ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಆರಂಭಿಕ ಆಘಾತ ನೀಡಿದ ಪಾಕ್
Team Udayavani, Oct 24, 2021, 7:30 PM IST
ದುಬೈ : ಟಿ20 ವಿಶ್ವಕಪ್ ಕೂಟದ 2ನೇ ವಿಭಾಗದ ರವಿವಾರ ರಾತ್ರಿ ನಡೆಯುತ್ತಿರುವ ಜಿದ್ದಾಜಿದ್ದಿನ ಪಂದ್ಯದಲ್ಲಿ ಪಾಕಿಸ್ಥಾನ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿದೆ.
ಶಾಹೀನ್ ಅಫ್ರಿದಿ ಅವರ ಮೊದಲ ಓವರ್ ನಲ್ಲೆ ರೋಹಿತ್ ಶರ್ಮ ಅವರ ವಿಕೆಟ್ ಕಳೆದುಕೊಂಡಿದೆ.
ರೋಹಿತ್ ಶೂನ್ಯಕ್ಕೇ ಎಲ್ ಬಿ ಡಬ್ಲ್ಯೂ ಗೆ ಔಟಾದರು.
ಮೂರನೇ ಓವರ್ ನಲ್ಲಿ ಅಫ್ರಿದಿ ಅವರು ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರಾಹುಲ್ 3 ರನ್ ಗಳಿಸಿ ನಿರ್ಗಮಿಸಿದರು.
8 ಎಸತಗಳಿಂದ 11 ರನ್ ಗಳಿಸಿ ಭರವಸೆ ಮೂಡಿಸಿದ್ದ ಸೂರ್ಯಕುಮಾರ್ ಅವರು ಹಸನ್ ಅಲಿ ಎಸೆದ ಚೆಂಡನ್ನು ವಿಕೆಟ್ ಕೀಪರ್ ರಿಜ್ವಾನ್ ಕೈಗಿತ್ತು ನಿರ್ಗಮಿಸಿದರು.
ಭಾರತ 8.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದೆ. ನಾಯಕ್ ಕೊಹ್ಲಿ ಕ್ರೀಸ್ ನಲ್ಲಿದ್ದಾರೆ.
ನಾಯಕ ಕೊಹ್ಲಿ ಹಾಫ್ ಸೆಂಚುರಿ, ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 151 ರನ್ ಸಿಡಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ 152 ರನ್ ಟಾರ್ಗೆಟ್ ನೀಡಿದೆ.