ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು
ಎನ್ ಎಸ್ ಇ ನಿಫ್ಟಿ ಶೇ.0.7ರಷ್ಟು ಏರಿಕೆಯೊಂದಿಗೆ 17,219 ಅಂಕಗಳ ಮಟ್ಟಕ್ಕೆ ತಲುಪಿದೆ.
Team Udayavani, Jan 28, 2022, 2:26 PM IST
ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಪಾಸಿಟಿವ್ ಟ್ರೆಂಡ್ ಪರಿಣಾಮ ಶುಕ್ರವಾರ (ಜನವರಿ 28) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 700ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆಯುತ್ತಿದೆ.
ಇದನ್ನೂ ಓದಿ:ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 730 ಅಂಕಗಳಷ್ಟು ಏರಿಕೆಯಾಗಿದ್ದು, 58,000 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ ಶೇ.0.7ರಷ್ಟು ಏರಿಕೆಯೊಂದಿಗೆ 17,219 ಅಂಕಗಳ ಮಟ್ಟಕ್ಕೆ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಎನ್ ಟಿಪಿಸಿ, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಸನ್ ಫಾರ್ಮಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಕೋಟಕ್ ಮಹೀಂದ್ರ, ವಿಪ್ರೋ, ಬಜಾಜ್ ಫೈನಾನ್ಸ್, ಟೈಟಾನ್ ಕಂಪನಿ, ಎಚ್ ಡಿಎಫ್ ಸಿ, ಐಟಿಸಿ, ಎಚ್ ಸಿಎಲ್ ಟೆಕ್, ಇನ್ಫೋಸಿಸ್, ಭಾರ್ತಿ ಏರ್ ಟೆಲ್, ಟಿಸಿಎಸ್, ಏಷ್ಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್, ಲಾರ್ಸನ್ ಷೇರುಗಳು ಲಾಭಗಳಿಸಿದೆ.
ಎಸ್ ಎಸ್ ಇ ನಿಫ್ಟಿ 50 ಷೇರುಗಳಾದ ಎನ್ ಟಿಪಿಸಿ, ಯುಪಿಎಲ್, ಒಎನ್ ಜಿಸಿ, ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ಟಾಟಾ ಸನ್ಸ್, ಐಒಸಿ, ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಐಟಿಸಿ, ಜೆಎಸ್ ಡಬ್ಲ್ಯು ಷೇರುಗಳು ಲಾಭ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಂಕ್ಗಳಿಗೆ ವಂಚನೆ ಶೇ. 51ರಷ್ಟು ಇಳಿಕೆ; ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ
ಬೆಲೆ ಇಳಿಕೆಗೆ ಕ್ರಮ: ಗೋಧಿ ರಫ್ತು ನಿಷೇಧಿಸಿದ ಭಾರತ, ಈರುಳ್ಳಿ ಬೀಜ ರಫ್ತು ನಿರ್ಬಂಧ ಸಡಿಲಿಕೆ
ಪ್ರತಿ ಎಲ್ಐಸಿ ಷೇರಿನ ಬೆಲೆ 949 ರೂ.ಗಳಿಗೆ ನಿಗದಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭದಲ್ಲಿ ಶೇ 41ರಷ್ಟು ಹೆಚ್ಚಳ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 136 ಅಂಕ ಇಳಿಕೆ; ಶೇ.22ರಷ್ಟು ಇಳಿಕೆ ಕಂಡ ಟ್ವಿಟರ್ ಷೇರು