ಬೆಂಗಳೂರಿಗೆ ಬೌಲಿಂಗ್‌ ಚಿಂತೆ; ಇಂದು ಡೆಲ್ಲಿ ಎದುರಾಳಿ ; ಕಾಡುತ್ತಿದೆ ಹರ್ಷಲ್‌ ಪಟೇಲ್‌ ಗೈರು


Team Udayavani, Apr 16, 2022, 7:15 AM IST

ಬೆಂಗಳೂರಿಗೆ ಬೌಲಿಂಗ್‌ ಚಿಂತೆ; ಇಂದು ಡೆಲ್ಲಿ ಎದುರಾಳಿ ; ಕಾಡುತ್ತಿದೆ ಹರ್ಷಲ್‌ ಪಟೇಲ್‌ ಗೈರು

ಮುಂಬಯಿ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಈ ಋತುವಿನ ಮೊದಲ ಜಯ ಕೊಡಿ ಸಿದ ಅಪವಾದ ಹೊತ್ತಿರುವ ಆರ್‌ಸಿಬಿ ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮರಳಿ ಗೆಲುವಿನ ಹಳಿ ಏರಲು ಪ್ರಯತ್ನಿಸಬೇಕಿದೆ. ಚೆನ್ನೈಗೆ ಶರಣಾಗುವ ಮುನ್ನ ಬೆಂಗಳೂರು ತಂಡ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮದಲ್ಲಿತ್ತು.

ಚೆನ್ನೈ ವಿರುದ್ಧ ಡು ಪ್ಲೆಸಿಸ್‌ ಬಳಗದ್ದು ಹೀನಾಯ ಸೋಲೇನೂ ಆಗಿರಲಿಲ್ಲ. 216 ರನ್‌ ಬಿಟ್ಟುಕೊಟ್ಟರೂ ಚೇಸಿಂಗ್‌ ವೇಳೆ 9ಕ್ಕೆ 193 ರನ್‌ ಪೇರಿಸುವಲ್ಲಿ ಯಶಸ್ವಿ ಯಾಗಿತ್ತು. ಟಾಪ್‌ ಆರ್ಡರ್‌ ಬ್ಯಾಟಿಂಗ್‌ ಕ್ಲಿಕ್‌ ಆಗಿದ್ದಿದ್ದರೆ, ದಿನೇಶ್‌ ಕಾರ್ತಿಕ್‌ ಕೊನೆಯ ವರೆಗೂ ಕ್ರೀಸ್‌ನಲ್ಲಿ ಉಳಿದಿದ್ದರೆ ಪಂದ್ಯದ ಫ‌ಲಿತಾಂಶವೇ ಬೇರೆ ಆಗಲಿತ್ತು. ಇದಕ್ಕೂ ಮಿಗಿಲಾಗಿ ಸ್ಟಾರ್‌ ಬೌಲರ್‌ ಹರ್ಷಲ್‌ ಪಟೇಲ್‌ ಅನುಪಸ್ಥಿತಿ ತಂಡದ ಬೌಲಿಂಗ್‌ ವಿಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಡೆಲ್ಲಿ ವಿರುದ್ಧವೂ ಹರ್ಷಲ್‌ ಆಡುತ್ತಿಲ್ಲ ಎಂಬುದು ಆರ್‌ಸಿಬಿ ಪಾಲಿಗೆ ಮತ್ತೆ ಹಿನ್ನಡೆ ಎಂಬುದರಲ್ಲಿ ಅನುಮಾನವಿಲ್ಲ.

ಮೊಹಮ್ಮದ್‌ ಸಿರಾಜ್‌ ಪ್ರತೀ ಪಂದ್ಯದಲ್ಲೂ ದುಬಾರಿ ಆಗುತ್ತಿದ್ದಾರೆ. ಆಕಾಶ್‌ ದೀಪ್‌ ಚೆನ್ನಾಗಿ ದಂಡಿಸಿ ಕೊಂಡಿದ್ದಾರೆ. ಹ್ಯಾಝಲ್‌ವುಡ್‌ ಇನ್ನಷ್ಟೇ ಅಪಾಯಕಾರಿಯಾಗಿ ಗೋಚರಿಸಬೇಕಿದೆ. ಮ್ಯಾಕ್ಸ್‌ವೆಲ್‌ ಕೇವಲ ಬದಲಿ ಬೌಲರ್‌, ಇವರಿಂದ ಮ್ಯಾಜಿಕ್‌ ನಿರೀಕ್ಷಿಸುವಂತಿಲ್ಲ. ಸ್ಪಿನ್ನರ್‌ಗಳಾದ ಶಬಾಜ್‌ ಅಹ್ಮದ್‌ ಮತ್ತು ವನಿಂದು ಹಸರಂಗ ಡೆಲ್ಲಿಗೆ ನಿಯಂತ್ರಣ ಹೇರಬೇಕಾದ ಒತ್ತಡಲ್ಲಿದ್ದಾರೆ. ಒಟ್ಟಾರೆ ಹೇಳುವುದಾದರೆ ಆರ್‌ಸಿಬಿಯ ಬೌಲಿಂಗ್‌ ವಿಭಾಗ ಇನ್ನಷ್ಟು ಘಾತಕ ಗೊಳ್ಳಬೇಕಿದೆ. ಆಗಷ್ಟೇ ಪಂತ್‌ ಪಡೆಯ ವಿರುದ್ಧ ಮೇಲುಗೈ ಸಾಧ್ಯ.

ಬೇಕಿದೆ ದೊಡ್ಡ ಜತೆಯಾಟ
ಚೆನ್ನೈ ವಿರುದ್ಧದ ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ಭದ್ರ ಬುನಾದಿ ನಿರ್ಮಿಸುವಲ್ಲಿ ಸ್ವತಃ ನಾಯಕ ಡು ಪ್ಲೆಸಿಸ್‌ ವಿಫ‌ಲರಾಗಿದ್ದರು. ಅನುಭವಿ ವಿರಾಟ್‌ ಕೊಹ್ಲಿ ವೈಫ‌ಲ್ಯ ಮುಂದುವರಿಯಿತು. ಇವರಿಬ್ಬರ ತ್ವರಿತ ನಿರ್ಗಮನದಿಂದ ಪ್ರತಿಭಾನ್ವಿತ ಲೆಫ್ಟಿ ಅನುಜ್‌ ರಾವತ್‌ ಸಹಜ ವಾಗಿಯೇ ಒತ್ತಡಕ್ಕೊಳಗಾದರು.

ಪೃಥ್ವಿ ಪ್ರಚಂಡ ಫಾರ್ಮ್: ರಿಷಭ್‌ ಪಂತ್‌ ನೇತೃತ್ವದ ಡೆಲ್ಲಿಯದ್ದು 50-50 ಪ್ರದರ್ಶನ. 4 ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ. ಹಿಂದಿನ ಮುಖಾಮುಖೀಯಲ್ಲಿ ಕೆಕೆಆರ್‌ ವಿರುದ್ಧ 215 ರನ್‌ ಪೇರಿಸಿ 44 ರನ್ನುಗಳಿಂದ ಗೆದ್ದುಬಂದ ಖುಷಿಯಲ್ಲಿದೆ.

ಓಪನರ್‌ ಪೃಥ್ವಿ ಶಾ ಸತತ 2 ಫಿಫ್ಟಿ ಮೂಲಕ ಪ್ರಚಂಡ ಫಾರ್ಮ್ ತೋರ್ಪಡಿಸಿದ್ದಾರೆ. ಡೇವಿಡ್‌ ವಾರ್ನರ್‌ ಕೂಡ ಲಯ ಕಂಡುಕೊಂಡಿದ್ದಾರೆ. ಪಂತ್‌ ವನ್‌ಡೌನ್‌ನಲ್ಲಿ ಬಂದು ಸಿಡಿದು ನಿಂತಿದ್ದಾರೆ. ಈ ಮೂವರಿಗೆ ನಿಯಂತ್ರಣ ಹೇರಿದರೆ ಆರ್‌ಸಿಬಿ ಅರ್ಧ ಗೆದ್ದಂತೆ!

ಕುಲದೀಪ್‌ ಯಾದವ್‌, ಖಲೀಲ್‌ ಅಹ್ಮದ್‌ ಡೆಲ್ಲಿಯ ಬೌಲಿಂಗ್‌ ಹೀರೋಸ್‌. ಕ್ರಮವಾಗಿ 10 ಹಾಗೂ 7 ವಿಕೆಟ್‌ ಕೆಡವಿ ಘಾತಕವಾಗಿ ಪರಿಣಮಿಸಿದ್ದಾರೆ.

ಇದನ್ನೂ ಓದಿ:ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: ಜರ್ಮನಿಯೆದುರು ಭಾರತಕ್ಕೆ ಗೆಲುವು

ಆರ್‌ಸಿಬಿ ಹರ್ಷಕ್ಕೆ
ಹರ್ಷಲ್‌ ಅನಿವಾರ್ಯ
ಮುಂಬಯಿ: ಆರ್‌ಸಿಬಿಯ ಬೌಲಿಂಗ್‌ ವಿಭಾಗಕ್ಕೆ ಹರ್ಷಲ್‌ ಪಟೇಲ್‌ ಎಷ್ಟು ಅನಿವಾರ್ಯ ಎಂಬುದು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಕಳೆದ ಪಂದ್ಯದಲ್ಲಿ ಚೆನ್ನಾಗಿ ಅರಿವಾಗಿದೆ. ಪ್ರಸಕ್ತ ಋತುವಿನಲ್ಲಿ ಗೆಲುವನ್ನೇ ಕಾಣದ ಹಾಲಿ ಚಾಂಪಿಯನ್‌ ಚೆನ್ನೈ ಇನ್ನೂರರ ಗಡಿ ದಾಟಿ ಅಂಕದ ಖಾತೆ ತೆರೆಯಿತು. ಈ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮದಲ್ಲಿತ್ತು ಎಂಬುದನ್ನು ಮರೆಯುವಂತಿಲ್ಲ.

ಇದೀಗ ಶನಿವಾರ ರಾತ್ರಿ ಆರ್‌ಸಿಬಿ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಡಳಿಲಿಯಲಿದೆ. ಈ ಪಂದ್ಯದಲ್ಲೂ ಹರ್ಷಲ್‌ ಪಟೇಲ್‌ ಆಡುತ್ತಿಲ್ಲ. ಸಹಜವಾಗಿಯೇ ಆರ್‌ಸಿಬಿ ಬೌಲಿಂಗ್‌ ದುರ್ಬಲವಾಗಿ ಗೋಚರಿಸುತ್ತಿದೆ. ಮುಖ್ಯವಾಗಿ ಡೆತ್‌ ಓವರ್‌ಗಳಲ್ಲಿ ರನ್‌ ನಿಯಂತ್ರಿಸಲು ಡು ಪ್ಲೆಸಿಸ್‌ ಬಳಗ ಪರದಾಡಬೇಕಿದೆ ಎಂಬುದು ಸದ್ಯದ ಲೆಕ್ಕಾಚಾರ.

“ಹರ್ಷಲ್‌ ಪಟೇಲ್‌ ಅವರ ಮೌಲ್ಯವೇನು ಎಂಬುದು ನಿಮ್ಮೆಲ್ಲರ ಅರಿವಿಗೆ ಬಂದಿದೆ. ಎದುರಾಳಿ ತಂಡದ ಬ್ಯಾಟಿಂಗ್‌ ಆಕ್ರಮಣವನ್ನು ಸಂಪೂರ್ಣವಾಗಿ ನಿಯಂತ್ರಿಸಬಲ್ಲ ತಾಕತ್ತು ಅವರಿಗಿದೆ. ಅವರಿಲ್ಲದೆ ನಮ್ಮ ಬೌಲಿಂಗ್‌ ವಿಭಾಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೂಡಲೇ ಅವರು ತಂಡವನ್ನು ಕೂಡಿಕೊಳ್ಳುತ್ತಾರೆಂಬ ವಿಶ್ವಾಸ ನಮ್ಮದು’ ಎಂದಿದ್ದಾರೆ ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌. ಅಂದಮೇಲೆ ಪಟೇಲ್‌ ಡೆಲ್ಲಿ ವಿರುದ್ಧವೂ ಲಭ್ಯರಿರುವುದಿಲ್ಲ ಎಂಬುದು ಸಾಬೀತಾಗಿದೆ.

ಸಹೋದರಿಯ ಆಗಲಿಕೆಯ ನೋವಿನಲ್ಲಿರುವ ಹರ್ಷಲ್‌ ಪಟೇಲ್‌ ತಂಡವನ್ನು ಯಾವಾಗ ಕೂಡಿಕೊಳ್ಳುವರೆಂಬುದು ಇನ್ನೂ ಖಾತ್ರಿಯಾಗಿಲ್ಲ. ಅವರು ಕ್ವಾರಂಟೈನ್‌ ಪೂರೈಸಿ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಬೇಕಾಗುತ್ತದೆ.

ಗುಜರಾತ್‌ನವರಾದ 31 ವರ್ಷದ ಹರ್ಷಲ್‌ ಪಟೇಲ್‌ 2021ರ ಸೀಸನ್‌ನಲ್ಲಿ 32 ವಿಕೆಟ್‌ ಉಡಾಯಿಸಿದ್ದರು. ಟಿ20ಯ ಅತ್ಯಂತ ಘಾತಕ ಬೌಲರ್‌ ಎಂಬುದು ಅವರ ಹೆಗ್ಗಳಿಕೆ. ಅಪಾಯಕಾರಿ ಆಫ್ ಕಟರ್, ನಿಧಾನ ಗತಿಯ ಎಸೆತಗಳೆಲ್ಲ ಪಟೇಲ್‌ ಬತ್ತಳಿಕೆಯಲ್ಲಿನ ಪ್ರಮುಖ ಅಸ್ತ್ರಗಳು. ಈ ಬಾರಿ 4 ಪಂದ್ಯಗಳಿಂದ 6 ವಿಕೆಟ್‌ ಕೆಡವಿದ್ದಾರೆ.

 

ಟಾಪ್ ನ್ಯೂಸ್

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.