ನಮ್ಮೆಲ್ಲರನ್ನು ಬಂಧಿಸಿದೆ ಒಂದು ಸಂಬಂಧದ ಬಳ್ಳಿ


Team Udayavani, Feb 17, 2021, 6:00 AM IST

ನಮ್ಮೆಲ್ಲರನ್ನು ಬಂಧಿಸಿದೆ ಒಂದು ಸಂಬಂಧದ ಬಳ್ಳಿ

ಗಲಭೆಗಳು ಉಂಟಾದಾಗ ನಾವೆಲ್ಲರೂ ಮನುಷ್ಯರು, ನಮ್ಮೆಲ್ಲರ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಒಂದೇ ಎಂಬೆಲ್ಲ ಮಾತುಗಳು ಕೇಳಿಬರುತ್ತವೆ. ನಮ್ಮ ನಡುವೆ ಭೇದಗಳಿಲ್ಲ, ಜಾತಿ, ಜನಾಂಗ, ವರ್ಣ, ಮೇಲು – ಕೀಳು ಎಂಬಿತ್ಯಾದಿ ತರತಮಗಳನ್ನೆಲ್ಲ ನಾವೇ ಹುಟ್ಟುಹಾಕಿಕೊಂಡದ್ದು ಎಂಬುದು ಇದರ ಹೂರಣ. ಎಲ್ಲವೂ ಸರಿಯಿ ರುವಾಗ ಭಸ್ಮಾಸುರನ ವರದಂತಹ ಈ ತರತಮಗಳು ಏನೂ ಮಾಡುವುದಿಲ್ಲ; ಗಮನಕ್ಕೂ ಬರುವುದಿಲ್ಲ. ಆದರೆ ಯಾವುದೋ ಕಾರಣ ದಿಂದ ನಮ್ಮ ನಡು ವೆಯೇ ಅಸಮಾಧಾ ನದ ಬೀಜ ಮೊಳೆತಾಗ ಅದಕ್ಕೆ ನೀರು- ಗೊಬ್ಬರ ವಾಗುವುದು ಇವೇ. ಆಗ ಒಡಕುಗಳು ಬೃಹತ್‌ ಕಂದರಗಳಾಗಿ ಬದಲಾ ಗುತ್ತವೆ. ಇದು ನಮ್ಮ ಮೂಲ ಸ್ವಭಾವ. ಹಾಗಾಗಿ ನಮ್ಮೆಲ್ಲರಲ್ಲಿ ಹರಿಯುತ್ತಿರುವುದು ಒಂದೇ ರಕ್ತ ಎಂಬ ಮಾತನ್ನು ಅರಿತು ನಡೆಯುವುದು ಸುಲಭಸಾಧ್ಯವಾಗುವುದಿಲ್ಲ.

ಒಂದೆರಡು ಉದಾಹರಣೆ: ಒಂದು ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇವೆ ಎಂದುಕೊಳ್ಳಿ. ನಮ್ಮದೇ ಜಾತಿಯ, ನಮ್ಮದೇ ಮನೆಮಾತಿನ ಒಂದಿಬ್ಬರು ಸಿಕ್ಕಿದರೆ ತತ್‌ಕ್ಷಣ ನಾವು ಮಾತನಾಡುವ ಭಾಷೆ ಒಂದೇ ಆಗುತ್ತದೆ; ನಮ್ಮೊಂದಿಗೆ ಅದಾಗಲೇ ಮಾತನಾಡುತ್ತಿದ್ದ ಇನ್ನೊಬ್ಬ ನನ್ನು ನಿರ್ಲಕ್ಷಿಸಿಬಿಡುತ್ತೇವೆ.

ಊರಿನಿಂದ ಹೊರಗೆ ಪರವೂರಿನಲ್ಲಿ ಇದ್ದೇವೆ ಎಂದುಕೊಳ್ಳಿ. ಕನ್ನಡಿಗರು ಪರಿಚಯವಾದರೆ ನಮ್ಮದೇ ಒಂದು ಕೂಟವಾಗುತ್ತದೆ. ಅದರಲ್ಲಿ ನಮ್ಮದೇ ಭಾಷಿಕರು ಇದ್ದರೆ ಆ ಕೂಟದ ಒಳಗೆ ಇನ್ನೊಂದು ಪ್ರತ್ಯೇಕ ಗುಂಪು ಹುಟ್ಟಿ ಕೊಳ್ಳುತ್ತದೆ. ಒಂದೇ ಜಾತಿ-ಕುಲದ ಒಂದೆರಡು ಮಂದಿ ಇದ್ದರೆ ಮತ್ತೂಂದು ಸಣ್ಣ ಗುಂಪು! ನಾವೇ ಸೃಷ್ಟಿಸಿಕೊಂಡ ತರತಮಗಳು ಕೀಳಲಾಗದಷ್ಟು ಆಳವಾಗಿ ಬೇರುಬಿಟ್ಟಿರುವ ರೀತಿ ಇದು.

ಇಲ್ಲೊಂದು ಕಥೆಯಿದೆ – ನಮ್ಮೆಲ್ಲರ ಕಥೆ. ಹಾಗಾಗಿ ಎಚ್ಚರಿಕೆಯಿಂದ ಓದಿ ಮನನ ಮಾಡಿಕೊಳ್ಳಿ.
ಒಂದು ಝೆನ್‌ ಗುರುಮಠ ಇತ್ತು. ಅದರ ಹಿಂಭಾಗದ ಹಿತ್ತಿಲಿನಲ್ಲಿ ಗುರುಗಳ ಶಿಷ್ಯವರ್ಗದವರು ಸಾಲುಗಳನ್ನು ರಚಿಸಿ ಕರಬೂಜದ ಬೀಜಗಳನ್ನು ಬಿತ್ತಿದ್ದರು. ಹಬ್ಬಿದ ಬಳ್ಳಿಗಳಲ್ಲಿ ನೂರಾರು ಮಿಡಿಗಳು ಬಿಟ್ಟಿದ್ದವು. ಕೆಲವು ದಿನಗಳಲ್ಲಿ ಅವು ಹಣ್ಣಾಗುವ ಸಮಯ ಬಂತು.

ಒಂದು ದಿನ ಯಾವುದೋ ಕಾರಣಕ್ಕೆ ಕರಬೂಜಗಳ ನಡುವೆ ವಾಗ್ವಾದ ತಲೆದೋರಿತು. ಪ್ರಾಯಃ ನಮ್ಮ ಹಾಗೆ ಬಣ್ಣ, ಲಿಂಗ, ಆಕಾರ, ಜಾತಿ… ಹೀಗೆ ಯಾವುದಾದರೊಂದು ಕಾರಣಕ್ಕೆ ಜಗಳ ಹುಟ್ಟಿದ್ದಿರಬೇಕು. . ಹಾಗಾಗಿ ಎಲ್ಲವೂ ಕರಬೂಜಗಳೇ ಆಗಿ ದ್ದರೂ ಎರಡು ಪಂಗಡ ಗಳಾದವು. ಭಾರೀ ಜೋರಾದ ವಾಗ್ವಾದ, ಗಲಾಟೆ, ಕಿರುಚಾಟ, ಚೀರಾಟ ಎದ್ದಿತು.

ಮಠದಲ್ಲಿ ಧ್ಯಾನಾ ಸಕ್ತರಾಗಿದ್ದ ಝೆನ್‌ ಗುರುಗಳಿಗೆ ಇದರಿಂದ ತೊಂದರೆಯಾಯಿತು. ಏನಿದು ಎಂದುಕೊಂಡು ಹೊರಗಿಣು ಕಿದರೆ ಕರಬೂಜಗಳ ನಡುವೆ ಹೊಕೈ!

“ಸುಮ್ಮನಿರುತ್ತೀರೋ ಇಲ್ಲವೋ!’ ಎಂದು ಗುರುಗಳು ಮಠದಿಂದ ಹೊರಗೆ ಧಾವಿಸುತ್ತ ಬೊಬ್ಬಿರಿದರು. ಗಲಾಟೆ ಕಡಿಮೆಯಾಗಲು ಆರಂಭವಾಯಿತು.

“ಹೇ ಕರಬೂಜಗಳೇ! ನಿಮ್ಮೊಳಗೆ ಜಗಳ! ಅದೂ ಗುರುಮಠದ ಹಿತ್ತಿಲಿ ನಲ್ಲಿ! ಸುಮ್ಮನೆ ಚಿನ್‌ಮುದ್ರೆಗೆ ಬನ್ನಿ. ಪದ್ಮಾಸನದಲ್ಲಿ ಬೆನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳಿ. ಧ್ಯಾನ ಹೇಳಿಕೊಡುತ್ತೇನೆ’ ಎಂದರು ಗುರುಗಳು.

ಕರಬೂಜಗಳ ಸಿಟ್ಟು ಕೊಂಚ ಕೊಂಚ ವಾಗಿ ಕಡಿಮೆಯಾಯಿತು. ಎಲ್ಲವೂ ಧ್ಯಾನಾಸಕ್ತವಾದವು. “ಎಲ್ಲರೂ ಎರಡೂ ಕೈಗಳನ್ನು ಎತ್ತಿ ಹಸ್ತಗಳನ್ನು ನೆತ್ತಿಯ ಮೇಲಿಟ್ಟುಕೊಳ್ಳಿ ನೋಡೋಣ’ ಗುರು ಗಳು ಆದೇಶಿಸಿದರು.

ಕರಬೂಜಗಳು ಕೈಗಳನ್ನೆತ್ತಿ ಹಸ್ತಗಳನ್ನು ನೆತ್ತಿಯ ಮೇಲಿಟ್ಟುಕೊಂಡಾಗ ಅಲ್ಲಿ ಅದೇನೋ ಸ್ಪರ್ಶಕ್ಕೆ ಸಿಕ್ಕಿತು. ಬಳ್ಳಿ – ಎಲ್ಲ ಕಾಯಿಗಳನ್ನು ಪರಸ್ಪರ ಬಂಧಿಸುವ ಕರಬೂಜದ ಬಳ್ಳಿ!

“ಎಂಥ ಮೂರ್ಖತನ! ನಾವೆಲ್ಲರೂ ಒಂದೇ, ಸುಮ್ಮನೆ ಗಲಾಟೆ ಮಾಡಿ ಕೊಂಡಿದ್ದೆವು’ ಎಂದು ಹೇಳುತ್ತ ಕರಬೂಜಗಳು ಉರುಳಾಡಿಕೊಂಡು ಬಿದ್ದು ಬಿದ್ದು ನಗಲಾರಂಭಿಸಿದವು.

(ಸಾರ ಸಂಗ್ರಹ)

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.