ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್
Team Udayavani, Jan 28, 2022, 11:59 AM IST
ಬೆಂಗಳೂರು : ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ್ ನಡುವಿನ ವಾಗ್ವಾದ ಮತ್ತೆ ಮುಂದುವರಿದಿದೆ.
ನಾನು ಯಾವುದೇ ಕಾರಣಕ್ಕೂ ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತ ಪಡಿಸಿಲ್ಲ.ನೆನ್ನೆ ಸಭೆಯಲ್ಲಿ ಈ ಯೋಜನೆ ಬಗ್ಗೆ ಸಂಪೂರ್ಣ ವಿವರ ಒದಗಿಸಿರಲಿಲ್ಲ. ಅದನ್ನಷ್ಟೇ ಕೇಳಿದ್ದೇನೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೂರ್ತಿ ವಿವರ ಸರಿಯಾಗಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೆ ಅಷ್ಟೇ.ಅದನ್ನು ಹೊರತುಪಡಿಸಿ ಮೋದಿ ಯೋಜನೆಯನ್ನು ವಿರೋಧ ವ್ಯಕ್ತ ಪಡಿಸಿದ್ದೇನೆ ಎಂಬುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಗೆ ಬಂದಿರುವ ಶಾಸಕರು ಕಾಂಗ್ರೆಸ್ ಗೆ ಮತ್ತೆ ವಾಪಸ್ ಹೋಗ್ತಾರೆಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮನೆಗೆ ಸೊಸೆ ಬಂದ ಮೇಲೆ ಅವರು ನಮ್ಮ ಮಗಳೇ. ಅದೇ ರೀತಿ ಕಾಂಗ್ರೆಸ್ ನಿಂದ ಬಂದವರು ನಮ್ಮ ಸಹೋದರರು. ಹೀಗಾಗಿ ನಾವೆಲ್ಲ ಸೇರಿ ಪಕ್ಷ ಮತ್ತಷ್ಟು ಬಲಪಡಿಸುತ್ತೇವೆ ಎಂದರು.
ಮುಂದಿನ ಚುನಾವಣೆಯನ್ನ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ. ಬೊಮ್ಮಾಯಿ ಸರ್ಕಾರವೇ ಆಡಳಿತಕ್ಕೆ ಬರಲಿದೆ. ನಾವೆಲ್ಲ ಹಿರಿಯ ಶಾಸಕರು. ನಾವು ಸಂದರ್ಭಗಳಿಗೆ ತಕ್ಕಂತೆ ನಡೆದುಕೊಂಡು ಹೋಗಬೇಕು.ಅದು ನಮ್ಮ ಜವಾಬ್ದಾರಿಯೂ ಕೂಡಾ. ಮಂತ್ರಿ ಸ್ಥಾನ ಸಿಕ್ಕಿಲ್ಲ, ಸಿಕ್ಕಿದೆ ಅಂತ ಹೇಳ್ಕೊಳ್ಳೋದಲ್ಲ.ನಾನು 25 ವರ್ಷಗಳಿಂದ ಶಾಸಕಾನಾಗಿದ್ದೇನೆ. ನನ್ನ ಅನುಭವವನ್ನು ಜನರಿಗೆ ತಿಳಿಸೋದ್ರಲ್ಲೇ ನನಗೆ ಸಂತೋಷ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಜಾಬ್ ನ ಮಾಜಿ ಕಾಂಗ್ರೆಸ್ ನಾಯಕ ಸುನೀಲ್ ಜಾಖಡ್ ಬಿಜೆಪಿ ಸೇರ್ಪಡೆ
ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್
ಎಲ್ಲಾ ಹುದ್ದೆಗೆ ಹಾರ್ದಿಕ್ ರಾಜೀನಾಮೆ;ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ
ಕುಟುಂಬ ರಾಜಕಾರಣದ ಆದ್ಯ ಪಿತಾಮಹ: ಬಿಜೆಪಿ ಟ್ವೀಟ್ ಕುಟುಕು, ಕುಮಾರಸ್ವಾಮಿ ಸಿಡುಕು
ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ