ಗೋವಾ ಚುನಾವಣಾ ರಣತಂತ್ರ: 24 ತಂದು ನಡ್ಡಾ ಆಗಮನ
Team Udayavani, Nov 18, 2021, 5:40 PM IST
ಪಣಜಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಗೋವಾ ಬಿಜೆಪಿ ಚುನಾವಣಾ ಪ್ರಭಾರಿ ದೇವೇಂದ್ರ ಫಡ್ನವೀಸ್ ನವೆಂಬರ್ 24 ರಂದು ಗೋವಾಕ್ಕೆ ಆಗಮಿಸಲಿದ್ದಾರೆ.
2022 ರಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಚರ್ಚಿಸಲು ಮತ್ತು ಪಕ್ಷದ ರಾಜ್ಯ ನಾಯಕರೊಂದಿಗೆ, ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ರವರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಹಜ್ ಮತ್ತು ವಕ್ಫ್ ಇಲಾಖೆ ಅಭಿವೃದ್ದಿಗೆ ಕೇಂದ್ರದ ಸಹಕಾರ: ಶಶಿಕಲಾ ಜೊಲ್ಲೆ
ಕೇವಲ ಒಂದು ದಿನದ ಭೇಟಿಗಾಗಿ ಜೆ.ಪಿ ನಡ್ಡಾ ಗೋವಾಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.