Udayavni Special

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

ಎರಡು ತಿಂಗಳ ಬಳಿಕ ಬೆಳಕಿಗೆ ಬಂದ ಕೊಲೆ ಪ್ರಕರಣ

Team Udayavani, Sep 19, 2020, 2:44 PM IST

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಿಳೆಯನ್ನು ಕೊಲೆ ಮಾಡಿ ನಿಪ್ಪಾಣಿಯಲ್ಲಿ ಹೂತು ಹಾಕಿರುವ ಪ್ರಕರಣ ಎರಡು ತಿಂಗಳ ಬಳಿಕ ಮೊಬೈಲ್‌ ಆನ್‌ ಆಗುತ್ತಿದ್ದಂತೆ ಬೆಳಕಿಗೆ ಬಂದಿದ್ದು, ನಿಪ್ಪಾಣಿಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಹಾರಾಷ್ಟ್ರದ ಕಾಗಲ ತಾಲೂಕಿನ ಗೋರಂಬೆಯ ಗೀತಾ ಸಾಗರ ಶಿರಗಾವೆ(34) ಎಂಬ ಮಹಿಳೆಯ ಮೃತದೇಹವನ್ನು ಕಬ್ಬಿನ ಹೊಲದಲ್ಲಿ ಹೂತು ಹಾಕಲಾಗಿತ್ತು. ಶುಕ್ರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಇದನ್ನು ಸುಪಾರಿ ಕೊಲೆ ಎಂದು ಶಂಕಿಸಲಾಗಿದೆ.

ಘಟನೆ ಹಿನ್ನೆಲೆ ಏನು?: ಗೋರಂಬೆಯ ಗೀತಾ ಎಂಬ ಮಹಿಳೆಯನ್ನು ಕರವೀರ ತಾಲೂಕಿನ ಕೋಗೆ ಎಂಬ ಗ್ರಾಮದ ವ್ಯಕ್ತಿಯೊಂದಿಗೆ 18 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಈಕೆಗೆ ಪುತ್ರ, ಪುತ್ರಿ ಇದ್ದಾರೆ. ಕಳೆದ ಅನೇಕ ವರ್ಷಗಳಿಂದ ಗೋರಂಬೆಯ ಸಾಗರ ಹಾಗೂ ಗೀತಾ ಪ್ರೀತಿಸುತ್ತಿದ್ದರು. ಆರು ತಿಂಗಳ ಹಿಂದೆಯಷ್ಟೇ ಗೀತಾ ಪತಿ ಮತ್ತು ಮಕ್ಕಳನ್ನು ಬಿಟ್ಟು ಸಾಗರನೊಂದಿಗೆ ನರಸಿಂಹವಾಡಿಯಲ್ಲಿ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಸಾಗರನಿಗೂ ಈ ಮೊದಲು ವಿವಾಹವಾಗಿತ್ತು.

ಇದನ್ನೂ ಓದಿ : ಅಮೀನಗಡ ಸರ್ಕಾರಿ ಆಸ್ಪತ್ರೆಗಿಲ್ಲ ಖಾಯಂ ವೈದ್ಯರು! ಇಲ್ಲಿಗೆ ಬಂದರೆ ನೀಡುತ್ತಾರೆ ಬರಿ ಮಾತ್ರೆ

ಗೀತಾ ಹಾಗೂ ಸಾಗರ ವಿವಾಹ ಬಳಿಕ ಇಬ್ಬರಲ್ಲಿಯೂ ಕೌಟುಂಬಿಕ ಕಲಹ ಇತ್ತು. ಆಗಾಗ ಸಣ್ಣ ಪುಟ್ಟ ವಿಷಯಕ್ಕೆ ಇಬ್ಬರೂ ಜಗಳವಾಡುತ್ತಿದ್ದರು. ಎರಡು ತಿಂಗಳ ಹಿಂದೆ ರಾತ್ರಿ ಹೊತ್ತಿನಲ್ಲಿ ಗೀತಾ ನಾಪತ್ತೆ ಆಗಿರುವುದಾಗಿ ಪತಿ ಸಾಗರ ದೂರು ನೀಡಿದ್ದನು. ಆದರೆ ಎಲ್ಲ ಕಡೆ ಹುಡುಕಾಡಿದರೂ ಗೀತಾ ಪತ್ತೆ ಆಗಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಕಾಗಲ್‌ ಪೊಲೀಸರಿಗೆ ಎರಡು ತಿಂಗಳ ಬಳಿಕ ನಿಪ್ಪಾಣಿಯಲ್ಲಿ ಮಹಿಳೆಯ ಮೃತದೇಹ ಇರುವುದು ಗೊತ್ತಾಗಿದೆ. ಅದರಂತೆ ನಿಪ್ಪಾಣಿಯ ಜತ್ರಾಟ ಸಮೀಪದ ಹೊಲದಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 32 ಹಾಗೂ 22 ವರ್ಷದ ಇಬ್ಬರನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಲಾಕ್‌ಡೌನ್‌ ವೇಳೆ ಕೆಲಸ ಇಲ್ಲದ್ದಕ್ಕೆ ಹೊಲದಲ್ಲಿ ಗೊಬ್ಬರ ಹಾಕುವ ನೆಪ ಮಾಡಿಕೊಂಡು ಆರೋಪಿಗಳು ಹೊಲದ ಮಾಲೀಕನ ಬಳಿ ಹೋಗಿದ್ದಾರೆ. ಅದರಂತೆ ಗೊಬ್ಬರ ಹಾಕುವ ನೆಪದಲ್ಲಿ ಮೃತದೇಹವನ್ನು ಇದೇ ಹೊಲದಲ್ಲಿ ಹೂತು ಹಾಕಿದ್ದಾರೆ ಎಂದು ತಿಳಿದು ಬಂದಿದೆ

ಇದನ್ನೂ ಓದಿ :ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್

ಮೊಬೈಲ್‌ ಮಾರಿದ್ದ ಆರೋಪಿಗಳು
ಮೃತ ಮಹಿಳೆ ಗೀತಾ ಬಳಿ ಇದ್ದ ಮೊಬೆ„ಲ್‌ ಅನ್ನು ಆರೋಪಿಗಳು ತೆಗೆದು ಕೊಂಡಿದ್ದರು. ಅನೇಕ ದಿನಗಳ ಕಾಲ ಈ ಮೊಬೆ„ಲ್‌ ಬಂದ್‌ ಆಗಿತ್ತು. ನಂತರ ನಿಪ್ಪಾಣಿ ಪಟ್ಟಣದ ಮೊಬೆ„ಲ್‌ ಅಂಗಡಿಯವನಿಗೆ ಅದನ್ನು ಮಾರಾಟ ಮಾಡಿದ್ದರು. ಈ ಅಂಗಡಿಯವ ಬೇರೆ ಗ್ರಾಹಕನಿಗೆ ಆ ಫೋನ್‌ ಮಾರಾಟ ಮಾಡಿದ್ದನು. ಗ್ರಾಹಕ ಮೊಬೆ„ಲ್‌ ಆನ್‌ ಮಾಡಿದಾಗ ಮೊಬೈಲ್‌ ಕೋಡ್‌ ಆಧಾರದ ಮೇಲೆ ಕಾಗಲ್‌ ಪೊಲೀಸರು ಮಾಹಿತಿ ಪಡೆದು ಗ್ರಾಹಕನ ಬಳಿ ಬಂದು ವಿಚಾರಣೆ ನಡೆಸಿದಾಗ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ರೂ, ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

ಜಂಬೂ ಸವಾರಿಗೆ ಸಿದ್ದವಾಗುತ್ತಿದೆ ಅಭಿಮನ್ಯು ನೇತೃತ್ವದ ಗಜಪಡೆ: ಇಲ್ಲಿದೆ ಆಕರ್ಷಕ ಚಿತ್ರಗಳು

ಜಂಬೂ ಸವಾರಿಗೆ ಸಿದ್ದವಾಗುತ್ತಿದೆ ಅಭಿಮನ್ಯು ನೇತೃತ್ವದ ಗಜಪಡೆ: ಇಲ್ಲಿದೆ ಆಕರ್ಷಕ ಚಿತ್ರಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಧರ್ಮದ ವಿರುದ್ಧ ಧರ್ಮದ ವಿಜಯ: ವಿಜಯ ದಶಮಿಯ ಶುಭ ಕೋರಿದ ಸಿಎಂ ಬಿಎಸ್ ವೈ

ಅಧರ್ಮದ ವಿರುದ್ಧ ಧರ್ಮದ ವಿಜಯ: ವಿಜಯ ದಶಮಿಯ ಶುಭ ಕೋರಿದ ಸಿಎಂ ಬಿಎಸ್ ವೈ

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

ಕೋವಿಡ್ ಎಚ್ಚರಿಕೆ ಮಧ್ಯೆ ಹೇಮಗುಡ್ಡದಲ್ಲಿ ದಸರಾ ಆಯುಧ ಪೂಜೆ

ಕೋವಿಡ್ ಎಚ್ಚರಿಕೆ ಮಧ್ಯೆ ಹೇಮಗುಡ್ಡದಲ್ಲಿ ದಸರಾ ಆಯುಧ ಪೂಜೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ರೂ, ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.