ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು
Team Udayavani, Jan 16, 2022, 7:53 PM IST
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾನುವಾರ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಉಳಿದ ಭಾಗಗಳಲ್ಲಿ ಪ್ರಕರಣಗಳು ಹೆಚ್ಚಾದಂತೆ ರಾಜ್ಯದಲ್ಲಿ ಪಾಸಿಟಿವಿಟಿ ದರವು 19.29% ಕ್ಕೇರಿದೆ.
ಇಂದು ರಾಜ್ಯದಲ್ಲಿ 34,047 ಹೊಸ ಪ್ರಕರಣಗಳು ದೃಢ ಪಟ್ಟಿವೆ.ಬೆಂಗಳೂರಿನಲ್ಲಿ 21,017 ಹೊಸ ಪ್ರಕರಣಗಳು ದಾಖಲಾಗಿವೆ.
ಇಂದು ಒಟ್ಟು 5,902 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 1,97,982 ಸಕ್ರಿಯ ಪ್ರಕರಣಗಳಿದ್ದು ,ಬೆಂಗಳೂರಿನಲ್ಲಿ ಕಳವಳಕಾರಿ ಎಂಬಂತೆ 1 ಲಕ್ಷದ 46 ಸಾವಿರ ಪ್ರಕರಣಗಳಿವೆ.
ಇಂದು 13 ಮಂದಿ ಸೋಂಕಿತರು ರಾಜ್ಯದಲ್ಲಿ ಬಲಿಯಾಗಿದ್ದು, ಆ ಪೈಕಿ 05 ಮರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಇಂದು 1,76,470 ಮಂದಿಗೆ ಪರೀಕ್ಷೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಂಚೋಳಿ : ಒಂದು ವಾರದಿಂದ ಪಟೇಲ್ ಕಾಲೊನಿಯ ಜನರ ನಿದ್ದೆಗೆಡಿಸಿದ್ದ ಕಾಡು ಬೆಕ್ಕು ಸೆರೆ
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ : ರೈತರ ಬೆಳೆ ಹಾನಿ
ಬೆಂಗಳೂರು : ಶಾಪಿಂಗ್ ಮಾಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು
ಹೃದಯಾಘಾತದಿಂದ ಹಿರಿಯ ಕಾಂಗ್ರೆಸ್ ಮುಖಂಡ ಪಾಪೇಗೌಡ ನಿಧನ
ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ