ಚೀನ ಕಂಪೆನಿಗಳಿಂದ ಪಿಎಂ ಕೇರ್ ಫಂಡ್ಗೆ ದೇಣಿಗೆ: ಡಿಕೆಶಿ ಆರೋಪ
Team Udayavani, Jun 28, 2020, 9:16 PM IST
ಬೆಂಗಳೂರು: ಚೀನ ಕಂಪೆನಿಗಳಿಂದ ಪಿಎಂ ಕೇರ್ ಫಂಡ್ಗೆ ಎಷ್ಟು ದೇಣಿಗೆ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ಪಿಎಂ ಕೇರ್ ಫಂಡ್ಗೆ ಮೇ 20ರಂದು ಪ್ರಧಾನಿ 9,678 ಕೋಟಿ ರೂ. ದೇಣಿಗೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.
ಮೋದಿ 2013ರಲ್ಲಿ ಯಾಕೆ ಚೀನ ಕಂಪೆನಿಗಳಿಂದ ದೇಣಿಗೆ ಪಡೆದುಕೊಂಡಿದ್ದಾರೆ ? ಚೀನ ಮೂಲದ ಹುವಾಯಿ ಕಂಪೆನಿಯಿಂದ ಪ್ರಧಾನಿ 7 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆಯೇ, ಹುವಾಯಿ ಕಂಪೆನಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ ಜತೆಗೆ ಸಂಪರ್ಕ ಹೊಂದಿದಿಯಾ? ಚೀನ ಮೂಲದ ಟಿಕ್ ಟಾಕ್ ಕಂಪನಿ ಪಿಎಂ ಕೇರ್ ಫಂಡ್ ಗೆ 30 ಕೋಟಿ ದೇಣಿಗೆ ನೀಡಿದಿಯಾ? ಪೆಟಿಎಂ 100 ಕೋಟಿ ದೇಣಿಗೆ ನೀಡಿದಿಯಾ? ಎಕ್ಸಿಯೊಮಿ 15 ಕೋಟಿ ಹಾಗೂ ಒಪ್ಪೊ 1 ಕೋಟಿ ರೂಪಾಯಿಯನ್ನು ವಿವಾದಿತ ಪಿಎಂ ಕೇರ್ ಫಂಡ್ ಗೆ ದೇಣಿಗೆ ನೀಡಿದಿಯಾ? ಅಲ್ಲದೇ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ಪಿಎಂ ಕೇರ್ ಫಂಡ್ ಗೆ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಲಿ ಎಂದು ಆಗ್ರಹಿಸಿದ್ದಾರೆ.