ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
Team Udayavani, Nov 4, 2021, 11:17 AM IST
ಶ್ರೀನಗರ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ವರ್ಷದಂತೆ ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತಿದ್ದು, ಗುರುವಾರ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ನಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಹಬ್ಬದ ದಿನವನ್ನು ಕಳೆಯುತ್ತಿದ್ದಾರೆ.
ಗಡಿ ಪ್ರದೇಶವಾಗಿರುವ ನೌಶೇರಾ ಸೆಕ್ಟರ್ನಲ್ಲಿ ಇತ್ತೀಚೆಗೆ ಸೇನೆ ಮತ್ತು ಭಯೋತ್ಪಾದಕರ ನಡುವೆ ಭಾರಿ ಗುಂಡಿನ ಕಾಳಗ ನಡೆದಿತ್ತು.
ಅಧಿಕೃತ ಮೂಲಗಳು ನೌಶೇರಾದ ಸೇನಾ ಪೋಸ್ಟ್ನಲ್ಲಿ ಪ್ರಧಾನ ಮಂತ್ರಿಯವರು ಸೇನಾ ಪಡೆಗಳೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿವೆ.
ಇಂದು ಮುಂಜಾನೆ ಪ್ರಧಾನಿಯವರು ನೌಶೇರಾ ತೆರಳುವಾಗ, ದೆಹಲಿಯ ಮಾರ್ಗದಲ್ಲಿ ಕನಿಷ್ಠ ಭದ್ರತಾ ವ್ಯವಸ್ಥೆಗಳು ಮತ್ತು ಯಾವುದೇ ಸಂಚಾರ ನಿರ್ಬಂಧಗಳಿಲ್ಲ.