ಕೋವಿಡ್‌ ಎಫೆಕ್ಟ್: ಚಿನ್ನದ ಆಮದು ಪ್ರಮಾಣದಲ್ಲಿ ಶೇ. 57ರಷ್ಟು ಇಳಿಕೆ


Team Udayavani, Oct 19, 2020, 5:20 PM IST

india-hikes-import-tariffs-on-gold-and-silver

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ಭಾರತವು ಚಿನ್ನದ ಆಮದು ಮಾಡಿಕೊಳ್ಳುವ ಅತಿದೊಡ್ಡ ದೇಶವಾಗಿದ್ದು, ವಾರ್ಷಿಕ ಸುಮಾರು 800ರಿಂದ 900 ಟನ್‌ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತದೆ.

ಇದರಲ್ಲಿ ಬಹುಪಾಲು ಚಿನ್ನವು ಆಭರಣಗಳ ತಯಾರಿಕೆಗೆ ಬಳಕೆಯಾಗುತ್ತದೆ. ಆದರೆ ಈ ಬಾರಿ ಕೋವಿಡ್‌ ಸಾಂಕ್ರಾಮಿಕರೋಗ ಹರಡುವಿಕೆ ಕಾರಣದಿಂದಾಗಿ ಚಿನ್ನದ ಆಮದು ಪ್ರಮಾಣ ಇಳಿಕೆಯಾಗಿದ್ದು, ಆಮದಿನ ಮೌಲ್ಯವೂ ಕುಸಿತದಿದೆ.

ಶೇ. 57ರಷ್ಟು ಇಳಿಕೆ
ಚಿನ್ನ ಬೇಡಿಕೆಯ ಕುಸಿತದ ನಡುವೆ ಚಾಲ್ತಿ ಖಾತೆ ಕೊರತೆಯ (ಸಿಎಡಿ) ಮೇಲೆ ಪ್ರಭಾವ ಬೀರುವ ಚಿನ್ನದ ಆಮದು ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ. 57ರಷ್ಟು ಇಳಿಕೆಯಾಗಿ 6.8 ಬಿಲಿಯನ್‌ ಡಾಲರ್‌ಗೆ (ಸುಮಾರು 50,658 ಕೋಟಿ ರೂ.) ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ. 2019-20ರಲ್ಲಿ ಎಂಟು ತಿಂಗಳ ಅವಧಿಯಲ್ಲಿ (ಎಪ್ರಿಲ್‌-ನವೆಂಬರ್‌) ಚಿನ್ನದ ಆಮದು ಪ್ರಮಾಣವು ಕಡಿಮೆಯಾಗಿರುವುದರಿಂದ ದೇಶದ ವ್ಯಾಪಾರ ಕೊರತೆಯು ಎಂಟು ತಿಂಗಳ ಅವಧಿಯಲ್ಲಿ 7.47 ಲಕ್ಷ ಕೋಟಿಗಳಿಗೆ ಇಳಿಯಲಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು 9.36 ಲಕ್ಷ ಕೋಟಿ ರುಪಾಯಿಗಳಷ್ಟಿತ್ತು ಎಂದು ವರದಿ ತಿಳಿಸಿದೆ.

ಬೆಳ್ಳಿ ಆಮದು ಶೇ. 63.4ರಷ್ಟು ಕುಸಿತ
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಚಿನ್ನದ ಆಮದು 15.8 ಬಿಲಿಯನ್‌ ಡಾಲರ್‌ (ಸುಮಾರು 1,10,259 ಕೋಟಿ ರೂ.) ಮೌಲ್ಯದಷ್ಟಿತ್ತು. 2020ರ ಎಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ ಬೆಳ್ಳಿ ಆಮದು ಶೇ. 63.4ರಷ್ಟು ಇಳಿದು 733.57 ಮಿಲಿಯನ್‌ ಡಾಲರ್‌ಗೆ (ಸುಮಾರು 5,543 ಕೋಟಿ ರೂ.) ತಲುಪಿದೆ ಎಂದು ಅಂಕಿ – ಅಂಶಗಳು ತೋರಿಸಿವೆ.

ಚಿನ್ನದ ಅತಿದೊಡ್ಡ ಆಮದುದಾರರಾಗಿರುವ ಭಾರತ ಆಭರಣ ಉದ್ಯಮದ ಬೇಡಿಕೆ ಪೂರೈಸುತ್ತದೆ. ಆದರೆ ಸದ್ಯ ಕೋವಿಡ್‌ ಪರಿಣಾಮ ಆಮದು ಪ್ರಮಾಣ ಕುಸಿತಗೊಂಡಿದೆ. ಆದರೆ ಚಿನ್ನ ಮತ್ತು ಬೆಳ್ಳಿ ಆಮದಿನ ಕುಸಿತವು ದೇಶದ ವ್ಯಾಪಾರ ಕೊರತೆ, ಆಮದು ಮತ್ತು ರಫ್ತುಗಳ ನಡುವಿನ ವ್ಯತ್ಯಾಸ 2020 – 21ರ ಎಪ್ರಿಲ್‌ -ಸೆಪ್ಟೆಂಬರ್‌ ಅವಧಿಯಲ್ಲಿ 23.44 ಬಿಲಿಯನ್‌ ಡಾಲರ್‌ಗೆ ತಲುಪುವಲ್ಲಿ ನೆರವಾಗಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 88.92 ಬಿಲಿಯನ್‌ ಡಾಲರ್‌ ಆಗಿತ್ತು. ಸಾಂಕ್ರಾಮಿಕ ರೋಗದ ಮಧ್ಯೆ 2020ರ ಎಪ್ರಿಲ್‌-ಸೆಪ್ಟಂಬರ್‌ನಲ್ಲಿ ರತ್ನ ಮತ್ತು ಆಭರಣ ರಫ್ತು ಶೇ. 55ರಷ್ಟು ಇಳಿಕೆಯಾಗಿ 8.7 ಬಿಲಿಯನ್‌ ಡಾಲರ್‌ಗೆ ತಲುಪಿದೆ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.