ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ: ಹಂಸಲೇಖ ಟೀಕೆಗೆ ವಿಶ್ವಪ್ರಸನ್ನ ತೀರ್ಥರ ಪ್ರತಿಕ್ರಿಯೆ
Team Udayavani, Nov 15, 2021, 12:41 PM IST
ಉಡುಪಿ :’ಹಂಸಲೇಖ ಅವರ ಟೀಕೆಗಳಿಗೆ ನಾವು ಪ್ರತಿಭಟನೆ ಮಾಡಲು ಹೋಗುವುದಿಲ್ಲ, ಶ್ರೀಕೃಷ್ಣನೇ ಪ್ರತೀಕಾರ ಮಾಡುತ್ತಾನೆ’ ಎಂದು ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿಕೆ ನೀಡಿದ್ದಾರೆ.
‘ದಲಿತರ ಕೇರಿಯಲ್ಲಿ ಪೇಜಾವರ ಶ್ರೀಗಳು ಕುರಿ, ಕೋಳಿ ಮಾಂಸ ಕೊಟ್ಟರೆ ತಿನ್ನುತ್ತಿದ್ದರೆ’ ಎಂಬ ಹಂಸಲೇಖ ಅವರ ಟೀಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥರು,’ ಹಂಸಲೇಖ ಅವರಿಗೆ ಇಂತಹ ಹೇಳಿಕೆಯಿಂದ ಪ್ರಚಾರ ಬೇಕಿರಲಿಲ್ಲ.ಇಂತಹ ಮಾತುಗಳು ಅವರ ಬಾಯಿಯಿಂದ ಬರಬಾರದಿತ್ತು’ ಎಂದರು.
‘ಗುರುಗಳು(ವಿಶ್ವೇಶ ತೀರ್ಥ ಶ್ರೀಪಾದರು) ಎಂದೂ ಪ್ರಚಾರಕ್ಕಾಗಿ ಕೆಲಸ ಮಾಡಿದವರಲ್ಲ.ಕೇವಲ ವಿಗ್ರಹದಲ್ಲಿ ಮಾತ್ರವಲ್ಲ, ಎಲ್ಲರ ಹೃದಯದಲ್ಲಿ ಅವರು ಕೃಷ್ಣನನ್ನು ಕಂಡಿದ್ದರು.ಅವರು ಪ್ರಚಾರಕ್ಕಾಗಿ ದಲಿತರ ಮನೆಗಳಿಗೆ ಹೋಗಿರಲಿಲ್ಲ’ ಎಂದರು.
ಇದನ್ನೂ ಓದಿ : ಒಂದೇ ಕಾರ್ಯಕ್ರಮದಲ್ಲಿ ಹಲವರ ಆಕ್ರೋಶಕ್ಕೆ ಗುರಿಯಾದ ನಾದಬ್ರಹ್ಮ!
‘ಕೃಷ್ಣನಿಗೆ ಅಗ್ರಪೂಜೆ ಮಾಡುವ ವೇಳೆಯಲ್ಲಿ ಶಿಶುಪಾಲ ಟೀಕಿಸಿದ್ದ, ಅವನಿಗೆ ಕೃಷ್ಣನೇ ತಕ್ಕ ಶಾಸ್ತಿ ಮಾಡಿದ್ದ, ಅದೇ ರೀತಿಯಲ್ಲಿ ಶ್ರೀಕೃಷ್ಣನೇ ಪ್ರತೀಕಾರ ಮಾಡುತ್ತಾನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ: ಶೋಭಾ ಕರಂದ್ಲಾಜೆ
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T