ಸ್ಫೋಟ ರಹಿತ ಕಾರ್ಯಾಚರಣೆ… ಝವಾಹಿರಿ ಹತ್ಯೆಗೈಯಲು CIA ಬಳಕೆ ಮಾಡಿದ ಶಸ್ತ್ರಾಸ್ತ್ರ ಯಾವುದು?

ಅಲ್ ಖೈದಾ ಚಟುವಟಿಕೆ ಮತ್ತು ಝವಾಹಿರಿಯ ಅಡಗುತಾಣ ಪತ್ತೆ ಹಚ್ಚುವ ಬಗ್ಗೆ ಸಿಐಎ ರಹಸ್ಯವಾಗಿ ಕಾರ್ಯಾಚರಿಸುತ್ತಿತ್ತು.

Team Udayavani, Aug 2, 2022, 11:59 AM IST

ಸ್ಫೋಟ ರಹಿತ ಕಾರ್ಯಾಚರಣೆ… ಝವಾಹಿರಿ ಹತ್ಯೆಗೈಯಲು CIA ಬಳಕೆ ಮಾಡಿದ ಶಸ್ತ್ರಾಸ್ತ್ರ ಯಾವುದು?

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಅಡಗಿ ಕುಳಿತಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖಂಡ ಐಮನ್ ಅಲ್ ಝವಾಹಿರಿಯನ್ನು ಅಮೆರಿಕ ವೈಮಾನಿಕ ದಾಳಿಯ ಮೂಲಕ ಹತ್ಯೆಗೈದಿದೆ. 2011ರಲ್ಲಿ ಅಲ್ ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆಗೈದ ನಂತರ ನಡೆದ ಎರಡನೇ ಅತೀ ದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ: ಹತ್ಯೆಗೈದವರ ಮಾಹಿತಿ ಸಿಕ್ಕಿದೆ ಎಂದ SP

ಪಾಕಿಸ್ತಾನದ ಬುಡಕಟ್ಟು ಪ್ರದೇಶದ ಅಥವಾ ಅಫ್ಘಾನಿಸ್ಥಾನದಲ್ಲಿ ಅಡಗಿ ಕೊಂಡಿದ್ದಾನೆ ಎಂದು ಈ ಮೊದಲು ಊಹಾಪೋಹಗಳು ಹರಿದಾಡುತ್ತಿದ್ದರೂ ಕೂಡಾ ಝವಾಹಿರಿಯ ಅಡಗುತಾಣವನ್ನು ಪತ್ತೆಹಚ್ಚಿ ಹೇಗೆ ಕೊಲ್ಲಲಾಯಿತು ಎಂಬ ಬಗ್ಗೆ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಜಾಲದ ಕುರಿತು ಅಮೆರಿಕ ಹಲವಾರು ವರ್ಷಗಳಿಂದ ಹಲವಾರು ಮಾಹಿತಿಗಳನ್ನು ಕಲೆ ಹಾಕುತ್ತಿತ್ತು. ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆದ ನಂತರ ಅಮೆರಿಕ ಅಲ್ ಖೈದಾ ಚಟುವಟಿಕೆ ಮತ್ತು ಝವಾಹಿರಿಯ ಅಡಗುತಾಣ ಪತ್ತೆ ಹಚ್ಚುವ ಬಗ್ಗೆ ಸಿಐಎ ರಹಸ್ಯವಾಗಿ ಕಾರ್ಯಾಚರಿಸುತ್ತಿತ್ತು.

ಝವಾಹಿರಿ ಕುಟುಂಬ ಸದಸ್ಯರ ಪತ್ತೆ:

ಅಫ್ಘಾನಿಸ್ತಾನ, ಗುಡ್ಡಪ್ರದೇಶ ಸೇರಿದಂತೆ ಹಲವೆಡೆ ಝವಾಹಿರಿ ಅಡಗುತಾಣ ಪತ್ತೆಗಾಗಿ ರಹಸ್ಯ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವರ್ಷ ಝವಾಹಿರಿ ಪತ್ನಿ, ಆತನ ಪುತ್ರಿಯರು, ಪುತ್ರರು ಕಾಬೂಲ್ ನಲ್ಲಿ ವಾಸವಾಗಿದ್ದ ಸ್ಥಳವನ್ನು ಕಂಡು ಹಿಡಿಯಲಾಗಿತ್ತು. ರಹಸ್ಯ ಮಾಹಿತಿಯನ್ನು ಏಪ್ರಿಲ್ ತಿಂಗಳಿನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲ್ಲಿವ್ಯಾನ್ ಅವರಿಗೆ ವಿವರಿಸಲಾಗಿತ್ತು. ಅದೇ ರೀತಿ ಅಧ್ಯಕ್ಷ ಜೋ ಬೈಡೆನ್ ಅವರಿಗೂ ಮಾಹಿತಿ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.

ಕಾಬೂಲ್ ನಲ್ಲಿ ಸುರಕ್ಷಿತ ಪ್ರದೇಶದಲ್ಲಿ ಝವಾಹಿರಿ ವಾಸವಾಗಿದ್ದಾನೋ ಇಲ್ಲವೋ ಎಂಬುದನ್ನು ಖಚಿತಪಡಿಸಲು ಸಿಐಎ ಗುಪ್ತಚರ ಅಧಿಕಾರಿಗಳು ಹಲವಾರು ತಿಂಗಳುಗಳ ಕಾಲ ಮಾಹಿತಿಯನ್ನು ಕಲೆಹಾಕಿದ್ದರು.

ರಹಸ್ಯ ಕಾರ್ಯಾಚರಣೆಗೆ ಸಿದ್ಧತೆ:

ಝವಾಹಿರಿ ವಾಸ್ತವ್ಯ ಹೂಡಿದ್ದ ಕಟ್ಟಡದ ಮಾಹಿತಿ, ಅದರ ಗುಣಮಟ್ಟದ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿತ್ತು. ಸುತ್ತಮುತ್ತ ನಾಗರಿಕರಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸುವ ಮೂಲಕ ಝವಾಹಿರಿಯನ್ನು ಹತ್ಯೆಗೈಯುವ ಬಗ್ಗೆ ಸಿಐಎ ಹಾಗೂ ಬೈಡೆನ್ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಹಸ್ಯ ಕಾರ್ಯಾಚರಣೆಯ ಅಂಗವಾಗಿ ಅಮೆರಿಕ ಮಾರಕ ಹೆಲ್ ಫೈರ್ ಆರ್9x ಮಿಸೈಲ್ ಅನ್ನು ಅಮೆರಿಕ ಬಳಸಿರುವುದು ಜಗಜ್ಜಾಹೀರಾಗಿದೆ. ಇದೊಂದು ಸಿಡಿತಲೆ ರಹಿತ ಮಿಸೈಲ್ ಆಗಿದ್ದು, ಇದು ಆರು ಹರಿತವಾದ ಬ್ಲೇಡ್ ಹೊಂದಿದ್ದು, ನಿಗದಿತ ಗುರಿಯನ್ನು ತಲುಪಿ ಝವಾಹಿರಿಯನ್ನು ಹತ್ಯೆಗೈಯಲಾಗಿತ್ತು. ಇದು ಸ್ಫೋಟ ಮತ್ತು ಶಬ್ದ ರಹಿತ ದಾಳಿಯಾಗಿದೆ ಎಂದು ವರದಿ ವಿವರಿಸಿದೆ.

ಭಯೋತ್ಪಾದಕ ಸಂಘಟನೆಯ ಮುಖಂಡರನ್ನು ಹತ್ಯೆಗೈಯುವ ಸಂದರ್ಭದಲ್ಲಿ ಬಳಸುವ ಡೆಡ್ಲಿ ಶಸ್ತ್ರಾಸ್ತ್ರದ ಬಗ್ಗೆ ಅಮೆರಿಕವಾಗಲಿ ಅಥವಾ ಸಿಐಎ ಆಗಲಿ ಬಹಿರಂಗವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ. 2017ರಲ್ಲಿ ಮೊದಲ ಬಾರಿಗೆ ಅಲ್ ಖೈದಾ ಹಿರಿಯ ಮುಖಂಡ ಅಬು ಅಲ್ ಖೈರ್ ಅಲ್ ಮಸ್ರಿಯನ್ನು ಹತ್ಯೆಗೈಯುವ ಸಂದರ್ಭದಲ್ಲಿ ಆರ್ 9x ಮಿಸೈಲ್ ಬಳಸಿತ್ತು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಫೈಟರ್‌ ರವಿ ಬಿಜೆಪಿ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ: ಸಚಿವ ಅಶೋಕ್‌

ಫೈಟರ್‌ ರವಿ ಬಿಜೆಪಿ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ: ಸಚಿವ ಅಶೋಕ್‌

ಕೆಜಿಎಫ್-2 ಹಾಡಿನ ವಿವಾದ: ರಾಹುಲ್‌ಗೆ ಹೈಕೋರ್ಟ್‌ ನೋಟಿಸ್‌

ಕೆಜಿಎಫ್-2 ಹಾಡಿನ ವಿವಾದ: ರಾಹುಲ್‌ಗೆ ಹೈಕೋರ್ಟ್‌ ನೋಟಿಸ್‌

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

critio ronaldo signature step

ಅಮೆರಿಕನ್ ಗಾಲ್ಫ್ ಆಟಗಾರ್ತಿ ಕ್ರಿಸ್ಟಿಯಾನೋ ರೀತಿಯಲ್ಲೇ ಟಾಪ್ ತೆಗೆದು ಸಂಭ್ರಮಾಚರಣೆ: ವೀಡಿಯೋ ವೈರಲ್ !

ಅಫ್ಘಾನಿಸ್ತಾನದಲ್ಲಿ 20 ಯೋಜನೆ ಕೆಲಸ ಶೀಘ್ರ ಪುನಾರಂಭ: ತಾಲಿಬಾನ್‌

ಅಫ್ಘಾನಿಸ್ತಾನದಲ್ಲಿ 20 ಯೋಜನೆ ಕೆಲಸ ಶೀಘ್ರ ಪುನಾರಂಭ: ತಾಲಿಬಾನ್‌

ಐಸಿಸ್ ಸಂಘಟನೆಯ ಮುಖ್ಯಸ್ಥ ಅಬು ಹಸನ್ ನಿಗೂಢ ಅಂತ್ಯ, ನೂತನ ಮುಖಂಡನ ಆಯ್ಕೆ!

ಐಸಿಸ್ ಸಂಘಟನೆಯ ಮುಖ್ಯಸ್ಥ ಅಬು ಹಸನ್ ನಿಗೂಢ ಅಂತ್ಯ, ನೂತನ ಮುಖಂಡನ ಆಯ್ಕೆ!

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

1-SADASDASD

ಸಹಕಾರ ಕ್ಷೇತ್ರಕ್ಕೆ 125 ವರ್ಷಗಳ ಸುದೀರ್ಘ ಇತಿಹಾಸವಿದೆ: ಪ್ರಶಾಂತ ಮುಧೋಳ

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

1-AASA

ಹುಲಿಯಾಪೂರ ಗ್ರಾಮದ ಸರಕಾರಿ ಶಾಲೆ ಒಂದು ಹೈಟೆಕ್ ಶಾಲೆ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.