ಉಪರಾಷ್ಟ್ರಪತಿ ನಾಯ್ಡು ಬಳಿಕ RSS ವರಿಷ್ಠ ಭಾಗವತ್ ಖಾತೆಯ ಬ್ಲೂ ಟಿಕ್ ತೆಗೆದ ಟ್ವಿಟರ್
ಟ್ವಿಟರ್ ಹ್ಯಾಂಡಲ್ ಗಳಲ್ಲಿನ ಬ್ಲೂ ಟಿಕ್ ಸಾಮಾಜಿಕ ಜಾಲತಾಣ ಖಾತೆಯ ಅಧಿಕೃತ ಮುದ್ರೆಯಾಗಿದೆ.
Team Udayavani, Jun 5, 2021, 2:50 PM IST
ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ವೆರಿಫೈಯ್ಡ್ ಬ್ಲೂ ಬ್ಯಾಡ್ಜ್ ಟಿಕ್ ಅನ್ನು ತೆಗೆದು ಹಾಕಿದ್ದ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ್ (ಆರ್ ಎಸ್ ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಟ್ವಿಟರ್ ಖಾತೆಯ ವೆರಿಫೈಯ್ಡ್ ಬ್ಲೂ ಟಿಕ್ ಅನ್ನು ತೆಗೆದುಹಾಕಿದೆ.
ಮೋಹನ್ ಭಾಗವತ್ ಅವರು ಟ್ವಿಟರ್ ಖಾತೆಯಲ್ಲಿ 20.76 ಲಕ್ಷ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಶನಿವಾರ (ಜೂನ್ 05) ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಅನ್ನು ತೆಗೆದಿದ್ದು, ಆಕ್ಷೇಪ ವ್ಯಕ್ತಪಡಿಸಿದ ನಂತರ ಬ್ಲೂ ಬ್ಯಾಡ್ಜ್ ಅನ್ನು ಸಕ್ರಿಯಗೊಳಿಸಿತ್ತು.
ಟ್ವಿಟರ್ ಹ್ಯಾಂಡಲ್ ಗಳಲ್ಲಿನ ಬ್ಲೂ ಟಿಕ್ ಸಾಮಾಜಿಕ ಜಾಲತಾಣ ಖಾತೆಯ ಅಧಿಕೃತ ಮುದ್ರೆಯಾಗಿದೆ. ಟ್ವಿಟರ್ ಖಾತೆಯಲ್ಲಿ ಸಕ್ರಿಯವಾಗಿದ್ದರೆ ಮಾತ್ರ ಬ್ಲೂ ಬ್ಯಾಡ್ಜ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.
ನಾಯ್ಡು ಅವರ
ವೈಯಕ್ತಿಕ ಖಾತೆ 1.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿತ್ತು. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆ ಕಳೆದ ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಬ್ಲೂ ಬ್ಯಾಡ್ಜ್ ಮಾರ್ಕ್ ಅನ್ನು ಟ್ವಿಟರ್ ತೆಗೆದು ಹಾಕಿರುವುದಾಗಿ ಉಪರಾಷ್ಟ್ರಪತಿ ಕಚೇರಿಯ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!