ಆಕ್ರೋಶದ ಬಳಿಕ ಕ್ಷಮೆ ಯಾಚಿಸಿದ ನಟಿ ರಚಿತಾ ರಾಮ್
Team Udayavani, Nov 13, 2021, 5:46 PM IST
ಬೆಂಗಳೂರು : ‘ಏಕ್ ಲವ್ ಯಾ’ ಚಿತ್ರದ ಸಾಂಗ್ ಲಂಚ್ ವೇಳೆ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರದ ಎದುರು ಶಾಂಪೇನ್ ಬಳಸಿದ್ದಕ್ಕಾಗಿ ಚಿತ್ರದ ನಾಯಕಿ ರಚಿತಾ ರಾಮ್ ಶನಿವಾರ ಸಾಮಾಜಿಕ ತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ.
ಚಿತ್ರ ತಂಡದ ವರ್ತನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ, ಇನ್ಸ್ಟಾಗ್ರಾಮ್ ನಲ್ಲಿ ರಚಿತಾ ಕ್ಷಮೆ ಯಾಚಿಸಿದ್ದು, ”ಅಪ್ಪು ಭಾವ ಚಿತ್ರದ ಎದುರು ಶಾಂಪೇನ್ ಬಾಟಲಿ ಓಪನ್ ಮಾಡಿ ಹಾಡು ಬಿಡುಗಡೆಗೊಳಿಸಿರುವ ಬಗ್ಗೆ ನಿಮಗೆಲ್ಲರಿಗೂ ಅಸಮಾಧಾನವಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಅಪ್ಪು ಭಾವಚಿತ್ರದ ಎದುರು ಶಾಂಪೇನ್ :’ಏಕ್ ಲವ್ ಯಾ’ತಂಡದ ವಿರುದ್ಧ ಸಾ.ರಾ.ಗೋವಿಂದು ಕಿಡಿ
”ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ,ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗಿಯೂ ಉದ್ದೇಶ ಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆ ಎಂದು ನಂಬಿದ್ದೇನೆ, ಇಂತಿ ನಿಮ್ಮ ರಚಿತಾ ರಾಮ್” ಎಂದು ಬರೆದಿದ್ದಾರೆ.