ಪುಣೆ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದರೋಡೆ
Team Udayavani, Aug 5, 2020, 7:32 PM IST
ಮಹಾರಾಷ್ಟ್ರ: ಬಸ್ಗಾಗಿ ಕಾಯುತ್ತಿದ್ದ 45 ವರ್ಷದ ಮಹಿಳೆಯನ್ನು ಲಿಫ್ಟ್ ಕೊಡುವ ನೆಪದಲ್ಲಿ ಅತ್ಯಾಚಾರ ನಡೆಸಿ, ದರೋಡೆಗೈದ ಪ್ರಕರಣ ಆ. 2ರಂದು ಸಂಭವಿಸಿದೆ. ಆರೋಪಿಯನ್ನು ದಶರಥ್ ಬನ್ಸೋಡ್(53) ಎನ್ನಲಾಗಿದ್ದು ಈತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪುಣೆ – ಸೋಲ್ಹಾಪುರ ಹೆದ್ದಾರಿಯ ಫಾತಿಮಾ ನಗರ ಬಳಿಯ ಲೋನಿ-ಕಲ್ಬೋರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಮಹಿಳೆ ಬಸ್ಗಾಗಿ ಕಾಯುತ್ತಿದ್ದರು. ಆಗ ದ್ವಿಚಕ್ರದ ವಾಹನದಲ್ಲಿ ಬಂದ ದಶರಥ್ ಬನ್ಸೋಡ್ (53) ಆಕೆಗೆ ಲಿಫ್ಟ್ ನೀಡುತ್ತೇನೆಂದು ಹೇಳಿ ಬೈಕಿನಲ್ಲಿ ಕುಳ್ಳಿರಿಸಿ ಮದುವೆ ಮಂಟಪದ ಕೋಣೆಯೊಂದಕ್ಕೆ ಕರೆೆದೊಯ್ದಿದ್ದಾನೆ. ಅಲ್ಲಿ ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾನೆ.
ಈ ಬಗ್ಗೆ ಮುಂಧವಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲು ಮಾಡಿದ್ದು, ಸೋಮವಾರ ಪೊಲೀಸರು ಬಂಧಿಸಿ ಆರೋಪಿಯ ಮೇಲೆ 376, 379 ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ