ಚಪಾತಿಗೆ ಉಗುಳಿ ಗ್ರಾಹಕರಿಗೆ ಸಪ್ಲೈ ವಿಡಿಯೋ ವೈರಲ್ ; ಅಡುಗೆಯವನ ಬಂಧನ
Team Udayavani, Jan 20, 2023, 7:35 AM IST
ಗಾಜಿಯಾಬಾದ್: ಇಲ್ಲಿನ ರಸ್ತೆ ಬದಿಯ ಉಪಹಾರ ಗೃಹದಲ್ಲಿ ‘ಚಪಾತಿ’ ಮಾಡುವ ಮುನ್ನ ಹಿಟ್ಟಿನಲ್ಲಿ ಉಗುಳಿದ್ದ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಿಶನ್ ಗಂಜ್ ಬಿಹಾರದ ನಾಸಿರುದ್ದೀನ್ ಎಂದು ಗುರುತಿಸಲಾಗಿರುವ ಅಡುಗೆಯವನ ವಿರುದ್ಧ ಪೊಲೀಸರು ಟೀಲಾ ಮೋರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಮೋಹನ್ ನಗರ–ವಜೀರಾಬಾದ್ (ದೆಹಲಿ) ರಸ್ತೆಯಲ್ಲಿರುವ ಪಸೋಂಡಾ ಗ್ರಾಮದಲ್ಲಿ ಅವರು ‘ಚಪಾತಿ’ ಮಾಡುತ್ತಿದ್ದ ರಸ್ತೆ ಬದಿಯ ಉಪಹಾರ ಗೃಹವಿದೆ ಎಂದು ಸಾಹಿಬಾಬಾದ್ ವೃತ್ತದ ಸಹಾಯಕ ಪೊಲೀಸ್ ಆಯುಕ್ತ ಪೂನಂ ಮಿಶ್ರಾ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ 269 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
थूक लगाकर रोटी बना रहा तहसुद्दीन, वीडियो वायरल
पुलिस ने संज्ञान लेकर मुकदमा दर्ज, हुआ गिरफ्तार
गाजियाबाद के थाना टीला मोड़ क्षेत्र का मामला
बिहार का रहने वाला है आरोपी तहसुद्दीन#ghaziabad #uppolice #viralvideo #ghaziabadpolice #muslim #hindu #hindurakshadal #cmyogi #upnews pic.twitter.com/2GcsbI0sci
— आयुष त्यागी (@ayushabodh) January 19, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಂಪುರ್: ಸಂಪೂರ್ಣವಾಗಿ ವಿವಸ್ತ್ರಗೊಂಡ ನಿಗೂಢ ಯುವತಿಯ ವಿಡಿಯೋ ವೈರಲ್, ಪೊಲೀಸರಿಗೆ ಸಿಗದ ಸುಳಿವು!
50 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!
‘ವಿದ್ಯಾರ್ಥಿ ಭವನ್’ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಅಧಿಕಾರಿಯ ಆಹಾರ ಕದ್ದು ತಿಂದ ಆರೋಪ: ಆರೋಪಿಯಾದ ಪೊಲೀಸ್ ಡಾಗ್ ಫೋಟೋ ವೈರಲ್
ಫೇಸ್ಬುಕ್ ಲವ್… ಉತ್ತರ ಪ್ರದೇಶದ ಯುವಕನನ್ನ ವರಿಸಲು ಸ್ವೀಡನ್ನಿಂದ ಬಂದಳು!