ಹಿಜಾಬ್‌ ಪ್ರತಿಭಟನೆ: ಇರಾನ್‌ನಲ್ಲಿ ಹಿಂಸಾಚಾರಕ್ಕೆ 50 ಬಲಿ

ದೇಶಾದ್ಯಂತ ವ್ಯಾಪಿಸಿದ ಉಗ್ರ ಪ್ರತಿಭಟನೆಗಳು

Team Udayavani, Sep 26, 2022, 10:34 PM IST

1-asadasd

ತೆಹ್ರಾನ್‌: ಹಿಜಾಬ್‌ ಸರಿಯಾಗಿ ಧರಿಸಿರಲಿಲ್ಲ ಎಂಬ ಕಾರಣಕ್ಕೆ ಬಂಧಿತಳಾದ 22 ವರ್ಷದ ಯುವತಿ ಮೆಹ್ಸಾ ಅಮಿನಿ, ಪೊಲೀಸರ ವಶದಲ್ಲಿ ಮೃತಪಟ್ಟ ಬೆನ್ನಲ್ಲೇ ಆರಂಭಗೊಂಡ ಉಗ್ರ ಪ್ರತಿಭಟನೆಗಳು ಈಗ ಇರಾನ್‌ ದೇಶಾದ್ಯಂತ ವ್ಯಾಪಿಸಿವೆ.

ಪೊಲೀಸರ ನೈತಿಕಗಿರಿ ಖಂಡಿಸಿ ಇರಾನ್‌ ಮಹಿಳೆಯರು ಅಕ್ಷರಶಃ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪ್ರಮುಖ 13 ನಗರಗಳಲ್ಲಿ ಪ್ರತಿಭಟನೆಗಳು ವ್ಯಾಪಿಸಿವೆ. ಈ ವೇಳೆ ಉಂಟಾದ ಹಿಂಸಾಚಾರದಲ್ಲಿ ಪೊಲೀಸರು ಸೇರಿ ಈವರೆಗೂ 50 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ತಮ್ಮ ಸ್ವಾತಂತ್ರ್ಯ ಮತ್ತು ಹಕ್ಕನ್ನು ಪ್ರತಿಪಾದಿಸಿ ಇರಾನ್‌ ಮಹಿಳೆಯರು ಹಿಜಾಬ್‌ ಸುಡುತ್ತಿದ್ದಾರೆ. ಪ್ರತಿಭಟನೆ ರೂಪವಾಗಿ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ. ಹಿಜಾಬ್‌ ಹಾಕದೇ ಬೀದಿಗೆ ಬರುತ್ತಿದ್ದಾರೆ. ಕೂದಲನ್ನು ಬಾವುಟದಂತೆ ಕೋಲಿಗೆ ಕಟ್ಟಿ ಪ್ರದರ್ಶಿಸುತ್ತಿದ್ದಾರೆ.

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ನೇತೃತ್ವದ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ಪ್ರತಿಭಟನೆಗಳು ಹೆಚ್ಚುತ್ತಿವೆ. ನಿಯಂತ್ರಣದ ಭಾಗವಾಗಿ ಅಲ್ಲಿನ ಸರ್ಕಾರ, ಸಾಮಾಜಿಕ ಜಾಲತಾಣಗಳನ್ನು ಬಂದ್‌ ಮಾಡಿವೆ. ಇರಾನ್‌ನಲ್ಲಿ ಆರಂಭವಾದ ಪ್ರತಿಭಟನೆ ಸಿರಿಯಾ ಸೇರಿದಂತೆ ಬೇರೆ ದೇಶಗಳಿಗೂ ಹಬ್ಬುತ್ತಿದೆ.

ಲಂಡನ್‌ನಲ್ಲಿ ಪ್ರತಿಭಟನೆ
ಇಂಗ್ಲೆಂಡ್‌ನ‌ ಲಂಡನ್‌ನಲ್ಲಿ ಇರಾನ್‌ ರಾಯಭಾರ ಕಚೇರಿಯ ಎದುರು ದೊಡ್ಡ ಸಂಖ್ಯೆಯ ಜನರು, ಮೆಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅನೇಕ ಪ್ರತಿಭಟನಾಕಾರು ಹಾಗೂ ಕನಿಷ್ಠ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇದೇ ವೇಳೆ 12 ಮಂದಿ ಪ್ರತಿಭಟನಾಕಾರರನ್ನು ಲಂಡನ್‌ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ಬಾಟಲ್‌, ಕಲ್ಲು ಸೇರಿದಂತೆ ಇತರೆ ವಸ್ತುಗಳನ್ನು ತೂರಲಾಗಿತ್ತು.

ಕೇರಳದಲ್ಲಿ ಹಿಜಾಬ್‌ ಬೆಂಬಲಿಸಿ ಪ್ರತಿಭಟನೆ
ಕೇರಳದ ಕಲ್ಲಿಕೋಟೆಯಲ್ಲಿ ಹಿಜಾಬ್‌ ಧರಿಸಿದ 11ನೇ ತರಗತಿಯ ಯುವತಿಗೆ ತರಗತಿ ಪ್ರವೇಶ ನಿರಾಕರಿಸಿದ ಕಾಲೇಜಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ.

ಈ ವೇಳೆ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ಹಿಜಾಬ್‌ಗ ನಿರಾಕರಿಸಿದ ಕಾಲೇಜಿನ ಮಾನ್ಯತೆಯನ್ನೇ ರದ್ದುಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

ಬಾಲಕನಿಗೆ ಬಟ್ಟೆ ಕೊಡಿಸಿ, ಉದ್ಯೋಗದ ಭರವಸೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ

ಬಾಲಕನಿಗೆ ಬಟ್ಟೆ ಕೊಡಿಸಿ, ಉದ್ಯೋಗದ ಭರವಸೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ

ಯುವಕನಿಗೆ ಹಲ್ಲೆ : ಸುಬ್ರಹ್ಮಣ್ಯ ಠಾಣಾ ಪೊಲೀಸ್‌ ಸಿಬಂದಿ ವಿರುದ್ಧ ಪ್ರಕರಣ ದಾಖಲು

ಯುವಕನಿಗೆ ಹಲ್ಲೆ : ಸುಬ್ರಹ್ಮಣ್ಯ ಠಾಣಾ ಪೊಲೀಸ್‌ ಸಿಬಂದಿ ವಿರುದ್ಧ ಪ್ರಕರಣ ದಾಖಲು

ಕಟ್ಟುನಿಟ್ಟಾಗಿ ಷರತ್ತು ಪಾಲಿಸಿ ಹೊಸ ವರ್ಷ ಆಚರಿಸಿ: ಆಯುಕ್ತರ ಸೂಚನೆ

ಮಂಗಳೂರು: ಕಟ್ಟುನಿಟ್ಟಾಗಿ ಷರತ್ತು ಪಾಲಿಸಿ ಹೊಸ ವರ್ಷ ಆಚರಿಸಿ: ಆಯುಕ್ತರ ಸೂಚನೆ

ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಮೆದುಳು ಜ್ವರ) ಲಸಿಕೆ ಅಭಿಯಾನ

ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಮೆದುಳು ಜ್ವರ) ಲಸಿಕೆ ಅಭಿಯಾನ

ಅರ್ಹರನ್ನು ಹುಡುಕಿ ಮತದಾರರ ಪಟ್ಟಿಗೆ ಸೇರಿಸಿ: ಡಾ| ಕುಮಾರ್‌

ಅರ್ಹರನ್ನು ಹುಡುಕಿ ಮತದಾರರ ಪಟ್ಟಿಗೆ ಸೇರಿಸಿ: ಡಾ| ಕುಮಾರ್‌

ಕಾಂಗ್ರೆಸ್‌ನವರಿಗೆ ಮತದಾರರೇ ಸರಿಯಿಲ್ಲ ಎನಿಸೀತು: ಸಚಿವ ಸುನಿಲ್‌ ಕುಮಾರ್‌ ವ್ಯಂಗ್ಯ

ಕಾಂಗ್ರೆಸ್‌ನವರಿಗೆ ಮತದಾರರೇ ಸರಿಯಿಲ್ಲ ಎನಿಸೀತು: ಸಚಿವ ಸುನಿಲ್‌ ಕುಮಾರ್‌ ವ್ಯಂಗ್ಯ

ಟೋಲ್‌ ಸಂಗ್ರಹ ವಿವಾದ: ದಿಲ್ಲಿಯಲ್ಲೇ ಪರಿಹಾರ ಆಗಲಿ: ಜನಪ್ರತಿನಿಧಿಗಳ ಒಕ್ಕೊರಲ ಆಗ್ರಹ

ಟೋಲ್‌ ಸಂಗ್ರಹ ವಿವಾದ: ದಿಲ್ಲಿಯಲ್ಲೇ ಪರಿಹಾರ ಆಗಲಿ: ಜನಪ್ರತಿನಿಧಿಗಳ ಒಕ್ಕೊರಲ ಆಗ್ರಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-17

21 ವರ್ಷಕ್ಕೆ ಇಹಲೋಕ ತ್ಯಜಿಸಿದ ಖ್ಯಾತ ಟಿಕ್‌ಟಾಕ್‌ ಸ್ಟಾರ್

thumb-1

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

ಮಸ್ಕ್ ಮೆದುಳಿಗೆ ಚಿಪ್‌ ಅಳವಡಿಕೆ? ಮುಂದಿನ ಆರು ತಿಂಗಳಲ್ಲಿ ಪ್ರಯೋಗ ಪೂರ್ಣ ಸಾಧ್ಯತೆ

ಮಸ್ಕ್ ಮೆದುಳಿಗೆ ಚಿಪ್‌ ಅಳವಡಿಕೆ? ಮುಂದಿನ ಆರು ತಿಂಗಳಲ್ಲಿ ಪ್ರಯೋಗ ಪೂರ್ಣ ಸಾಧ್ಯತೆ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಬಾಲಕನಿಗೆ ಬಟ್ಟೆ ಕೊಡಿಸಿ, ಉದ್ಯೋಗದ ಭರವಸೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ

ಬಾಲಕನಿಗೆ ಬಟ್ಟೆ ಕೊಡಿಸಿ, ಉದ್ಯೋಗದ ಭರವಸೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ

ಯುವಕನಿಗೆ ಹಲ್ಲೆ : ಸುಬ್ರಹ್ಮಣ್ಯ ಠಾಣಾ ಪೊಲೀಸ್‌ ಸಿಬಂದಿ ವಿರುದ್ಧ ಪ್ರಕರಣ ದಾಖಲು

ಯುವಕನಿಗೆ ಹಲ್ಲೆ : ಸುಬ್ರಹ್ಮಣ್ಯ ಠಾಣಾ ಪೊಲೀಸ್‌ ಸಿಬಂದಿ ವಿರುದ್ಧ ಪ್ರಕರಣ ದಾಖಲು

ಕಟ್ಟುನಿಟ್ಟಾಗಿ ಷರತ್ತು ಪಾಲಿಸಿ ಹೊಸ ವರ್ಷ ಆಚರಿಸಿ: ಆಯುಕ್ತರ ಸೂಚನೆ

ಮಂಗಳೂರು: ಕಟ್ಟುನಿಟ್ಟಾಗಿ ಷರತ್ತು ಪಾಲಿಸಿ ಹೊಸ ವರ್ಷ ಆಚರಿಸಿ: ಆಯುಕ್ತರ ಸೂಚನೆ

ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಮೆದುಳು ಜ್ವರ) ಲಸಿಕೆ ಅಭಿಯಾನ

ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಮೆದುಳು ಜ್ವರ) ಲಸಿಕೆ ಅಭಿಯಾನ

ನಾಡದೋಣಿ ಮೀನುಗಾರಿಕೆ ಸೀಮೆ ಎಣ್ಣೆ ಸಮರ್ಪಕ ವಿತರಣೆಗೆ ಕ್ರಮ: ಯಶ್‌ಪಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.