾಂತಾರ ಬಗ್ಗೆ ರಕ್ಷಿತ್ ಮಾತು

ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ; ಕಾಂತಾರ ಬಗ್ಗೆ ರಕ್ಷಿತ್ ಮಾತು

ಕಣ್ಣು ತೆರೆಸಿದ ‘ಕಾಂತಾರ’: ಕರಾವಳಿ ಸೊಗಡು ಸಪ್ತಮಿ ಬೆರಗು

ಕಣ್ಣು ತೆರೆಸಿದ ‘ಕಾಂತಾರ’: ಕರಾವಳಿ ಸೊಗಡು ಸಪ್ತಮಿ ಬೆರಗು

ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?

ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

apologises to Rajasthan rally

ರ‍್ಯಾಲಿಗೆ ತೆರಳಿಯೂ ಭಾಷಣ ಮಾಡದ ಪ್ರಧಾನಿ ಮೋದಿ; ಜನರ ಬಳಿ ಕ್ಷಮೆ ಕೇಳಿದ್ದೇಕೆ?

kantara cienma review

ಚಿತ್ರ ವಿಮರ್ಶೆ: ‘ಕಾಂತಾರ’ ಹಂದರ ಬಲು ಸುಂದರ

news highcourt

ಶರಾವತಿ ಕೂಲ್ ಡ್ರಿಂಕ್ಸ್ ಎದುರು ನಡೆದ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆ

news cricket bangladesh

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌; ಭಾರತವೇ ಫೇವರಿಟ್‌; ರೌಂಡ್‌ ರಾಬಿನ್‌ ಲೀಗ್‌ ಮಾದರಿ

space news telescope

ಸೋಫಿಯಾದಿಂದ ಅದ್ಭುತ ಚಿತ್ರಗಳು ರವಾನೆ; ಫೋಟೋಗಳನ್ನು ಹಂಚಿಕೊಂಡ ನಾಸಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.