ವೈಟ್ಹೌಸ್ ಮಾಧ್ಯಮ ಸಹ ಕಾರ್ಯದರ್ಶಿಯಾಗಿ ವೇದಾಂತ್ ಪಟೇಲ್ ಆಯ್ಕೆ
Team Udayavani, Dec 19, 2020, 9:40 PM IST
ವಾಷಿಂಗ್ಟನ್: ಜೋ ಬೈಡೆನ್ ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕೂ ಮುಂಚಿತವಾಗಿ ಹಲವಾರು ಭಾರತೀಯ ಮೂಲದ ವ್ಯಕ್ತಿಗಳನ್ನು ಪ್ರಮುಖ ಸ್ಥಾನಗಳಲ್ಲಿ ನೇಮಿಸುವುದನ್ನು ಮುಂದುವರಿಸಿದ್ದಾರೆ. ಇದರಲ್ಲಿ ಕಾಣಿಸಿಕೊಂಡಿರುವ ಹೊಸ ಹೆಸರು ಗುಜರಾತ್ ಮೂಲದ ವೇದಾಂತ್ ಪಟೇಲ್.
ಅವರು ವೈಟ್ಹೌಸ್ನ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಪಟೇಲ್ ಅವರು ಬೈಡೆನ್ ಅವರ ಉದ್ಘಾಟನಾ ಸಮಿತಿಯ ವಕ್ತಾರರೂ ಆಗಿದ್ದಾರೆ. ಅವರ ಚುನಾವಣಾ ಅಭಿಯಾನದ ಭಾಗವೂ ಆಗಿದ್ದರು. ವೇದಾಂತ್ ಪಟೇಲ್, ವೈಟ್ಹೌಸ್ನ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾದ ಮೂರನೇ ಭಾರತೀಯ ವ್ಯಕ್ತಿಯಾಗಿದ್ದಾರೆ. ಪ್ರಿಯಾ ಸಿಂಗ್ 2009ರಿಂದ 2010ರವರೆಗೆ, ರಾಜ್ ಶಾ 2017ರಿಂದ 2019ರವರೆಗೆ ಈ ಹೊಣೆ ಹೊತ್ತುಕೊಂಡಿದ್ದರು.
ಇದನ್ನೂ ಓದಿ:ತಿರುಪತಿ: ಸ್ಥಳೀಯರಿಗಷ್ಟೇ ವೈಕುಂಠ ದರ್ಶನ ಟಿಕೆಟ್ ವಿತರಿಸಲು ಟಿಟಿಡಿ ನಿರ್ಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ