ಭಾರತೀಯ ಸೈನಿಕರಿಗೆ ವಿಶ್ವಸಂಸ್ಥೆಯ ಪದಕ ಗೌರವ
Team Udayavani, Jun 15, 2021, 7:35 AM IST
ಹೊಸದಿಲ್ಲಿ: ಸಮಸ್ತ ಭಾರತೀಯರೂ ಹೆಮ್ಮೆ ಪಡಬೇಕಾದ ವಿಚಾರವಿದು. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಭಾಗವಾಗಿ, ದಕ್ಷಿಣ ಸುಡಾನ್ನಲ್ಲಿ ಭಾರತೀಯ ಸೇನಾ ತುಕಡಿಯಲ್ಲಿನ ಎಲ್ಲ 135 ಸೈನಿಕರಿಗೆ ವಿಶ್ವಸಂಸ್ಥೆಯು ವಿಶೇಷ ಸೇವಾ ಪದಕಗಳನ್ನು ನೀಡಿ ಸನ್ಮಾನಿಸಿದೆ.
ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ ಅವರು ಎಲ್ಲ ಯೋಧರಿಗೂ ಪದಕ ಪ್ರದಾನ ಮಾಡಿದ್ದಾರೆ.
ವಿಶ್ವಸಂಸ್ಥೆಯ ದಕ್ಷಿಣ ಸುಡಾನ್ ಶಾಂತಿ ಪಾಲನಾ ಮಿಷನ್ (ಯುಎನ್ಎಂಐಎಸ್ಎಸ್) ವಿಭಾಗದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಇದನ್ನು ಫೋಟೋ ಸಹಿತ ಪ್ರಕಟಿಸಲಾಗಿದೆ.
“ಭಾರತೀಯರೇ ನಿಮಗಿದೋ ನಮನ. ನಿಮ್ಮ ಸೈನಿಕರು ದಕ್ಷಿಣ ಸುಡಾನ್ನ ಜೊಂಗ್ಲೆ„ ರಾಜ್ಯ ಹಾಗೂ ಗ್ರೇಟರ್ ಪೈಬರ್ ಪ್ರಾಂತ್ಯದಲ್ಲಿ ಸಮಾಜ ಸೇವೆಯಲ್ಲಿ ಗಣನೀಯ ಪಾತ್ರ ವಹಿಸಿದ ಕಾರಣಕ್ಕಾಗಿ ಅವರಿಗೆ ವಿಶ್ವಸಂಸ್ಥೆಯ ವತಿಯಿಂದ ಪದಕಗಳನ್ನು ನೀಡಿ ಸಮ್ಮಾನಿ ಸಲಾಗಿದೆ’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.