ಸಿಇಟಿ ಪರಿಷ್ಕೃತ ರ್‍ಯಾಂಕ್ ಪಟ್ಟಿ ಅ.1ರಂದು ಪ್ರಕಟ
Team Udayavani, Sep 28, 2022, 9:12 PM IST
ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)-2022 ಪರಿಷ್ಕೃತ ರ್‍ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅ.1ಕ್ಕೆ ಮುಂದೂಡಿದೆ.
ಸೆ.29ರಂದು ಪಟ್ಟಿ ಪ್ರಕಟವಾಗಬೇಕಿತ್ತಾದರೂ ತಾಂತ್ರಿಕ ಕೆಲಸಗಳು ನಡೆಯಬೇಕಿರುವ ಹಿನ್ನೆಲೆಯಲ್ಲಿ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಕೆಇಎ ಮೂಲಗಳು ತಿಳಿಸಿವೆ.
ಪರಿಷ್ಕೃತ ರ್‍ಯಾಂಕ್ ಪಟ್ಟಿಗಾಗಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಈ ಮೊದಲು ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿಯನ್ನು ಸೆ.29ರಂದು ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದರು.
ಈ ಪರಿಷ್ಕೃತ ರ್‍ಯಾಂಕ್ ಪಟ್ಟಿ ಎಂಜಿನಿಯರಿಂಗ್ ಕೋರ್ಸ್‌ಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ಕೋರ್ಸ್‌ಗಳಾದ ಬಿ.ಎಸ್ಸಿ. ಕೃಷಿ, ಪಶುಸಂಗೋಪನೆ, ಫಾರ್ಮ, ಯೋಗ ಕೋರ್ಸ್‌ಗಳಿಗೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.