ಭಾರತವನ್ನು ಕೆಣಕಲು ಬಂದರೆ ಸುಮ್ಮನೆ ಬಿಡಲ್ಲ: ಸಚಿವ ರಾಜನಾಥ ಸಿಂಗ್‌

ಇಸ್ಕಾನ್‌ನಲ್ಲಿ "ಗೀತಾ ದಾನ ಯಜ್ಞ ಮಹೋತ್ಸವ' ಉದ್ಘಾಟನೆ

Team Udayavani, Dec 4, 2022, 6:50 AM IST

ಭಾರತವನ್ನು ಕೆಣಕಲು ಬಂದರೆ ಸುಮ್ಮನೆ ಬಿಡಲ್ಲ: ಸಚಿವ ರಾಜನಾಥ ಸಿಂಗ್‌

ಬೆಂಗಳೂರು: ಶಾಂತಿಪ್ರಿಯ ರಾಷ್ಟ್ರವಾಗಿರುವ ಭಾರತವು ಬೇರೆ ದೇಶದ ಒಂದು ಇಂಚು ಭೂಮಿಯನ್ನೂ ಅಕ್ರಮಿಸಿಕೊಂಡಿಲ್ಲ. ನಮ್ಮ ದೇಶವನ್ನು ಕೆಣಕಲು ಬಂದರೆ ಮಾತ್ರ ಸುಮ್ಮನೆ ಬಿಡುವುದೂ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.

ವಸಂತಪುರದಲ್ಲಿರುವ ಇಸ್ಕಾನ್‌ ದೇವಾಲಯದಲ್ಲಿ ಶನಿವಾರ “ಗೀತಾ ದಾನ ಯಜ್ಞ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಶಾಂತಿ ಪ್ರಿಯ ದೇಶ, ಬೇರೆ ದೇಶಗಳ ಮೇಲೆ ದಾಳಿ ಮಾಡಿಲ್ಲ. ಬೇರೆ ದೇಶದ ಭೂಮಿ ಆಕ್ರಮಿಸಿಕೊಳ್ಳಲೂ ಹೋಗಿಲ್ಲ. ನಮ್ಮ ದೇಶ ಯಾರನ್ನೂ ಕೆಣಕಲು ಹೋಗುವುದೇ ಇಲ್ಲ. ಒಂದು ವೇಳೆ ಭಾರತವನ್ನು ಕೆಣಕಿದರೆ, ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದರು.

ಭಾರತವು ಆಧ್ಯಾತ್ಮಿಕ ಜ್ಞಾನದ ಭಂಡಾರವಾಗಿದೆ ಹಾಗೂ ಇತರ ದೇಶದವರು ಅದನ್ನು ಅನುಸರಿಸಿ ಅಳವಡಿಸಿಕೊಳ್ಳುತ್ತಿದ್ದಾರೆ. ತನ್ನ ಆಧ್ಯಾತ್ಮಿಕ ಜ್ಞಾನದಿಂದ ನಮ್ಮೆಲ್ಲರನ್ನೂ ಅನುಗ್ರಹಿಸುತ್ತಿರುವ ಭಗವದ್ಗೀತೆಯು ಜೀವಂತ ಜ್ಞಾನ ಗಂಗೆಯಾಗಿದೆ. ವಿಶ್ವದಾದ್ಯಂತ ಗೀತೆಯು ಬುದ್ಧಿಜೀವಿಗಳು ಮತ್ತು ತತ್ವಜ್ಞಾನಿಗಳಂತಹ ಪ್ರಮುಖರ ಮೇಲೆ ಪ್ರಭಾವ ಬೀರಿದೆ. ಭಗವದ್ಗೀತೆ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಲು ಯುವಜನರಿಗೆ ಉತ್ತೇಜಿಸುತ್ತೇನೆ. ಜ್ಞಾನದ ವಿತರಣೆ, ಪ್ರಸರಣವೇ ಅತ್ಯುನ್ನತ ದಾನ. ಗೀತಾ ದಾನ ಯಜ್ಞದ ಮೂಲಕ ಭಗವದ್ಗೀತೆಯ ಅಮರ ಜ್ಞಾನವನ್ನು ಹರಡುತ್ತಿರುವ ಬೆಂಗಳೂರಿನ ಇಸ್ಕಾನ್‌ ಪ್ರಯತ್ನ ಉತ್ತಮ ಬೆಳವಣಿಗೆಯಾಗಿದೆ. ರಾಜಾಧಿರಾಜ ಗೋವಿಂದ ಮಂದಿರ ಸಾಕಾರಗೊಳಿಸಿರುವ ಮಧು ಪಂಡಿತ ದಾಸ ಮತ್ತು ಇಸ್ಕಾನ್‌ ಭಕ್ತರನ್ನು ನಾನು ಅಭಿನಂದಿಸುತ್ತೇನೆ ಎಂದರು.

ಭಗವದ್ಗೀತೆ ನಿತ್ಯ, ನಿರಂತರವಾದುದು
ಭಗವದ್ಗೀತೆ ಕೇವಲ ಗ್ರಂಥವಲ್ಲ. ಅನಾದಿ ಕಾಲದಿಂದ ಜ್ಞಾನಾಮೃತ ಹಂಚುತ್ತಾ ಬಂದಿದೆ. ಜಗತ್ತಿನಲ್ಲಿ ಜೀವನದ ಆನಂದ ಕಲಿಸುವುದಕ್ಕೆ ಹಲವು ಗ್ರಂಥಗಳಿವೆ. ಆದರೆ, ಭಗವದ್ಗೀತೆ ಮೃತ್ಯುವಿನ ಆನಂದವನ್ನೂ ಕಲಿಸುತ್ತದೆ. ಇದು ಶಾಶ್ವತ, ಸತ್ಯ, ನಿತ್ಯ ನಿರಂತರವಾಗಿರುವುದು. ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಸಂಘರ್ಷ ಬರಬಾರದು. ಪರಮಾಣು ಪರೀಕ್ಷೆಯ ವೇಳೆಯೂ ಭಗವದ್ಗೀತೆಯ ಬೋಧನೆ ಮಾಡಲಾಗಿದೆ ಎಂದು ಭಗವದ್ಗೀತೆಯ ಮಹತ್ವವನ್ನು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಭಾರತವನ್ನು ಆತ್ಮನಿರ್ಭರತೆಯೆಡೆಗೆ ಕೊಂಡೊಯ್ಯುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಪಾತ್ರ ದೊಡ್ಡದಿದೆ. ಶೇ.50ರಷ್ಟು ರಕ್ಷಣಾ ಪರಿಕರಗಳು ಭಾರತದಲ್ಲಿಯೇ ಉತ್ಪಾದನೆಯಾಗುತ್ತಿದೆ. ಶೀಘ್ರದಲ್ಲಿಯೇ ರಕ್ಷಣಾ ಪರಿಕರ ರಫ್ತು ಮಾಡುವ ಜಗತ್ತಿನ ಐದು ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಭಗವದ್ಗೀತೆಯು ಎಲ್ಲ ಧರ್ಮಗಳ ಮೂಲ. ಅದು ಅಸ್ತಿತ್ವದ ಎಲ್ಲ ಸಮಸ್ಯೆಗಳಿಗೆ ಸೂಕ್ಷದೃಷ್ಟಿಯ ಪರಿಹಾರ ನೀಡುತ್ತದೆ. ಶ್ರೀ ಪ್ರಭುಪಾದರ ಪ್ರಯತ್ನಗಳಿಂದ ಲಕ್ಷಾಂತರ ಜನ ಇಂದು ಶ್ರೀಕೃಷ್ಣನಿಗೆ ಆಕರ್ಷಿತರಾಗಿದ್ದಾರೆ. ಸನಾತನ ಧರ್ಮದ ಸಂದೇಶ ಹರಡುವಲ್ಲಿ “ಗೀತಾ ದಾನ ಯಜ್ಞ’ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಇಸ್ಕಾನ್‌ ಅಧ್ಯಕ್ಷ ಮಧುಪಂಡಿತದಾಸ ಮಾತನಾಡಿ, ಗೀತೆಯ ಗಾಢವಾದ ಮತ್ತು ಪರಮ ಜ್ಞಾನವು ಎಲ್ಲ ವ್ಯಕ್ತಿ, ಕುಟುಂಬ, ಸಮಾಜ, ಮತ್ತು ರಾಷ್ಟ್ರಗಳನ್ನು ಪರಿಪೂರ್ಣ ಪಥದತ್ತ ಕರೆದೊಯ್ಯಲು ಮಾರ್ಗದರ್ಶನ ನೀಡಬಲ್ಲದು ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ವಿ. ಮೋಹನದಾಸ ಪೈ, ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಟಿ ಸಪ್ತಮಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

1 ಲಕ್ಷ ಪ್ರತಿ ವಿತರಿಸುವ ಗುರಿ
ಸಂಗೀತ ವಿದ್ವಾಂಸ ವಿದ್ಯಾಭೂಷಣರು ವಾಚಿಸಿರುವ ಭಗವದ್ಗೀತೆಯ ವಿಡಿಯೋವನ್ನು ಆರು ಭಾಷೆಯಲ್ಲಿನ ಅದರ ಅನುವಾದದೊಂದಿಗೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಒಂದು ತಿಂಗಳು “ಗೀತಾ ದಾನ ಯಜ್ಞ’ ಕಾರ್ಯಕ್ರಮದ ಅಂಗವಾಗಿ ಇಸ್ಕಾನ್‌ ಮಂದಿರಗಳ ಸಮೂಹವು ಭಗವದ್ಗೀತೆಯ 1 ಲಕ್ಷ ಪ್ರತಿ ವಿತರಿಸುವ ಗುರಿ ಹೊಂದಿದೆ.

ಆತ್ಮನಿರ್ಭರತೆ ಆತ್ಮವಿಶ್ವಾಸದಿಂದ ಬರುತ್ತದೆ. ಯಾವುದಾದರೂ ಸಮಸ್ಯೆಗಳಿಗೆ ನಾವು ಒಳಪಟ್ಟಾಗ ಭಗವದ್ಗೀತೆಯ ಪುಟಗಳನ್ನು ತಿರುವಿ ಹಾಕಿದರೆ ಸಮಸ್ಯೆಗೆ ಪರಿಹಾರ ದೊರೆಕುತ್ತದೆ. ಪ್ರಯತ್ನ ಮಾಡಿ ನೋಡಿ. ಇದು ನನ್ನ ಅನುಭವದ ಮಾತು. ಪ್ರತಿ ಶ್ಲೋಕದಲ್ಲಿ ಬದುಕಿನ ಸಾರದ ಜೊತೆಗೆ ಪರಿಹಾರವನ್ನೂ ಕೂಡ ಧರ್ಮದತ್ತವಾಗಿ ನೀಡಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಭಗವದ್ಗೀತೆಯು ಎಲ್ಲ ಧರ್ಮಗಳ ಮೂಲ. ಅದು ಅಸ್ತಿತ್ವದ ಎಲ್ಲ ಸಮಸ್ಯೆಗಳಿಗೆ ಸೂಕ್ಷ¾ದೃಷ್ಟಿಯ ಪರಿಹಾರ ನೀಡುತ್ತದೆ. ಶ್ರೀ ಪ್ರಭುಪಾದರ ಪ್ರಯತ್ನಗಳಿಂದ ಲಕ್ಷಾಂತರ ಜನ ಇಂದು ಶ್ರೀಕೃಷ್ಣನಿಗೆ ಆಕರ್ಷಿತರಾಗಿ¨ªಾರೆ. ಸನಾತನ ಧರ್ಮದ ಸಂದೇಶ ಹರಡುವಲ್ಲಿ “ಗೀತಾ ದಾನ ಯಜ್ಞ’ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಇಸ್ಕಾನ್‌ ಅಧ್ಯಕ್ಷ ಮಧುಪಂಡಿತದಾಸ ಮಾತನಾಡಿ, ಗೀತೆಯ ಗಾಢವಾದ ಮತ್ತು ಪರಮ ಜ್ಞಾನವು ಎಲ್ಲ ವ್ಯಕ್ತಿ, ಕುಟುಂಬ, ಸಮಾಜ, ಮತ್ತು ರಾಷ್ಟ್ರಗಳನ್ನು ಪರಿಪೂರ್ಣ ಪಥದತ್ತ ಕರೆದೊಯ್ಯಲು ಮಾರ್ಗದರ್ಶನ ನೀಡಬಲ್ಲದು ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ವಿ. ಮೋಹನದಾಸ ಪೈ, ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಟಿ ಸಪ್ತಮಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ ವಿದ್ವಾಂಸ ವಿದ್ಯಾಭೂಷಣರು ವಾಚಿಸಿರುವ ಭಗವದ್ಗೀತೆಯ ವಿಡಿಯೋವನ್ನು ಆರು ಭಾಷೆಯಲ್ಲಿನ ಅದರ ಅನುವಾದದೊಂದಿಗೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಒಂದು ತಿಂಗಳು “ಗೀತಾ ದಾನ ಯಜ್ಞ’ ಕಾರ್ಯಕ್ರಮದ ಅಂಗವಾಗಿ ಇಸ್ಕಾನ್‌ ಮಂದಿರಗಳ ಸಮೂಹವು ಭಗವದ್ಗೀತೆಯ 1 ಲಕ್ಷ ಪ್ರತಿ ವಿತರಿಸುವ ಗುರಿ ಹೊಂದಿದೆ.

ಟಾಪ್ ನ್ಯೂಸ್

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

1-asdsa-das

ನನ್ನ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

Perth Scorchers are the BBL champions for the fifth time!

ಐದನೇ ಬಾರಿಗೆ ಬಿಗ್ ಬ್ಯಾಶ್ ಲೀಗ್ ಟ್ರೋಫಿ ಗೆದ್ದ ಪರ್ತ್ ಸ್ಕಾಚರ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

PM Modi

ಫೆ.6ರಂದು ಪ್ರಧಾನಿ ಮೋದಿ ಅವರಿಂದ ತುಮಕೂರು ಎಚ್‌ಎಎಲ್‌ ಘಟಕ ಲೋಕಾರ್ಪಣೆ

Thinking of giving bus pass to rural journalists: CM Bommai

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ: ಸಿಎಂ ಬೊಮ್ಮಾಯಿ

ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಕೊನೆಗೂ ಮೌನ ಮುರಿದ ಸಚಿವ ಸುನಿಲ್ ಕುಮಾರ್

ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಕೊನೆಗೂ ಮೌನ ಮುರಿದ ಸಚಿವ ಸುನಿಲ್ ಕುಮಾರ್

MUST WATCH

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

ಹೊಸ ಸೇರ್ಪಡೆ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

Exam

371 (ಜೆ) ಪ್ರಾಧ್ಯಾಪಕ ಹುದ್ದೆ ನೇಮಕಾತಿ ದೋಷ ಸರಿಪಡಿಸುವ ಆದೇಶ ಸ್ವಾಗತಾರ್ಹ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.