ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ
Team Udayavani, Nov 26, 2020, 1:54 PM IST
ವಿಜಯಪುರ: ಈ ತಿಂಗಳ 2 ರಂದು ಭೀಮಾ ತೀರದ ಮಹಾದೇವ ಭೈರಗೊಂಡ ಹತ್ಯಾಯತ್ನ ಹಾಗೂ ಭೈರಗೊಂಡ ಅನುಯಾಯಿ ಇಬ್ಬರ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಜಾಲಗೇರಿ ತಾಂಡಾ ನಿವಾಸಿ 26 ವರ್ಷದ ಸಚಿನ್ ರಮೇಶ ಚವ್ಹಾಣ, ಚಡಚಣ ಪಟ್ಟಣದ 26 ವರ್ಷದ ಮಲ್ಲಿಕಾರ್ಜುನ ಶಿವಾನಂದ ಪಾಟೀಲ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ 1 ಕಂಟ್ರಿ ಪಿಸ್ತೂಲ್, 1 ಜೀವಂತ ಗುಂಡು, 1 ತಲವಾರ 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ನ.2 ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಾಳ ಕ್ರಾಸ್ ಬಳಿ ಭೈರಗೊಂಡ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡಿಸಿ ಹತ್ಯೆಗೆ ಯತ್ನಿಸಲಾಗಿತ್ತು. ಘಟನೆಯಲ್ಲಿ ಭೈರಗೊಂಡ ಬೆಂಬಲಿಗ ಇಬ್ಬರು ಹತ್ಯೆಯಾಗಿದ್ದರು.
ಇದನ್ನೂ ಓದಿ:ಕಳ್ಳರನ್ನು ಹಿಡಿಯಲು ಹೋದ ಆಂಧ್ರ ಪೋಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ: ಕಳ್ಳರ ತಂಡ ಪರಾರಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444