ಯಾದಗಿರಿಯಲ್ಲಿ ಮತ್ತೆ 52 ಜನರಿಗೆ ಸೋಂಕು ದೃಢ
ತಗ್ಗದ ಕೋವಿಡ್-19 ಆರ್ಭಟ
Team Udayavani, Jun 13, 2020, 7:45 PM IST
ಯಾದಗಿರಿ: ಜಿಲ್ಲೆಯಲ್ಲಿ ಶನಿವಾರವೂ ಕೋವಿಡ್-19 ಆರ್ಭಟ ಮುಂದುವರೆಸಿದ್ದು ಬರೋಬ್ಬರಿ 52 ಜನರಲ್ಲಿ ಸೋಂಕು ದೃಡವಾಗಿದೆ.
ಯಾದಗಿರಿ ತಾಲೂಕಿನ ತವರು ನಾಯಕ್ ತಾಂಡಾದ 3 ತಿಂಗಳ ಹಸುಗೂಸು ಪಿ 6642, ಸೇರಿ ತಾಂಡಾದ 8 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿಯ 15 ಜನರಲ್ಲಿ ಸೋಂಕು ವಕ್ಕತಿಸಿದೆ. ಅಲ್ಲದೆ 10 ವರ್ಷದೊಳಗಿನ 10 ಮಕ್ಕಳು ಸೇರಿದಂತೆ 27 ಪುರುಷರು ಮತ್ತು 25 ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗ 735 ಇದ್ದ ಸೋಂಕಿತರ ಸಂಖ್ಯೆ 787ಗೆ ಏರಿಕೆಯಾಗಿದೆ.