ತೌಕ್ತೆ ಚಂಡಮಾರುತದಿಂದ ಹಾನಿ: ಮೀನುಗಾರರಿಗೆ 105 ಕೋಟಿ ರೂ. ಪ್ಯಾಕೇಜ್ ಘೋಷಣೆ: ಗುಜರಾತ್
ಒಂದು ಸಾವಿರ ರೂಪಾಯಿಗಿಂತ ಹೆಚ್ಚು ಪರಿಹಾರ ನೀಡಲಾಗುವುದು ಎಂದು ವರದಿ ತಿಳಿಸಿದೆ.
Team Udayavani, Jun 2, 2021, 2:25 PM IST
ನವದೆಹಲಿ: ಕಳೆದ ತಿಂಗಳು ತೌಕ್ತೆ ಚಂಡಮಾರುತದಿಂದ ಸಂಭವಿಸಿದ ಹಾನಿಯ ಹಿನ್ನೆಲೆಯಲ್ಲಿ ಮೀನುಗಾರರಿಗೆ 105 ಕೋಟಿ ರೂಪಾಯಿ ಆರ್ಥಿಕ ನೆರವಿನ ಪ್ಯಾಕೇಜ್ ಅನ್ನು ಪಶ್ಚಿಮಬಂಗಾಳ ಸರ್ಕಾಆರ ಬುಧವಾರ(ಜೂನ್ 02) ಘೋಷಿಸಿದೆ.
ಇದನ್ನೂ ಓದಿ:ನೀರು ಸರಬರಾಜು ಇಳಿಸುವ ವೇಳೆ ಸುಪರ್ ವೈಸರ್ ಮೇಲೆ ಬಿದ್ದ ಪೈಪ್: ಗಾಯಗೊಂಡ ಸುಪರ್ ವೈಸರ್ ಸಾವು
ತೌಕ್ತೆ ಚಂಡಮಾರುತದಿಂದ ಸಂಭವಿಸಿದ ನಷ್ಟದ ಪುನರ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಆರ್ಥಿಕ ಪ್ಯಾಕೇಜ್ ಘೋಷಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 17ರ ರಾತ್ರಿ ಗುಜರಾತ್ ಕರಾವಳಿ ಪ್ರದೇಶದ ಮೇಲೆ ಗಂಟೆಗೆ 220 ಕಿಲೋ ಮೀಟರ್ ವೇಗದಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿತ್ತು. ಇದರ ಪರಿಣಾಮವಾಗಿ ಸಣ್ಣ ದೋಣಿ, ಬಲೆ ಸೇರಿದಂತೆ ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು.
ಗುಜರಾತ್ ನ ಜಫ್ರಾಬಾದ್, ರಾಜುಲಾ, ಸೈಯದ್ ರಾಜ್ ಪಾರಾ, ಶಿಯಾಲ್ ಬೆಟ್ ಮತ್ತು ನವಬಂದರು ಪ್ರದೇಶಗಳಲ್ಲಿ ಚಂಡಮಾರುತ ತೌಕ್ತೆ ಅಪಾರ ಹಾನಿಯನ್ನು ಉಂಟು ಮಾಡಿತ್ತು. ಚಂಡಮಾರುತದಿಂದ ಹಾನಿಗೊಳಗಾದ ಸಣ್ಣ ಮತ್ತು ದೊಡ್ಡ ಪ್ರಮಾಣದ ದೋಣಿಗಳಿಗೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ಪರಿಹಾರ ನೀಡಲಾಗುವುದು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳೆ ಚಿನ್ನವನ್ನು ಬದಲಾಯಿಸುವ ನೆಪದಲ್ಲಿ ನಕಲಿ ಚಿನ್ನಾಭರಣ ಕೊಟ್ಟು ವಂಚನೆ: ಇಬ್ಬರ ಬಂಧನ
ಮೋದಿ ಸರಕಾರದ ಅವಧಿಯಲ್ಲಿ ಕೇಂದ್ರ ಮಟ್ಟದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ
ಬಿಹಾರ ಸಚಿವ ಸಂಪುಟ ವಿಸ್ತರಣೆ: ನಿತೀಶ್ ಕುಮಾರ್ ಗೆ ಗೃಹ, ತೇಜಸ್ವಿಗೆ ಆರೋಗ್ಯ ಖಾತೆ
ನದಿಗೆ ಉರುಳಿ ಬಿದ್ದ ಐಟಿಬಿಪಿ ಸಿಬ್ಬಂದಿಗಳನ್ನು ಹೊತ್ತೊಯ್ದ ಬಸ್ : 6 ಮಂದಿ ಸಾವು
ಶೋಪಿಯಾನ್: ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ ಸಾವು, ಸಹೋದರನಿಗೆ ಗಾಯ